ಮಡಿಕೇರಿ, ಡಿ. ೨೬: ೧೨ನೇ ಬೋರ್ ಕೋವಿಯಲ್ಲಿ ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆಯ ಅಂತಿಮ ಹಂತ ತಲುಪಿದ್ದ ಐವರು ಸ್ಪರ್ಧಿಗಳು, ಈ ಐವರಲ್ಲಿ ಯಾರೂ ಗುರಿ ತಪ್ಪುತ್ತಿರಲಿಲ್ಲ. ಒಂದಲ್ಲ... ಎರಡಲ್ಲ... ಎಂಟು ಸುತ್ತಿನ ಸ್ಪರ್ಧೆ ಈ ಐವರ ನಡುವೆ ನಡೆದು ವಿಜೇತರನ್ನು ಆಯ್ಕೆ ಮಾಡಬೇಕಾದ ಅನಿವಾರ್ಯತೆ ಎದುರಾಗಿದ್ದು, ಶ್ರೀಮಂಗಲದಲ್ಲಿ ನಿನ್ನೆ ಟಿ. ಶೆಟ್ಟಿಗೇರಿ - ಶ್ರೀಮಂಗಲ ಶೂಟಿಂಗ್ ಕ್ಲಬ್ ವತಿಯಿಂದ ಜರುಗಿದ ತೋಕ್‌ನಮ್ಮೆ ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆಯ ವಿಶೇಷತೆಯಾಗಿತ್ತು.

ಜಿದ್ದಾಜಿದ್ದಿನ ಪೈಪೋಟಿಯ ನಡುವೆ ಕತ್ತಲು ಆವರಿಸಿದ ಕಾರಣ ಕಾರಿನ ಹೆಡ್‌ಲೈಟ್ ಆನ್ ಮಾಡಿ ಈ ಬೆಳಕಿನಲ್ಲಿ ಸ್ಪರ್ಧೆ ಪೂರೈಸಿದಾಗ ಆಯೋಜಕರು ನಿಟ್ಟುಸಿರು ಬಿಡುವಂತಾಗಿತ್ತು. ಆಯ್ಕೆಗೆ ಆಯೋಜಕರ ಚಡಪಡಿಕೆ ಒಂದೆಡೆಯಾದರೆ ನೂರಾರು ಸಂಖ್ಯೆಯಲ್ಲಿ ನೆರೆದಿದ್ದ ಪ್ರೇಕ್ಷಕರು ತುದಿಗಾಲಲ್ಲಿ ನಿಂತು ಫಲಿತಾಂಶಕ್ಕೆ ಕಾಯುವಂತಾಗಿತ್ತು.

ಫೈನಲ್ ತಲುಪಿದ್ದ ಐವರ ಪೈಕಿ ಅಂತಿಮವಾಗಿ ಮುದ್ದಂಡ ರಾಯ್ ತಮ್ಮಯ್ಯ, ಕಳ್ಳಂಗಡ ನವೀನ್, ಪೊಯಿಲೇಂಗಡ ಪಲ್ವಿನ್ ಪೂಣಚ್ಚ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದರೆ, ಚೋನಿರ ಸೋಮಣ್ಣ (ಸೋಕಿ) ಹಾಗೂ ವೇದಪಂಡ ಶರೀನ್ ಐದನೇ ಸ್ಥಾನಗಳಿಸಿದರು.

೪೦೦ ಸ್ಪರ್ಧಿಗಳು

ಟಿ. ಶೆಟ್ಟಿಗೇರಿ - ಶ್ರೀಮಂಗಲ ಶೂಟರ್ಸ್ ಕ್ಲಬ್ ವತಿಯಿಂದ ಶ್ರೀಮಂಗಲ ಕೊಡವ ಸಮಾಜದ ಆವರಣದಲ್ಲಿ ಐದನೇ ವರ್ಷದ ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆ ನಿನ್ನೆ ಜರುಗಿತು. .೨೨, ೧೨ನೇ ಬೋರ್, ಏರ್‌ಗನ್ ಹಾಗೂ ಸ್ಲಗ್ ಸೇರಿ ೪ ವಿಭಾಗದಲ್ಲಿ ಸ್ಪರ್ಧೆ ಜರುಗಿತು. ೪೦೦ ಮಂದಿ ನೋಂದಾಯಿಸಿಕೊAಡಿದ್ದು, ವಿವಿಧ ವಿಭಾಗಗಳಲ್ಲಿ ಸೇರಿ ೭೮೪ ಮಂದಿ ಸ್ಪರ್ಧೆ ಮಾಡಿದ್ದರು.

ಬೆಳಿಗ್ಗೆ ಶೂಟರ್ಸ್ ಕ್ಲಬ್‌ನ ಅಧ್ಯಕ್ಷ ತಡಿಯಂಗಡ ಕರುಂಬಯ್ಯ ಅಧ್ಯಕ್ಷತೆಯಲ್ಲಿ ಉದ್ಘಾಟನಾ ಸಮಾರಂಭ ನಡೆಯಿತು. ಮುಖ್ಯ ಅತಿಥಿಗಳಾಗಿ ರೂಟ್ಸ್ ವಿದ್ಯಾಸಂಸ್ಖೆಯ ಮಲ್ಲಂಗಡ ನಿರನ್ ಪಾಲ್ಗೊಂಡಿದ್ದರು. ೧೨ನೇ ಬೋರ್ ಸ್ಪರ್ಧೆಯನ್ನು ಕುಂಞAಗಡ ದಿನೇಶ್, .೨೨ ಸ್ಪರ್ಧೆಯನ್ನು ಪೊಯಿಲೇಂಗಡ ಪಲ್ವಿನ್ ಹಾಗೂ ಏರ್‌ಗನ್ ಸ್ಪರ್ಧೆಯನ್ನು ತಡಿಯಂಗಡ ಸೌಮ್ಯ ಉದ್ಘಾಟಿಸಿದರು. ಬೆಳಿಗ್ಗೆಯಿಂದ ಸಂಜೆ ೭.೩೦ ರ ತನಕ ಸ್ಪರ್ಧೆ ಮುಂದುವರಿದಿತ್ತು.

ವಿಜೇತರು: .೨೨ ಸ್ಪರ್ಧೆಯಲ್ಲಿ ಚಿರಂತ್ ಡಿ ಹಸನ್ ಪ್ರಥಮ, ಪುತ್ತರಿರ ನಂಜಪ್ಪ ದ್ವಿತೀಯ ಹಾಗೂ ಆದಿತಿ ಕುಟ್ಟಂಡ ೪ಆರನೇ ಪುಟಕ್ಕೆ

(ಮೊದಲ ಪುಟದಿಂದ) ತೃತೀಯ ಸ್ಥಾನದೊಂದಿಗೆ ತಲಾ ರೂ. ೨೫ ಸಾವಿರ, ೨೦ ಸಾವಿರ ಹಾಗೂ ರೂ. ೧೫ ಸಾವಿರ ನಗದು ಹಾಗೂ ಟ್ರೋಫಿಗಳಿಸಿದರು. ೧೨ನೇ ಬೋರ್ ವಿಜೇತರಾದ ಮುದ್ದಂಡ ರಾಯ್, ಕಳ್ಳಂಗಡ ನವೀನ್ ಹಾಗೂ ಪೊಯಿಲೇಂಗಡ ಪಲ್ವಿನ್ ತಲಾ ರೂ. ೨೦ ಸಾವಿರ, ರೂ. ೧೫ ಸಾವಿರ ಹಾಗೂ ರೂ. ೧೦ ಸಾವಿರ ಬಹುಮಾನ ಪಡೆದರು. ಸ್ಲಗ್‌ವಿಭಾಗದಲ್ಲಿ ಶಿಜು ಮಂಡ್ಯ, ಗೌತಮ್ ಅಜ್ಜೇಟಿರ ಹಾಗೂ ಗಯಾ ಗಣಪತಿ ವಿಜೇತರಾಗಿ ತಲಾ ರೂ. ೧೫ ಸಾವಿರ, ರೂ. ೧೦ ಸಾವಿರ ಹಾಗೂ ರೂ. ೭ ಸಾವಿರ ನಗದು ಬಹುಮಾನ ಗಳಿಸಿದರು.

ಏರ್‌ಗನ್ ವಿಭಾಗದಲ್ಲಿ ಪುತ್ತರಿರ ನಂಜಪ್ಪ, ರವಿಕೀರ್ತಿ ಹಾಗೂ ಚೀಯಕಪೂವಂಡ ಜೀವನ್ ವಿಜೇತರಾಗಿ ತಲಾ ರೂ. ೧೦ ಸಾವಿರ, ರೂ. ೭ ಸಾವಿರ ಹಾಗೂ ರೂ. ೫ ಸಾವಿರ ನಗದು ಬಹುಮಾನಗಳಿಸಿದರು. ವಿವಿಧ ವಿಭಾಗಗಳ ಬಹುಮಾನ ಪ್ರಾಯೋಜಿಸಿದ್ದ ದಾನಿಗಳು ಬಹುಮಾನ ವಿತರಿಸಿದರು. ಶೂಟರ್ಸ್ ಕ್ಲಬ್‌ನ ಅಧ್ಯಕ್ಷ ತಡಿಯಂಗಡ ಕರುಂಬಯ್ಯ, ಉಪಾಧ್ಯಕ್ಷ ಕೋಟ್ರಮಾಡ ಮಂಜು ಸೇರಿದಂತೆ ಇತರ ಪದಾಧಿಕಾರಿಗಳು ಪಾಲ್ಗೊಂಡಿದ್ದರು. ಅಧಿಕ ಸಂಖ್ಯೆಯಲ್ಲಿ ಪ್ರೇಕ್ಷಕರೂ ಭಾಗವಹಿಸಿದ್ದರು.