ಸುಂಟಿಕೊಪ್ಪ, ಜ. ೯: ಸಂಚಾರಿ ನಿಯಮಗಳನ್ನು ಪಾಲಿಸುವ ಮೂಲಕ ಪೊಲೀಸ್ ಇಲಾಖೆಯೊಂದಿಗೆ ಕೈಜೋಡಿಸಬೇಕೆಂದು ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಬಾರಿಕೆ ದಿನೇಶ್ ಕುಮಾರ್ ಕರೆ ನೀಡಿದರು.

ಸುಂಟಿಕೊಪ್ಪ ಗುಂಡುಗುಟ್ಟಿ ಮಂಜನಾಥಯ್ಯ ಮೀನಾಕ್ಷಮ್ಮ ಕಲ್ಯಾಣ ಮಂಟಪದಲ್ಲಿ ನಡೆದ ರಾಷ್ಟಿçÃಯ ರಸ್ತೆ ಸುರಕ್ಷತಾ ಸಪ್ತಾಹದ ಅಂಗವಾಗಿ ನಡೆದ ಆರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕೊಡಗು ಪ್ರವಾಸಿಗರ ತಾಣವಾಗಿದ್ದು, ಇಲ್ಲಿ ಬಂದು ಹೋಗುವ ಪ್ರವಾಸಿಗರನ್ನು ಹಾಗೂ ಸ್ಥಳೀಯವಾಗಿ ನಡೆಯುವ ಅಪರಾಧಗಳನ್ನು ತಡೆಗಟ್ಟಲು ಆಟೋ ಚಾಲಕರು ಜೀವಂತ ಸಿಸಿ ಕ್ಯಾಮರವಿದ್ದಂತೆ ಅವರ ಬಗ್ಗೆ ನಿಖರ ಮಾಹಿತಿಗಳನ್ನು ನಿಮ್ಮಿಂದ ಮಾತ್ರ ಪಡೆಯಲು ಸಾಧ್ಯವೆಂದು ದಿನೇಶ್ ಅಭಿಪ್ರಾಯಿಸಿದರು.

ವಾಹನ ಚಾಲನೆಯ ಸಂದರ್ಭ ಚಾಲನ ಪರವನಾಗಿ, ವಾಹನ ವಿಮೆ, ವಾಹನಗಳಿಗೆ ಸಂಬAಧಿಸಿದ ದಾಖಲಾತಿಗಳನ್ನು ಕಡ್ಡಾಯವಾಗಿ ಹೊಂದಿರಬೇಕು. ಅಪಘಾತಗಳು ಸಂಭವಿಸಿದಾಗ ದಾಖಲಾತಿ ಹೊಂದಿಲ್ಲದೆ ಇರುವ ಸಂದರ್ಭ ವಾಹನಗಳ ಮಾಲೀಕರಿಗೆ ದುಪ್ಪಟ್ಟು ದಂಡ ಅಥವಾ ಜೀವನ ಪರ್ಯಾಂತ ಜೈಲು ಶಿಕ್ಷೆ ಅಥವಾ ದಂಡ ವಿಧಿಸುವ ಅವಕಾಶವಿದೆ. ಪ್ರತಿಯೊಬ್ಬ ಚಾಲಕರು ವಾಹನಗಳ ಚಾಲನೆಯ ಸಂದರ್ಭ ನಿಯಮಗಳನ್ನು ಉಲಂಘಿಸದೆ ಸುರಕ್ಷಿತ ಚಾಲನೆಗೆ ಒತ್ತು ನೀಡಬೇಕೆಂದು ೆ ಕಿವಿಮಾತು ಹೇಳಿದರು. ವಾಹನ ಚಾಲನಾ ಸಂದರ್ಭದಲ್ಲಿ ಮೊಬೈಲ್ ಬಳಕೆ, ಮದ್ಯಪಾನ, ಮಾದಕ ವಸ್ತುಗಳ ಸೇವನೆ ಮಾಡಬೇಡಿ. ಅಜಾಗರೂಕತೆಯಿಂದ ವಾಹನ ಗಳನ್ನು ಚಲಾಯಿಸುವುದರಿಂದ ಅವಘಡಗಳು ಸಂಭವಿಸುತ್ತವೆ ಎಂದರು.

ಕುಶಾಲನಗರ ಗ್ರಾಮಾಂತರ ವೃತ್ತ ನಿರೀಕ್ಷಕ ದಿನೇಶ್ ಕುಮಾರ್ ಮಾತನಾಡಿ, ವಾಹನ ಚಾಲನೆಯ ರಸ್ತೆಯ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಸರಕು ಸಾಗಾಣಿಕೆ ವಾಹನಗಳಲ್ಲಿ ಪ್ರಯಾಣಿಕರನ್ನು ಕರೆದೊಯ್ಯವುದು ಅಪರಾಧ. ಸರಕು ವಾಹನಗಳು ಅಪಘಾತಕ್ಕೀಡಾದಾಗ ವಾಹನ ಚಾಲಕರು ಮತ್ತು ಮಾಲೀಕರೆ ಪ್ರಯಾಣಿಕರಿಗೆ ಸಂಪೂರ್ಣ ವೆಚ್ಚವನ್ನು ಭರಿಸಬೇಕಾಗುತ್ತದೆ. ಅವರಿಗೆ ಜೀವವಿಮೆ ಲಭಿಸುವುದಿಲ್ಲವೆಂದು ತಿಳಿಸಿದರು.

ಕೆಲವು ಆಟೋಗಳಲ್ಲಿ ನಿಯಮಕ್ಕಿಂತ ಅಧಿಕ ಮಕ್ಕಳನ್ನು ಕರೆದೊಯ್ಯುತ್ತಿರುವುದು ಕಂಡು ಬಂದಿದ್ದು ಮುಂದಿನ ದಿನಗಳಲ್ಲಿ ನಿಯಮವನ್ನು ಉಲ್ಲಂಘಿಸಿ ಅಧಿಕ ಮಕ್ಕಳನ್ನು ಕರೆದೊಯ್ಯುವ ಆಟೋಗಳ ವಿರುದ್ದ ನಿರ್ಧಾಕ್ಷಿಣ್ಯ ಕಾನೂನು ಕ್ರಮಗಳನ್ನು ಜರುಗಿಸಲಾಗುವುದು ಎಂದು ಎಚ್ಚರಿಸಿದರು.

ಆಟೋಗಳು ೧೫ ಕಿ.ಮೀ ವ್ಯಾಪ್ತಿ ಸಂಚರಿಸುವ ಪರವನಾಗಿ ಹೊಂದಿರುತ್ತದೆ. ಕುಶಾಲನಗರ ಹಾಗೂ ಮಡಿಕೇರಿ ಭಾಗಗಳಿಗೆ ತುರ್ತು ಅನಾರೋಗ್ಯ ಪೀಡಿತ ರೋಗಿಗಳನ್ನು ಜಿಲ್ಲಾಸ್ಪತ್ರೆ ಹಾಗೂ ಸಾರ್ವಜನಿಕ ಆರೋಗ್ಯ ಕೇಂದ್ರಗಳಿಗೆ ಕರೆದೊಯ್ಯುವ ಸಂದರ್ಭ ಪೊಲೀಸರು ದಂಡವನ್ನು ವಿಧಿಸುತ್ತಿದ್ದು, ಇದಕ್ಕೆ ವಿನಾಯಿತಿ ನೀಡುವಂತೆ ಚಾಲಕರು ಮನವಿ ಮಾಡಿದರು. ಈ ಸಂದರ್ಭ ವಾಹನ ಚಾಲಕರ ಸಂಘದ ಅಧ್ಯಕ್ಷ ಕಿಟ್ಟಣ್ಣ ರೈ, ಪದಾಧಿಕಾರಿಗಳು, ಆಟೋಚಾಲಕರು ಸಂಘದ ಪದಾಧಿಕಾರಿಗಳು, ಮತ್ತಿತರರು ಇದ್ದರು.