ಸಿದ್ದಾಪುರ, ಡಿ. ೨೬: ಸಿದ್ದಾಪುರದ ಶ್ರೀ ದುರ್ಗಾ ಭಗವತಿ ದೇವಾಲಯದ ವಾರ್ಷಿಕ ತಿರು ಮಹೋತ್ಸವ ಅಂಗವಾಗಿ ಪೂಜಾ ಕಾರ್ಯ ಜ. ೩ ರಿಂದ ೬ ರವರೆಗೆ ನಡೆಯಲಿದೆ ಎಂದು ದೇವಾಲಯದ ಮುಖ್ಯಸ್ಥ ಎ.ಎನ್. ರಸಿದ ತಿಳಿಸಿದ್ದಾರೆ.

ಕೇರಳ ರಾಜ್ಯದ ತಲೋರ ತಳಿಪರಂಬ್ ಜಿಲ್ಲೆಯ ರಾಜರಾಜೇಶ್ವರಿ ದೇವಾಲಯದ ತಂತ್ರಿಗಳಾದ ಬ್ರಹ್ಮಶ್ರೀ ಈಡವಲತ್ ಪುಡಯೂರ್ ಮನ ಕುಬೇರನ್ ನಂಬೂದರಿ ಪಾಡ್ ತಂತ್ರಿಗಳ ನೇತೃತ್ವದಲ್ಲಿ ಜ ೩ ರಂದು ಸಂಜೆ ೫.೩೦ ರಿಂದ ಪುಣ್ಯಾಹ. ಪ್ರಾಸ ಶುದ್ಧಿ, ವಾಸ್ತು ಬಲಿ, ದೀಪಾ ಆರಾಧನೆ, ತ್ರಿಕೊಡಿಯೆಟಂ. ಅತ್ತಾಯ ಪೂಜಾ, ಮಹಾಪೂಜೆ ಬಳಿಕ ಅನ್ನ ಸಂತರ್ಪಣೆ ನಡೆಯಲಿದೆ.

ತಾ.೪ ರಂದು ಬೆಳಿಗ್ಗೆ ಮಹಾ ಗಣಪತಿ ಹೋಮ, ಉಷಾ ಪೂಜೆ, ಮಹಾಸುದರ್ಶನ ಹೋಮ, ಮಹಾ ಮೃತ್ಯುಂಜಯ ಹೋಮ, ನವಕಂ, ಪಂಚಗವ್ಯA, ಕಳಶ ಅಭಿಷೇಕ, ಮಹಾಪೂಜೆ,ಅನ್ನಸಂತರ್ಪಣೆ ಸಂಜೆ ಭಗವತಿ ಸೇವೆ, ದೀಪಾ ಆರಾಧನೆ, ಸಹಸ್ರ ದೀಪಾ, ಮಹಾಪೂಜೆ, ಅನ್ನಸಂತರ್ಪಣೆ ನಡೆಯಲಿದೆ. ತಾ. ೫ ರಂದು ಬೆಳಿಗ್ಗೆ ಮಹಾಗಣಪತಿ ಹೋಮ, ಉಷಾ ಪೂಜೆ, ಗುಳಿಗ, ನಾಗದೇವರಿಗೆ ಪೂಜೆ, ನವಗಂ, ಪಂಚಗವ್ಯ, ಕಳಶ ಅಭಿಷೇಕ (ದೇವರಿಗೆ ಪೊಂಗಾಲ) ಮಹಾಪೂಜೆ, ಸಂಜೆ ದೀಪಾರಾಧನೆ ಅನ್ನ ಸಂತರ್ಪಣೆ ನಡೆಯಲಿದೆ. ತಾ. ೬ ರಂದು ಬೆಳಿಗ್ಗೆ ಗಣಪತಿ ಹೋಮ ಉಷಾ ಪೂಜೆ, ನವಗಂ, ಪಂಚಗವ್ಯ, ಕಲಶಾಭಿಷೇಕ, ಮಹಾಪೂಜೆ, ಅನ್ನಸಂತರ್ಪಣೆ, ಸಂಜೆ ೫:೩೦ ಗಂಟೆಗೆ ಬಲಿಬಿಂಬದ ಮೆರವಣಿಗೆ, ದೀಪಾರಾಧನೆ, ಅತ್ತಾಯ ಪೂಜೆ, ತ್ರಿಕೋಡಿಎರಕಂ ಬಳಿಕ ಅನ್ನಸಂತರ್ಪಣೆ ನಡೆಯಲಿದೆ ಎಂದು ಮಾಹಿತಿ ನೀಡಿದ್ದಾರೆ.