ಮಡಿಕೇರಿ, ಡಿ. ೧೨: ವಿಧಾನ ಪರಿಷತ್ ಸದಸ್ಯ ಎಂ.ಪಿ. ಸುಜಾ ಕುಶಾಲಪ್ಪ ಅವರು ವಸತಿ ಶಾಲೆಯೊಂದರ ವಿರುದ್ಧ ಮಾಡಿರುವ ಆರೋಪವು ವೈಯಕ್ತಿಕ ಗುರಿಯಾಗಿಸಿಕೊಂಡು ಪೂರ್ವ ನಿರ್ಧರಿತ, ಪೂರ್ವಾಗ್ರಹ ಪೀಡಿತ ಹಾಗೂ ಕಿರುಕುಳ ನೀಡುವ ಉದ್ದೇಶದಿಂದ ಕೂಡಿದೆ ಎಂದು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಆರ್. ಕೃಷ್ಣಮೂರ್ತಿ ಪ್ರತ್ಯಾರೋಪ ಮಾಡಿದ್ದಾರೆ.
ಕೊಡ್ಲಿಪೇಟೆ ಬಳಿಯ ಕ್ಯಾತೆ ಗ್ರಾಮದಲ್ಲಿರುವ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ವಸತಿ ಶಾಲೆಗೆ ತಾ. ೬ ರಂದು ವಿಧಾನ ಪರಿಷತ್ ಸದಸ್ಯರಾದ ಎಂ.ಪಿ. ಸುಜಾ ಕುಶಾಲಪ್ಪ ಭೇಟಿ ನೀಡಿದ ಸಂದರ್ಭ ವಸತಿ ನಿಲಯದ ಅಸಮರ್ಪಕ ನಿರ್ವಹಣೆ ಸಂಬAಧ ಮಾಡಿರುವ ಆರೋಪಕ್ಕೆ ಅಧಿಕಾರಿ ಕೃಷ್ಣಮೂರ್ತಿ ಪತ್ರಿಕಾ ಹೇಳಿಕೆ ಮೂಲಕ ತಿರುಗೇಟು ನೀಡಿದ್ದಾರೆ.
ಸುಜಾ ಕುಶಾಲಪ್ಪ ಅವರ ಸಂಬAಧಿ ಶಶಾಂಕ್ ಎಂಬವರು ಕುಶಾಲನಗರ ಮೌಲಾನಾ ಶಾಲೆಯ ನಿರ್ಮಾಣದ ಉಪಗುತ್ತಿಗೆ ನಿರ್ವಹಿಸಲು ಸಹಕರಿಸುವಂತೆ ಕೇಳಿದ್ದು, ನಿಯಮಾನುಸಾರ ಉಪಗುತ್ತಿಗೆ ನೀಡಲು ಸಾಧ್ಯವಿಲ್ಲದ ಕಾರಣ ನಿರಾಕರಿಸಿದ ಪ್ರತಿಯಾಗಿ ಈ ರೀತಿ ನಡೆದುಕೊಂಡಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಶಾಲೆಗೆ ಆಹಾರ ನಾಗರಿಕ ಸರಬರಾಜು ಇಲಾಖೆಯಿಂದ ನೇರವಾಗಿ ಅಕ್ಕಿ ಸರಬರಾಜು ಆಗುತ್ತಿದ್ದು, ಅಕ್ಕಿಯ ಗುಣಮಟ್ಟದ ಕುರಿತಾಗಿ ಶಾಲಾ ಹಂತದಲ್ಲಿ ಅಥವಾ ಜಿಲ್ಲಾ ಹಂತದಲ್ಲಿ ಯಾವುದೇ ನಿಯಂತ್ರಣ ಇರುವುದಿಲ್ಲ. ಅದೇ ರೀತಿ ಭೇಟಿ ಸಂದರ್ಭದಲ್ಲಿ ಶುಚಿಗೊಳಿಸಿ ಬಿಸಾಡಲು ಇಟ್ಟಿದ್ದ ನಿರುಪಯುಕ್ತ ಅಕ್ಕಿಯನ್ನು ಅಡುಗೆ ಸಿಬ್ಬಂದಿ ತೋರಿಸಿ ಈ ಬಗ್ಗೆ ತಿಳಿಸಿದ್ದರೂ ಸ್ಥಳ ಪರಿಶೀಲನೆ ಸಂದರ್ಭ ಈ ಅಕ್ಕಿಯನ್ನು ತೋರಿಸಲಾಗಿದೆ. ಬಳಕೆ ಮಾಡುತ್ತಿರುವ ಅಕ್ಕಿಯಲ್ಲಿ ಯಾವುದೇ ಹುಳುಗಳು ಕಂಡುಬAದಿರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಬಿಸಿ ನೀರಿನ ಸಮಸ್ಯೆ ಆರೋಪದಲ್ಲಿ ಈಗಾಗಲೇ ೩೫೦೦ ಲೀಟರ್ ಸಾಮರ್ಥ್ಯದ ಸೋಲಾರ್ ಹೀಟರ್ ಇದ್ದು, ಇದು ಉಪಯೋಗವಾಗುತ್ತಿದೆ. ಹೆಚ್ಚುವರಿ ಗೀಸರ್‌ಗಳಿಗೆ ಕೇಂದ್ರ ಕಚೇರಿಗೆ ಪತ್ರ ಬರೆಯಲಾಗಿದೆ. ನನ್ನ ಹಂತದ ಕರ್ತವ್ಯ ನಿರ್ವಹಿಸಲಾಗಿದೆ ಹಾಗೂ ಮತ್ತಷ್ಟು ಸುಧಾರಣೆ ಮಾಡಲಾಗುವುದು ಎಂದು ತಿಳಿಸಿದ್ದಾರೆ. ಅಲ್ಲದೆ ವಸತಿ ಶಾಲೆಗೆ ಪ್ರತಿ ೨ ವಾರಕ್ಕೊಮ್ಮೆ ಭೇಟಿ ನೀಡುತ್ತಿದ್ದೇನೆ. ಪ್ರತಿ ನಿತ್ಯದ ಊಟದ ಜಿಪಿಎಸ್ ಚಿತ್ರಗಳನ್ನು ಪಡೆದುಕೊಳ್ಳುತ್ತಿದ್ದೇನೆ. ಪ್ರತಿ ಶುಕ್ರವಾರ ಶೈಕ್ಷಣಿಕ ಪ್ರಗತಿ ಪರಿಶೀಲನೆ ಸಭೆಯನ್ನು ಆನ್‌ಲೈನ್ ಮೂಲಕ ನಡೆಸುತ್ತಿದ್ದೇನೆ. ಕಳೆದ ೨ ವರ್ಷ ಪಿಯುಸಿ ಮತ್ತು ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ ೧೦೦ ಫಲಿತಾಂಶ ಶಾಲೆಗೆ ಬಂದಿದೆ. ರಾಜ್ಯ ಮಟ್ಟದಲ್ಲಿ ಮಾದರಿ ಶಾಲೆಯಾಗಿ ಗುರುತಿಸಿಕೊಂಡಿದ್ದು, ಆರೋಪಗಳ ಪೂರ್ವಾಗ್ರಹ ಪೀಡಿತ ಎಂದು ದೂರಿದ್ದಾರೆ. ಶಶಾಂಕ್ ಅವರು ತನಗೆ ಮಾಡಿರುವ ದೂರವಾಣಿ ಕರೆಗಳ ಮಾಹಿತಿಯನ್ನೂ ಅಧಿಕಾರಿ ಮಾಧ್ಯಮಗಳಿಗೆ ಬಿಡುಗಡೆ ಮಾಡಿದ್ದಾರೆ.