ಮಡಿಕೇರಿ, ಫೆ. ೩: ಪಂಚ ಪರಿವರ್ತನೆಯ ಧ್ಯೇಯೋದ್ದೇಶದೊಂದಿಗೆ ಎಲ್ಲೆಡೆ ವಿರಾಟ ಹಿಂದೂ ಸಂಗಮ ಕಾರ್ಯಕ್ರಮ ನಡೆಯುತ್ತಿದ್ದು, ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ತಾ. ೭ರಂದು ಬೃಹತ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಮಡಿಕೇರಿ ನಗರ ಹಿಂದೂ ಸಂಗಮ ಆಯೋಜನಾ ಸಮಿತಿ ವತಿಯಿಂದ ಸಕಲ ಸಿದ್ಧತೆ ಮಾಡಿಕೊಳ್ಳಲಾಗುತ್ತಿದ್ದು, ನಗರದ ನಾಲ್ಕು ದಿಕ್ಕುಗಳಲ್ಲಿ ಏಕ ಕಾಲದಲ್ಲಿ ಸಭೆ ನಡೆಸಿ ಮೆರವಣಿಗೆ ಮೂಲಕ ತೆರಳಿ ಗಾಂಧಿ ಮೈದಾನದಲ್ಲಿ ಬೃಹತ್ ಸಮಾವೇಶ ನಡೆಯಲಿದೆ.

ನಾಲ್ಕು ವಸತಿಗಳು

ಕಾರ್ಯಕ್ರಮದಲ್ಲಿ ಎಲ್ಲರೂ ಪಾಲ್ಗೊಳ್ಳುವಂತಾಗಲು ನಗರದ ವಿವಿಧ ವಾರ್ಡ್ಗಳನ್ನೊಳಗೊಂಡು ನಾಲ್ಕು ವಿಭಾಗಗಳನ್ನಾಗಿ ಮಾಡಿ ಅದಕ್ಕೆ ವಸತಿ ಎಂದು ಹೆಸರಿಸಲಾಗಿದೆ. ಅಭಿಮನ್ಯು ವಸತಿ, ಛತ್ರಪತಿ, ಅಶ್ವಿನಿ ಹಾಗೂ ಸಮರ್ಥ ವಸತಿ ಎಂದು ನಾಮಕರಣ ಮಾಡಲಾಗಿದೆ.

ಅಭಿಮನ್ಯು ವಸತಿ

ಗೌಳಿಬೀದಿ, ಕೊಹಿನೂರು ರಸ್ತೆ, ಹೊಸ ಬಡಾವಣೆ, ವಿಜಯನಗರ, ವಿದ್ಯಾನಗರ, ಜ್ಯೋತಿನಗರ, ಇಂದಿರಾನಗರ, ಚಾಮುಂಡೇಶ್ವರಿ ನಗರವನ್ನೊಳಗೊಂಡ ಅಭಿಮನ್ಯು ವಸತಿಯ ಸಭೆ ತಾ. ೭ ರಂದು ಮಧ್ಯಾಹ್ನ ೨ ಗಂಟೆಗೆ ಸಂತ ಜೋಸೆಫರ ಶಾಲೆಯ ಆಟದ ಮೈದಾನದಲ್ಲಿ ನಡೆಯಲಿದೆ.

ಛತ್ರಪತಿ ವಸತಿ

ಶ್ರೀ ಓಂಕಾರೇಶ್ವರ ದೇವಾಲಯ ಆಸು ಪಾಸು, ದೇಚೂರು, ಚೈನ್‌ಗೇಟ್, ಗೌಡ ಸಮಾಜ, ಕನ್ನಂಡ ಬಾಣೆ, ಜೂನಿಯರ್ ಕಾಲೇಜು, ಪುಟಾಣಿ ನಗರ, ಸಂಪಿಗೆ ಕಟ್ಟೆ, ರಾಘವೇಂದ್ರ ದೇವಾಲಯವನ್ನೊಳಗೊಂಡAತೆ ಛತ್ರಪತಿ ವಸತಿಯ ಸಭೆ ಮೇಲಿನ ಗೌಡ ಸಮಾಜದಲ್ಲಿ ನಡೆಯಲಿದೆ.

ಅಶ್ವಿನಿ ವಸತಿ

ಸುದರ್ಶನ ಬಡಾವಣೆ, ಅಶೋಕಪುರ, ಮಂಗಳಾದೇವಿ ನಗರ, ಶಾಂತಿನಿಕೇತನವನ್ನೊಳಗೊAಡ ಅಶ್ವಿನಿ ವಸತಿಯ ಸಭೆ ರೋಟರಿ ಸಭಾಂಗಣದಲ್ಲಿ ನಡೆಯಲಿದೆ.

ಸಮರ್ಥ ವಸತಿ

ಮಹದೇವಪೇಟೆ, ಗಣಪತಿ ಬೀದಿ, ದಾಸವಾಳ, ಹಿಲ್ ರಸ್ತೆ, ಮುತ್ತಪ್ಪ ದೇವಾಲಯ, ಭಗವತಿನಗರ, ತ್ಯಾಗರಾಜ ಕಾಲೋನಿ, ಉಕ್ಕಡವನ್ನೊಳಗೊಂಡ ಸಮರ್ಥ ವಸತಿಯ ಸಭೆ ಮುತ್ತಪ್ಪ ದೇವಾಲಯ ಆವರಣದಲ್ಲಿ ನಡೆಯಲಿದೆ.

ಏಕ ಕಾಲದಲ್ಲಿ ಸಭೆ

ನಾಲ್ಕು ವಸತಿಗಳ ಸಭೆ ನಾಲ್ಕು ಕಡೆಗಳಲ್ಲಿ ಏಕ ಕಾಲದಲ್ಲಿ ನಡೆಯಲಿದೆ. ನಿಗದಿಪಡಿಸಿದ ಆಯಾ ಸ್ಥಳಗಳಲ್ಲಿ ಮಧ್ಯಾಹ್ನ ೨ಗಂಟೆಗೆ ಸಭೆ ನಡೆಯಲಿದೆ. ಸಭೆಯಲ್ಲಿ ದಿಕ್ಸೂಚಿ ಭಾಷಣ ಹಾಗೂ ಅಧ್ಯಕ್ಷರ ಭಾಷಣ ಇರಲಿದೆ.

ನಾಲ್ಕು ಕಡೆಗಳಿಂದ ಮೆರವಣಿಗೆ

ನಾಲ್ಕು ಕಡೆಗಳಲ್ಲಿ ಸಭೆ ನಡೆದ ಬಳಿಕ ನಾಲ್ಕು ಕಡೆಗಳಿಂದ ಏಕಕಾಲದಲ್ಲಿ ಮೆರವಣಿಗೆ ಹೊರಡಲಿದೆ. ಮಧ್ಯಾಹ್ನ ೩ಗಂಟೆಗೆ ಹೊರಡುವ ಮೆರವಣಿಗೆಯು ಸಂಜೆ ೪ ಗಂಟೆಗೆ ಚೌಕಿ ಹಾಗೂ ಹಳೆ ಖಾಸಗಿ ಬಸ್ ನಿಲ್ದಾಣಕ್ಕೆ ಆಗಮಿಸಿ ಅಲ್ಲಿ ಸಮಾಗಮಗೊಳ್ಳಲಿದೆ.

ಬೃಹತ್ ಶೋಭಾಯಾತ್ರೆ

ನಾಲ್ಕು ಕಡೆಗಳಿಂದ ಆಗಮಿಸುವ ಮೆರವಣಿಗೆ ಚೌಕಿ ಹಾಗೂ ಖಾಸಗಿ ಬಸ್ ನಿಲ್ದಾಣದಲ್ಲಿ ಸಮಾಗಮಗೊಂಡು ಅಲ್ಲಿಂದ ಮುಖ್ಯ ಬೀದಿಯಲ್ಲಿ ಬೃಹತ್ ಶೋಭಾಯಾತ್ರೆ ನಡೆಯಲಿದೆ. ೪ ಗಂಟೆಗೆ ಹೊರಡುವ ಶೋಭಾಯಾತ್ರೆ ಮುತ್ತಣ್ಣ ವೃತ್ತವನ್ನು ಹಾದು ಗಾಂಧಿ ಮೈದಾನಕ್ಕೆ ತೆರಳಿ ಅಲ್ಲಿ ಸಮಾವೇಶಗೊಳ್ಳಲಿದೆ. ನಂತರ ಸಂಜೆ ೫ ಗಂಟೆಗೆ ಸಭಾ ಕಾರ್ಯಕ್ರಮ ನಡೆಯಲಿದೆ.

ಮಂಟಪ-ಕಲಾ ತಂಡ

ಮೆರವಣಿಗೆಯಲ್ಲಿ ನಾಲ್ಕು ವಸತಿಗಳ ದೇಶಭಕ್ತಿ ಸಾರುವ ಮಂಟಪಗಳು, ಭಾರತಾಂಬೆಯ ಸ್ಥಬ್ಧ ಚಿತ್ರ, ಕಲಾತಂಡಗಳು, ದೇಶಭಕ್ತಿ ಗೀತೆ, ನೃತ್ಯ ಭಜನೆ, ಚಂಡೆ ವಾದ್ಯಗಳು ಗಮನ ಸೆಳೆಯಲಿವೆ. ಸಹಸ್ರಾರು ಸಂಖ್ಯೆಯಲ್ಲಿ ದೇಶಭಕ್ತರು ಸಂಗಮಗೊಳ್ಳಲಿದ್ದಾರೆ. - ಸಂತೋಷ್