ಮಡಿಕೇರಿ, ಡಿ. ೨೬: ಮಡಿಕೇರಿಯ ಕೊಡಗು ಗೌಡ ಸಮಾಜದ ಮೂರು ವರ್ಷಗಳ ಅವಧಿಯ ಆಡಳಿತ ಮಂಡಳಿಗೆ ೧೫ ಮಂದಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ದಂಬೆಕೋಡಿ ಆನಂದ, ಸೂರ್ತಲೆ ಸೋಮಣ್ಣ, ಹುದೇರಿ ರಾಜೇಂದ್ರ, ಕೊಲ್ಯದ ಗಿರೀಶ್, ಮಂದ್ರಿರ ತೇಜಸ್, ಪುಳಕಂಡ ಸಂದೀಪ್, ಕೊಂಬನ ಪ್ರವೀಣ್, ಪೊನ್ನಚ್ಚನ ಮಧು, ತೋಟಂಬೈಲು ಅನಂತ ಕುಮಾರ್, ಪೈಕೇರ ಮನೋಹರ ಮಾದಪ್ಪ, ಕಾಳೇರಮ್ಮನ ನಂದಕುಮಾರ್, ಆಮೆ ಸೀತಾರಾಮ್, ಪೇರಿಯನ ಘನ ಶ್ಯಾಮ್, ಮಹಿಳಾ ತಂಡದಿAದ ಚೊಕ್ಕಾಡಿ ಪ್ರೇಮ ರಾಘವಯ್ಯ ಹಾಗೂ ಮೂಲೆಮಜಲು ಅಮಿತಾ ಆಯ್ಕೆಯಾದರು.

ಗೌಡ ಸಮಾಜದ ಸಭಾಂಗಣದಲ್ಲಿ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ಚುನಾವಣಾಧಿಕಾರಿಯಾಗಿ ಪಾಣತ್ತಲೆ ಪಳಂಗಪ್ಪ ಕಾರ್ಯನಿರ್ವಹಿಸಿದರೆ, ಕೊಡಗು ಗೌಡ ಸಮಾಜಗಳ ಒಕ್ಕೂಟ ಸಹಕಾರ ನೀಡಿತು. ನಿಕಟಪೂರ್ವ ಅಧ್ಯಕ್ಷÀ ಪೇರಿಯನ ಜಯಾನಂದ, ಕೊಡಗು ಗೌಡ ಸಮಾಜಗಳ ಒಕ್ಕೂಟದ ಅಧ್ಯಕ್ಷ ಆನಂದ ಕರಂದ್ಲಾಜೆ, ಉಪಾಧ್ಯಕ್ಷ ತೇನನ ರಾಜೇಶ್, ಕಾರ್ಯದರ್ಶಿ ಪೇರಿಯನ ಉದಯಕುಮಾರ್, ಕುಶಾಲನಗರ ಗೌಡ ಸಮಾಜದ ಅಧ್ಯಕ್ಷ ಚಿಲ್ಲನ ಗಣಿ ಪ್ರಸಾದ್ ಮತ್ತಿತರರು ಉಪಸ್ಥಿತರಿದ್ದರು.

ನಂತರ ಮಾತನಾಡಿದ ಒಕ್ಕೂಟದ ಅಧ್ಯಕ್ಷ ಆನಂದ ಕರಂದ್ಲಾಜೆ, ಜನಾಂಗದ ಹೆಮ್ಮೆಯ ಪ್ರತಿಷ್ಠಿತ ಮಡಿಕೇರಿಯ ಕೊಡಗು ಗೌಡ ಸಮಾಜದ ಮೂರು ವರ್ಷಗಳ ಅವಧಿಯ ಆಡಳಿತ ಮಂಡಳಿಯ ಆಯ್ಕೆ ಮಾದರಿ ಎಂಬAತೆ ನಡೆದಿದೆ ಎಂದರು.