ಕೂಡಿಗೆ, ಫೆ. ೪: ನಂಜರಾಯಪಟ್ಟಣ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಳೆದ ಒಂದು ವಾರದಿಂದ ಮೀನುಕೊಲ್ಲಿ ಮೀಸಲು ಅರಣ್ಯ ಪ್ರದೇಶ ವ್ಯಾಪ್ತಿಯಿಂದ ಬರುವ ಕಾಡು ಹಂದಿ ಮತ್ತು ಮುಳ್ಳು ಹಂದಿಗಳ ಹಾವಳಿಯಿಂದ ಅಡಿಕೆ ಗಿಡಗಳು ನಾಶವಾಗಿವೆ.

ನಂಜರಾಯಪಟ್ಟಣ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಾಡಾನೆಗಳ ಹಾವಾಳಿಯ ಜೊತೆಯಲ್ಲಿ ಇದೀಗ ಕಾಡುಹಂದಿ ಮತ್ತು ಮುಳ್ಳುಹಂದಿಗಳು ರೈತರ ಜಮೀನಿಗೆ ದಾಳಿ ಮಾಡುತ್ತಿದ್ದು, ಎರಡು ವರ್ಷಗಳ ಅವಧಿಯ ಅಡಿಕೆ ಗಿಡಗಳನ್ನು ಕಚ್ಚಿ, ತಿಂದು ಮುರಿತಗೊಳಿಸಿ ಭಾರೀ ನಷ್ಟಪಡಿಸಿವೆ.

ನಂಜರಾಯಪಟ್ಟಣ ಗ್ರಾಮ ಪಂಚಾಯಿತಿ ಅಧ್ಯಕ್ಷ ಸಿ.ಎಲ್. ವಿಶ್ವ, ತಿಲಕ್, ಯತೀಶ್, ಸೂರ್ಯಕುಮಾರ್, ಬಾಲಕೃಷ್ಣ, ಪವನ್ ಸೇರಿದಂತೆ ಅನೇಕ ರೈತರ ಜಮೀನುಗಳಿಗೆ ದಾಳಿ ಮಾಡಿರುವ ಮುಳ್ಳು ಹಂದಿ ಮತ್ತು ಕಾಡು ಹಂದಿಗಳು ಅಪಾರ ಪ್ರಮಾಣದ ಅಡಿಕೆ ಗಿಡಗಳನ್ನು ನಾಶಪಡಿಸಿವೆ.

ಸಂಬAಧಿಸಿದ ಅರಣ್ಯ ಇಲಾಖೆಯ ಅಧಿಕಾರಿ ವರ್ಗದವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಸೂಕ್ತವಾದ ಪರಿಹಾರವನ್ನು ಒದಗಿಸುವಂತೆ ರೈತರು ಆಗ್ರಹಿಸಿದ್ದಾರೆ.