ವೀರಾಜಪೇಟೆ, ಡಿ. ೧೩: ವೀರಾಜಪೇಟೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕೊಡಗು ವಿಶ್ವವಿದ್ಯಾಲಯ ಮಟ್ಟದ ಬಾಲಕ ಹಾಗೂ ಬಾಲಕಿಯರ ಹಗ್ಗಜಗ್ಗಾಟ ಸ್ಪರ್ಧೆ ನಡೆಯಿತು.
ಕಾರ್ಯಕ್ರಮ ಉದ್ಘಾಟಿಸಿದ ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯ ಶಿವರಾಮ ರೈ, ಕ್ರೀಡೆಗಳು ನಮ್ಮನ್ನು ಚಲನಶೀಲರನ್ನಾಗಿಸಿ ಆರೋಗ್ಯ ಹೆಚ್ಚಿಸಿ ಜೀವನೋತ್ಸಾಹ ತುಂಬುತ್ತದೆ. ಜೀವನದಲ್ಲಿ ಸೋಲು ಗೆಲುವುಗಳ ಮಹತ್ವ ತಿಳಿಸಿ ಜೀವನ ಪಾಠ ಕಲಿಸುತ್ತದೆ ಎಂದರು.
ಒಟ್ಟು ಆರು ಬಾಲಕ ತಂಡಗಳು, ಆರು ಬಾಲಕಿಯರ ತಂಡಗಳು ಭಾಗವಹಿಸಿದ್ದು ಬಾಲಕರ ಪ್ರಥಮ ಸ್ಥಾನ ವೀರಾಜಪೇಟೆಯ ಕಾವೇರಿ ಕಾಲೇಜು, ದ್ವಿತೀಯ ಸ್ಥಾನ ಮೂರ್ನಾಡು ಪದವಿ ಕಾಲೇಜು ಪಡೆದುಕೊಂಡಿತು.
ಬಾಲಕಿಯರ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ವೀರಾಜಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ದ್ವಿತೀಯ ಸ್ಥಾನವನ್ನು ಫೀ.ಮಾ.ಕೆ.ಎಂ. ಕಾರ್ಯಪ್ಪ ಕಾಲೇಜು ಮಡಿಕೇರಿ ಪಡೆದುಕೊಂಡಿತು. ಇದಕ್ಕೂ ಮುನ್ನ ಗುಡ್ಡಗಾಡು ಓಟ ಸ್ಪರ್ಧೆ ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯ ಮಾದಂಡ ತಿಮ್ಮಯ್ಯ, ನಾಸಿರ್ ಹಾಗೂ ಪ್ರಾಂಶುಪಾಲರಾದ ಪ್ರೊ. ಸರಸ್ವತಿ ಡಿ.ಕೆ. ಚಾಲನೆ ನೀಡಿದರು.
೪೮ ಬಾಲಕರು ಸ್ಪರ್ಧಿಸಿದ್ದ ಗುಡ್ಡಗಾಡು ಓಟದಲ್ಲಿ ಪ್ರಥಮ ಸ್ಥಾನವನ್ನು ಗೌತಮ್ ಎಸ್. ನಾಪೊಕ್ಲು ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ದ್ವಿತೀಯ ಸ್ಥಾನವನ್ನು ಗೌತಮ್ ಪಿ.ಸಿ. ಗೋಣಿಕೊಪ್ಪ ಕಾವೇರಿ ಕಾಲೇಜು, ಮೂರನೇ ಸ್ಥಾನ ದೀಪಕ್ ಎಸ್.ಯು. ಸೋಮವಾರಪೇಟೆ ಸಂತ ಜೋಸೆಫರ ಪದವಿ ಕಾಲೇಜು, ನಾಲ್ಕನೇ ಸ್ಥಾನ-ಪವನ್ ಡಿ.ಸಿ ಮಡಿಕೇರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಐದನೇ ಸ್ಥಾನ ಚೇತನ್ ಬಿ.ವಿ. ಸೋಮವಾರಪೇಟೆ ಬಿ.ಟಿ.ಸಿ.ಜಿ. ಕಾಲೇಜು, ಆರನೇ ಸ್ಥಾನ-ರಕ್ಷಿತ್ ಆರ್. ಸೋಮವಾರಪೇಟೆ ಸಂತ ಜೋಸೆಫರ ಪದವಿ ಕಾಲೇಜು. ಗುಡ್ಡಗಾಡು ಓಟದ ಸಮಗ್ರ ಪ್ರಶಸ್ತಿ ಮಡಿಕೇರಿಯ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜು ಸೋಮವಾರ ಪೇಟೆ ಸಂತ ಜೋಸೆಫರ ಪದವಿ ಕಾಲೇಜು ಪಡೆದುಕೊಂಡಿತು.
ಬಾಲಕಿಯರ ಗುಡ್ಡ ಗಾಡು ಓಟ ಸ್ಪರ್ಧೆಯಲ್ಲಿ ೨೧ ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು. ಪ್ರಥಮ ಸ್ಥಾನ ರಶ್ಮಿತ ಎ.ಆರ್. ಮಡಿಕೇರಿ ಸರ್ಕಾರಿ ಮಹಿಳಾ ಪದವಿ ಕಾಲೇಜು, ದ್ವಿತೀಯ ಸ್ಥಾನ ದೀಪ ಕೆ.ಎಸ್. ಗೋಣಿಕೊಪ್ಪ ಕಾವೇರಿ ಪದವಿ ಕಾಲೇಜು, ತೃತೀಯ ಸ್ಥಾನ ನಿಲಿಸ ಜೋಜ ಮಡಿಕೇರಿಯ ಫೀ.ಮಾ.ಕೆ.ಎಂ. ಕಾರ್ಯಪ್ಪ ಕಾಲೇಜು, ನಾಲ್ಕನೇ ಸ್ಥಾನ ಐಶ್ವರ್ಯ ಕೆ.ವಿ. ಸೋಮವಾರಪೇಟೆ ಸಂತ ಜೋಸೆಫರ ಪದವಿ ಕಾಲೇಜು, ಐದನೇ ಸ್ಥಾನ ಮೌನ ಹೆಚ್.ಎಸ್. ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ವೀರಾಜಪೇಟೆ. ೬ನೇ ಸ್ಥಾನ ಹೇಮಾವತಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ವೀರಾಜಪೇಟೆ ಪಡೆದುಕೊಂಡಿತು. ಮಹಿಳೆಯರ ಗುಡ್ಡಗಾಡು ಓಟದ ಸಮಗ್ರ ಪ್ರಶಸ್ತಿಯನ್ನು ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ವೀರಾಜಪೇಟೆ. ಕಾವೇರಿ ಕಾಲೇಜು ಗೋಣಿಕೊಪ್ಪ ಪಡೆದುಕೊಂಡಿತು.
ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲೆ ಪ್ರೊ. ಸರಸ್ವತಿ ಡಿ.ಕೆ. ಮಾತನಾಡಿದರು. ಕಾರ್ಯಕ್ರಮದಲ್ಲಿ ಸಿಡಿಸಿ ಸದಸ್ಯರಾದ ಭರತ್ ರಾಮರೈ, ಶ್ರೀ ವಿನ್ಸೆಂಟ್ ಡಿ ಕೋಸ್ಟ, ಮಾಳೆಟಿರ ಕಾಶಿ ಕುಂಞಪ್ಪ, ಉಸ್ನಾ ಬಾನು, ಅನ್ಸಿ ಜಾರ್ಜ್, ಉಪಸ್ಥಿತರಿದ್ದರು.
ರಾಖಿ ಪೂವಣ್ಣ ವಿಶ್ವವಿದ್ಯಾನಿಲಯ ವೀಕ್ಷಕರಾಗಿ ಹಾಜರಿದ್ದರು. ಪ್ರೊ.ದಯಾನಂದ್ ಕೆ.ಸಿ. ಪ್ರಾಸ್ತಾವಿಕ ನುಡಿಗಳನ್ನಾಡಿದರು. ದೈಹಿಕ ಶಿಕ್ಷಣ ನಿರ್ದೇಶಕರಾದ ಡಾ. ಟಿ. ಶೋನಿ ಸ್ವಾಗತಿಸಿದರು, ಪ್ರೊ. ಬಸವರಾಜು ಕೆ. ವಂದಿಸಿದರು, ಪ್ರೊ. ರುದ್ರ ಕಾರ್ಯಕ್ರಮ ನಿರೂಪಿಸಿದರು.