ಸುಂಟಿಕೊಪ್ಪ, ಡಿ. ೨೬: ಸುಂಟಿಕೊಪ್ಪ ಸರ್ಕಾರಿ ಪ್ರಾಥಮಿಕ, ಪ್ರೌಢಶಾಲೆ ಮತ್ತು ಪಿ.ಯು. ಕಾಲೇಜಿನ ಹಳೆಯ ವಿದ್ಯಾರ್ಥಿಗಳ ಚಡ್ಡಿದೋಸ್ತ್ ಬಳಗದ ವತಿಯಿಂದ ಗುಡ್ಡೆಹೊಸೂರು ಐಚೆಟ್ಟೀರ ನರೇನ್ ಸೋಮಯ್ಯ ಸ್ಪೋರ್ಟ್ಸ್ ಸೆಂಟರ್ ಮೈದಾನದಲ್ಲಿ ಆಯೋಜಿಸಿದ್ದ ೭ನೇ ವರ್ಷದ ಟೆನಿಸ್ ಬಾಲ್ ಕ್ರಿಕೆಟ್ ಸೌಹಾರ್ದ ಟೂರ್ನಿಯಲ್ಲಿ ಕೊಡಗು ಜಿಲ್ಲಾ ಶಿಕ್ಷಕರ ತಂಡ ಪ್ರಥಮ ಸ್ಥಾನ ಪಡೆದುಕೊಂಡರೆ, ಕೊಡಗು ಪೊಲೀಸ್ ತಂಡ ದ್ಚಿತೀಯ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿತು.
ಟೆನಿಸ್ ಬಾಲ್ ಕ್ರಿಕೆಟ್ ಲೀಗ್ ಪಂದ್ಯದಲ್ಲಿ ಚಡ್ಡಿದೋಸ್ತ್ ಎ ಮತ್ತು ಬಿ ತಂಡ, ಕೊಡಗು ಶಿಕ್ಷಕರ ತಂಡ, ಕೊಡಗು ಪೊಲೀಸ್ ತಂಡ ಮತ್ತು ಕೊಡಗು ಪ್ರೆಸ್ ಕ್ಲಬ್ ತಂಡಗಳು ಭಾಗವಹಿಸಿದ್ದವು.
ಕೊಡಗು ಶಿಕ್ಷಕರ ತಂಡ ಮತ್ತು ಕೊಡಗು ಪೊಲೀಸ್ ತಂಡಗಳ ನಡುವೆ ನಡೆಯಿತು. ಕೊಡಗು ಶಿಕ್ಷಕರ ತಂಡ ವಿಜಯದ ನಗೆಯೊಂದಿಗೆ ಸತತ ಐದನೇ ಬಾರಿ ಚಡ್ಡಿದೋಸ್ತ್ ಟ್ರೋಫಿಯನ್ನು ತನ್ನದಾಗಿಸಿಕೊಂಡಿತು.
ನAತರ ನಡೆದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಬೆಂಗಳೂರಿನ ಸಿದ್ದಾಪುರ ಪೊಲೀಸ್ ಠಾಣೆಯ ಪಿಎಸ್‌ಐ ಬಿ.ಟಿ. ಕಿಶೋರ್ ಅವರು, ಇದೊಂದು ಅಪರೂಪದ ಕ್ಷಣ. ಎಲ್ಲ ಗೆಳೆಯರನ್ನು ಕಾಣುವ ಸದಾವಕಾಶದೊಂದಿಗೆ ಕ್ರೀಡಾ ಮನೋಭಾವನೆ ಬೆಳೆಯಲು ಸಹಕಾರವಾಗಿದೆ ಎಂದರು.
ಚಡ್ಡಿದೋಸ್ತ್ ಬಳಗದ ನಿಕಟಪೂರ್ವ ಅಧ್ಯಕ್ಷ ಕೆ.ಎಲ್. ನವೀನ್ ಮಾತನಾಡಿ, ಕ್ರೀಡಾಕೂಟ ಒಂದು ನೆಪಮಾತ್ರ. ತಮ್ಮ ಸಹಪಾಠಿಗಳನ್ನು ಒಂದೆಡೇ ಸೇರಿಸುವ ಬಾಂಧವ್ಯ ಕೊಂಡಿಯಾಗಿದೆ. ವಿದ್ಯಾಭ್ಯಾಸ ಮುಗಿಸಿ ಹೊರಹೋದ ನಂತರ ಮತ್ತೇ ಒಟ್ಟುಗೂಡಿಸುವುದು ಬಹಳ ಕಷ್ಟದ ಕೆಲಸ. ಆದರೂ ಚಡ್ಡಿದೋಸ್ತ್ ಹೆಸರಿನ ಮೂಲಕ ಸೇರಿಸುವ ಪ್ರಯತ್ನದಲ್ಲಿ ಒಂದಾಗಿದ್ದೇವೆ ಎಂದರು. ಪಂದ್ಯ ಪುರುಷೋತ್ತಮ ಪ್ರಶಸ್ತಿ ಮತ್ತು ಸರಣಿ ಪುರುಷೋತ್ತಮ ಪ್ರಶಸ್ತಿಯನ್ನು ಶಿಕ್ಷಕ ತಂಡದ ಆಟಗಾರ ಮಂಜು ಪಡೆದುಕೊಂಡರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಚಡ್ಡಿದೋಸ್ತ್ ಬಳಗದ ಸ್ಥಾಪಕಾಧ್ಯಕ್ಷ ಮೋಹನ್ ವಹಿಸಿದ್ದರು.
ಸೌಹಾರ್ದ ಕ್ರಿಕೆಟ್ ಟೂರ್ನಿಗೆ ಗುಡ್ಡೆಹೊಸೂರು ಐಎನ್‌ಎಸ್ ಅಕಾಡೆಮಿ ಮಾಲೀಕ ಐಚೆಟ್ಟೀರ ಸೋಮಯ್ಯ ಚಾಲನೆ ನೀಡಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಚಡ್ಡಿದೋಸ್ತ್ ಬಳಗದ ನವೀನ್ ವಹಿಸಿದ್ದರು.
ಚಡ್ಡಿದೋಸ್ತ್ ಬಳಗದ ಕಾರ್ಯದರ್ಶಿ ಕೆ.ಎಂ. ವಿನೋದ್, ಖಜಾಂಚಿ ಹರೀಶ್, ಉಪಾಧ್ಯಕ್ಷ ಮಣಿ, ಬಳಗದ ಉಮ್ಮರ್ ಮಾಸ್ಟರ್, ರಾಘವೇಂದ್ರ, ರಾಕೇಶ್, ಅರುಣ್ ರೈ ಚಂದ್ರ, ಹೇಮಂತ್, ಹೇಮಂತ್, ಸಂದೀಪ್, ಚಂಗಪ್ಪ, ಉಮ್ಮರ್, ರಫೀಕ್ ಬೋಯಿಕೇರಿ ಸೇರಿದಂತೆ ಇತರರು ಇದ್ದರು.