ವೀರಾಜಪೇಟೆ, ಜ. ೯: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ವೀರಾಜಪೇಟೆ ತಾಲೂಕು ವತಿಯಿಂದ ಮಾಯಮುಡಿ ವಲಯದ ಪೊನ್ನಪ್ಪಸಂತೆ ಕಾರ್ಯಕ್ಷೇತ್ರದ ರೈತ ಕ್ಷೇತ್ರ ಪಾಠಶಾಲೆ ಕಾರ್ಯಕ್ರಮದಡಿಯಲ್ಲಿ ನೆಲ-ಜಲ ಸಂರಕ್ಷಣೆ ಮಾಹಿತಿ ಕಾರ್ಯಕ್ರಮ ಶ್ರೀ ಶಕ್ತಿ ಸಮುದಾಯ ಭವನ ಪೊನ್ನಪ್ಪಸಂತೆಯಲ್ಲಿ ನಡೆಯಿತು.
ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ನಿವೃತ್ತ ಪ್ರೌಢಶಾಲಾ ಶಿಕ್ಷಕರಾದ ಸುಬ್ಬಮ್ಮ ಟಿ.ಆರ್. ಮಾತನಾಡಿ, ನೆಲ-ಜಲ ಸಂರಕ್ಷಣೆ ಎಂದರೆ ಭೂಮಿಯೊಳಗಿನ ನೀರಿನ ಸಂಪನ್ಮೂಲಗಳನ್ನು ರಕ್ಷಿಸುವುದು ಮತ್ತು ಸುಸ್ಥಿರವಾಗಿ ಬಳಸುವುದು. ಇದು ನೀರಿನ ಮೂಲಗಳ ಮಾಲಿನ್ಯವನ್ನು ತಡೆಗಟ್ಟಲು ಮತ್ತು ನೀರಿನ ಬಳಕೆಯನ್ನು ಕಡಿಮೆ ಮಾಡಲು ಕ್ರಮಗಳನ್ನು ಒಳಗೊಂಡಿರಬೇಕು. ನೆಲ-ಜಲ ಸಂರಕ್ಷಣೆಯ ಮಾರ್ಗಗಳನ್ನು ಹೊಂದಿರಬೇಕು. ಮಳೆ ನೀರು ಸಂಗ್ರಹಣೆ ನೀರಿನ ಬಳಕೆ ಕಡಿಮೆ ಮಾಡುವುದು, ನೀರಿನ ಮಾಲಿನ್ಯವನ್ನು ತಡೆಗಟ್ಟಬೇಕು ಎಂದು ಮಾಹಿತಿ ನೀಡಿದರು.
ಪೊನ್ನಪ್ಪಸಂತೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೃಷಿ ಸಖಿ ಪ್ರಿಯ ಮಾತನಾಡಿ, ಪಂಚಾಯಿತಿ ವ್ಯಾಪ್ತಿಯ ಕೃಷಿಕರಿಗೆ ಜಾಬ್ ಕಾರ್ಡ್ ಮಾಡಬೇಕು. ಇದಕ್ಕೆ ನೀಡಬೇಕಾದ ದಾಖಲೆಗಳ ಬಗ್ಗೆ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಕೃಷಿ ಮೇಲ್ವಿಚಾರಕ ವಸಂತ, ಪೊನ್ನಪ್ಪಸಂತೆ ಒಕ್ಕೂಟದ ಅಧ್ಯಕ್ಷ ಸೀನಾ, ಸೇವಾ ಪ್ರತಿನಿಧಿ ಬಿಂದು, ತಮಾನ ಬಾನು, ಪ್ರಗತಿಪರ ಕೃಷಿಕರು, ಸಂಘದ ಸದಸ್ಯರು, ಊರಿನ ಗ್ರಾಮಸ್ಥರು ಇದ್ದರು.