ಕೂಡಿಗೆ, ಡಿ. ೨೬: ಹುದುಗೂರು ಗ್ರಾಮದ ಶ್ರೀ ಕಾಳಿಕಾಂಬಾ ಯುವಕ ಸಂಘದ ವತಿಯಿಂದ ಪ್ರಥಮ ವರ್ಷದ ಲೀಗ್ ಮಾದರಿಯ ಹೊನಲು ಬೆಳಕಿನ ವಾಲಿಬಾಲ್ ಕಪ್ - ೨೦೨೫. ಪಂದ್ಯಾಟದಲ್ಲಿ ಆರ್.ಕೆ. ಸ್ಟೆçöÊಕರ್ಸ್ ಮಲ್ಲೇನಹಳ್ಳಿ ತಂಡ ಪ್ರಥಮ ಸ್ಥಾನ ಪಡೆದು ನಗದು ಹಾಗೂ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು.

ದ್ವಿತೀಯ ಸ್ಥಾನ ಟೀಮ್ ಆಗಸ್ತö್ಯ, ತೃತೀಯ ಹುದುಗೂರು ಕಾಳಿಕಾಂಬಾ ತಂಡ, ಚತುರ್ಥ ಸ್ಥಾನವನ್ನು ಟೀಮ್ ಲಾಲಿ ಬ್ಯಾಡಗೊಟ್ಟ ತಂಡ ಪಡೆದುಕೊಂಡಿತು. ವಿಜೇತ ತಂಡಗಳಿಗೆ ಹುದುಗೂರು ಗ್ರಾಮದ ಮಾಜಿ ಸೈನಿಕ ಸಿ.ಎಲ್. ಭರತ್ ಬಹುಮಾನವನ್ನು ವಿತರಿಸಿದರು.

ಈ ಸಂದರ್ಭದಲ್ಲಿ ಕಾಳಿಕಾಂಬಾ ಯುವಕ ಸಂಘದ ಅಧ್ಯಕ್ಷ ಐ.ಜಿ. ಶರತ್, ಉಪಾಧ್ಯಕ್ಷ ಕೆ.ಡಿ. ಕಾರ್ತಿಕ್, ಕಾರ್ಯದರ್ಶಿ ಟಿ.ಎಸ್. ಚಂದ್ರಕಾAತ್, ಖಜಾಂಚಿ ಸಿ.ಎಸ್. ನವೀನ್, ಗ್ರಾಮ ಪಂಚಾಯಿತಿ ಸದಸ್ಯ ಹೆಚ್.ಎಸ್. ರವಿ ಸೇರಿದಂತೆ ಸಂಘದ ಸದಸ್ಯರು, ಲೀಗ್ ಪಂದ್ಯಾಟದ ೮ ತಂಡಗಳ ಆಟಗಾರರು, ಗ್ರಾಮಸ್ಥರು ಇದ್ದರು.