ಕೂಡಿಗೆ, ಜ. ೯: ಕೂಡಿಗೆ ಜ್ಞಾನೋದಯ ಆಂಗ್ಲ ಮಾಧ್ಯಮ ಶಾಲೆಯ ೬ನೇ ತರಗತಿ ವಿದ್ಯಾರ್ಥಿ ಟಿ.ಪಿ. ಕುನಾಲ್ ಮಧ್ಯಪ್ರದೇಶದ ಇಂದೋರ್‌ನಲ್ಲಿ ನಡೆದ ೬೯ನೇ ರಾಷ್ಟçಮಟ್ಟದ ಕರಾಟೆ ಸ್ಪರ್ಧೆಯ ೨೦ ಕೆ.ಜಿ. ವಿಭಾಗದಲ್ಲಿ ಕಂಚಿನ ಪದಕವನ್ನು ಗಳಿಸಿದ್ದು, ಸ್ವಗ್ರಾಮಕ್ಕೆ ಹಿಂತಿರುಗುವಾಗ ಭವ್ಯ ಸ್ವಾಗತ ನೀಡಲಾಯಿತು.

ಯಡವನಾಡು ಗ್ರಾಮದ ಟಿ.ಕೆ. ಪ್ರಕಾಶ್ ಮತ್ತು ಹೇಮಾ ಅವರ ಪುತ್ರನಾಗಿದ್ದು, ಇವರಿಗೆ ಜ್ಞಾನೋದಯ ಶಾಲೆಯ ಕರಾಟೆ ತರಬೇತುದಾರ ಪ್ರಮೋದ್ ತರಬೇತಿ ನೀಡಿದ್ದಾರೆ. ಕಂಚಿನ ಪದಕ ವಿಜೇತ ಕುನಾಲ್ ಹಾಗೂ ತರಬೇತುದಾರ ಪ್ರಮೋದ್ ಅವರನ್ನು ಸನ್ಮಾನಿಸಿ, ಕೂಡಿಗೆಯ ವೃತ್ತದಿಂದ ಜ್ಞಾನೋದಯ ಶಾಲೆಯವರೆಗೆ ಮೆರವಣಿಗೆ ಮೂಲಕ ಕರೆ ತರಲಾಯಿತು. ನಂತರ ನಡೆದ ಕಾರ್ಯಕ್ರಮದಲ್ಲಿ ಕುಶಾಲನಗರ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ವಿ.ಪಿ. ಶಶಿಧರ್, ಕೂಡಿಗೆ ಪಂಚಾಯಿತಿ ಸದಸ್ಯ ಟಿ.ಪಿ. ಹಮೀದ್, ರಾಮೇಶ್ವರ ಸಹಕಾರ ಸಂಘದ ಉಪಾಧ್ಯಕ್ಷ ಬಸಪ್ಪ, ನಿರ್ದೇಶಕ ಕೆ.ಪಿ. ರಾಜು, ಜಿಲ್ಲಾ ದೈಹಿಕ ಶಿಕ್ಷಣ ಪರಿವೀಕ್ಷಕ ಡಾ. ಸದಾಶಿವಯ್ಯ ಎಸ್. ಪಲ್ಲೇದ್ ಹಾಗೂ ಇತರರು ಇದ್ದರು.