ಕೋಲ್ಕತ್ತಾ, ಡಿ. ೧೩: ಇಂದು ಇಲ್ಲಿನ ಸಾಲ್ಟ್ ಲೇಕ್ ಕ್ರೀಡಾಂಗಣ ಅಕ್ಷರಶಃ ರಣರಂಗದAತಾಗಿತ್ತು ಅರ್ಜೆಂಟೀನಾದ ಫುಟ್ಬಾಲ್ ಐಕಾನ್ ಲಿಯೋನೆಲ್ ಮೆಸ್ಸಿಯನ್ನು ನೋಡಲು ಭಾರಿ ಮೊತ್ತ ಪಾವತಿಸಿ ಟಿಕೆಟ್ ಖರೀದಿಸಿ ಬಂದಿದ್ದ ಪ್ರೇಕ್ಷಕರು, ಆಟಗಾರನನ್ನು ಮೈದಾನದಲ್ಲಿ ನೋಡಲು ಸಾಧ್ಯವಾಗದಿದ್ದಾಗ ಆಕ್ರೋಶಗೊಂಡು ಮೈದಾನಕ್ಕೆ ಏಕಾಏಕಿ ನುಗ್ಗಿ ಕುರ್ಚಿಗಳನ್ನು, ಕೈಗೆ ಸಿಕ್ಕ ವಸ್ತುಗಳನ್ನು ಎಸೆದು ಪುಡಿಮಾಡಿದ ಘಟನೆ ನಡೆಯಿತು.

ಲಿಯೋನೆಲ್ ಮೆಸ್ಸಿ ಇಂದು ಬೆಳಿಗ್ಗೆ ೧೧.೩೦ ರ ಸುಮಾರಿಗೆ ವಿವೇಕಾನಂದ ಯುವ ಭಾರತಿ ಕ್ರೀಡಾಂಗಣಕ್ಕೆ ಸ್ರೆö್ಟöÊಕರ್ ಲೂಯಿಸ್ ಸುವಾರೆಜ್ ಮತ್ತು ಅರ್ಜೆಂಟೀನಾ ತಂಡದ ಸಹ ಆಟಗಾರ ರೊಡ್ರಿಗೋ ಡಿ ಪಾಲ್ ಅವರೊಂದಿಗೆ ಆಗಮಿಸಿದರು, ಮೊದಲು ಮೈದಾನಕ್ಕೆ ಇಳಿದರು. ಅಲ್ಲಿ ಸ್ವಲ್ಪ ಸಮಯ ಓಡಾಡಿ ಜನಸಮೂಹದತ್ತ ಕೈ ಬೀಸಿದರು.

ಅವರ ಸುತ್ತ ಉದ್ದಕ್ಕೂ ನಿಂತಿದ್ದ ವಿಐಪಿಗಳು, ಸಂಘಟಕರು ಮತ್ತು ಭದ್ರತಾ ಸಿಬ್ಬಂದಿಯಿAದ ಸುತ್ತುವರೆದಿದ್ದರು, ಗ್ಯಾಲರಿಗಳಿಂದ ಪ್ರೇಕ್ಷಕರಿಗೆÀ ಮೆಸ್ಸಿಯನ್ನು ನೋಡಲು ಸಾಧ್ಯವಾಗಲೇ ಇಲ್ಲ. ಮೆಸ್ಸಿಯನ್ನು ನೋಡಬೇಕೆಂದು ಸಾವಿರಾರು ರೂಪಾಯಿ ಕೊಟ್ಟು ಟಿಕೆಟ್ ಖರೀದಿಸಿ ಬೆಳಿಗ್ಗೆಯಿಂದ ಕಾಯುತ್ತಿದ್ದರೂ, ನೇರವಾಗಿ ಅಥವಾ ಕ್ರೀಡಾಂಗಣದ ದೊಡ್ಡ ಪರದೆಗಳಲ್ಲಿ ಸರಿಯಾಗಿ ನೋಡಲು ಸಾಧ್ಯವಾಗಲಿಲ್ಲ ಎಂದು ಅಭಿಮಾನಿಗಳು ರೊಚ್ಚಿಗೆದ್ದರು. “ನಮಗೆ ಮೆಸ್ಸಿ ಬೇಕು” ಎಂಬ ಘೋಷಣೆಗಳು ಗ್ಯಾಲರಿಯಿಂದ ಕೇಳಿಬರುತ್ತಲೇ ಇತ್ತು, ಸ್ವಲ್ಪ ಹೊತ್ತು ಕಾದರು. ಹಲವಾರು ಆಹ್ವಾನಿತ ಗಣ್ಯರು ಬರುವ ಮೊದಲೇ, ಕೆಲವೇ ನಿಮಿಷಗಳಲ್ಲಿ ಅರ್ಜೆಂಟೀನಾದ ತಾರೆ ಮೆಸ್ಸಿಯನ್ನು ಕ್ರೀಡಾಂಗಣದಿAದ ಹೊರಗೆ ಕರೆದೊಯ್ದಾಗ ಅಭಿಮಾನಿಗಳ ಆಕ್ರೋಶ, ಕೋಪದ ಕಟ್ಟೆಯೊಡೆಯಿತು. ನಿರಾಶೆಗೊಂಡ ಬೆಂಬಲಿಗರು ಮೈದಾನಕ್ಕೆ ನುಗ್ಗಿ ಬಾಟಲಿಗಳನ್ನು ಎಸೆದು, ಗ್ಯಾಲರಿಗಳಲ್ಲಿದ್ದ ಬ್ಯಾನರ್‌ಗಳು, ಹೋರ್ಡಿಂಗ್‌ಗಳು ಮತ್ತು ಪ್ಲಾಸ್ಟಿಕ್ ಕುರ್ಚಿಗಳಿಗೆ ಹಾನಿ ಮಾಡಿದರು. ಕೆಲವು ಪ್ರೇಕ್ಷಕರು ಗ್ಯಾಲರಿಯ ಬ್ಯಾರಿಕೇಡ್‌ಗಳನ್ನು ಮುರಿದು ಮೈದಾನದೊಳಕ್ಕೆ ನುಗ್ಗಿದರು. ಪೊಲೀಸರು ಅವರನ್ನು ನಿಯಂತ್ರಿಸಲು ಹರಸಾಹಸಪಟ್ಟರು.

ಮೆಸ್ಸಿಯನ್ನು ನಿಗದಿತ ಸಮಯಕ್ಕಿಂತ ಮುಂಚಿತವಾಗಿ ಹೊರಗೆ ಕರೆದೊಯ್ದು ಹೆಚ್ಚುವರಿ ಭದ್ರತೆಯನ್ನು ನಿಯೋಜಿಸಲಾಗಿದ್ದರಿಂದ ಪರಿಸ್ಥಿತಿ ಸಂಪೂರ್ಣವಾಗಿ ನಿಯಂತ್ರಣ ತಪ್ಪಲಿಲ್ಲ. ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಫುಟ್ಬಾಲ್ ಐಕಾನ್ ಲಿಯೋನೆಲ್ ಮೆಸ್ಸಿ ಮತ್ತು ಅವರ ಅಭಿಮಾನಿಗಳಲ್ಲಿ ಕ್ಷಮೆಯಾಚಿಸಿದ್ದಾರೆ. ಮೆಸ್ಸಿ ಅವರು ಇಂದು ಕೋಲ್ಕತ್ತಾಗೆ ಭೇಟಿ ನೀಡಿದ ಅಲ್ಪಾವಧಿಯಲ್ಲಿ ಅವರನ್ನು ನೋಡಿ ಕಣ್ತುಂಬಿಕೊಳ್ಳಲು ಸಾಧ್ಯವಾಗಲಿಲ್ಲ ಎಂದು ಅಭಿಮಾನಿಗಳು ಆಕ್ರೋಶಗೊಂಡು ದಾಂಧಲೆ ಎಬ್ಬಿಸಿದ ಘಟನೆಗೆ ಸಂಬAಧಿಸಿದAತೆ ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಬೇಸರ ಹೊರಹಾಕಿರುವ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಘಟನೆ ಬಗ್ಗೆ ತನಿಖೆಗೆ ಆದೇಶ ನೀಡಿರುವುದಾಗಿ ಹೇಳಿದ್ದಾರೆ.