ಸಿದ್ದಾಪುರ, ಡಿ. ೧೨: ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಡಿ ಗ್ರಾ.ಪಂ. ಮಾಜಿ ಅಧ್ಯಕ್ಷನ ವಿರುದ್ಧ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಿದ್ದಾಪುರ ಠಾಣಾ ವ್ಯಾಪ್ತಿಯ ಗ್ರಾಮವೊಂದರ ೧೧ ವರ್ಷದ ಬಾಲಕಿ ತಾ. ೧೧ ರಂದು ನ್ಯಾಯಬೆಲೆ ಅಂಗಡಿಗೆ ಮೊಟ್ಟೆ ಖರೀದಿಸಲು ತೆರಳಿದ ಸಂದರ್ಭ ಅಂಗಡಿ ನಡೆಸುತ್ತಿರುವ, ಮಾಲ್ದಾರೆ ಗ್ರಾ.ಪಂ. ಮಾಜಿ ಅಧ್ಯಕ್ಷ, ರಜಾಕ್ (೫೮) ಎಂಬಾತ ಬಾಲಕಿಯನ್ನು ಪೀಡಿಸಿ ಅಂಗಡಿಗೆ ಎಳೆದೊಯ್ದು ಲೈಂಗಿಕ ಕಿರುಕುಳ ನೀಡಿದ್ದು, ಬಾಲಕಿ ತಪ್ಪಿಸಿಕೊಂಡು ಬಂದು ಪೋಷಕರಿಗೆ ವಿಷಯ ತಿಳಿಸಿದ್ದಾಳೆ.

ಬಳಿಕ ಬಾಲಕಿಯ ಪೋಷಕರು ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಈ ಸಂಬAಧ ದೂರು ನೀಡಿದ ಹಿನ್ನೆಲೆ ಪೋಕ್ಸೋ ಸೇರಿದಂತೆ ವಿವಿಧ ಬಿಎನ್‌ಎಸ್ ಸೆಕ್ಷನ್‌ಗಳಡಿ ಪ್ರಕರಣ ದಾಖಲಿಸಿಕೊಂಡು ಕ್ರಮಕೈಗೊಂಡಿದ್ದಾರೆ. ಆರೋಪಿ ರಜಾಕ್ ತಲೆಮರೆಸಿಕೊಂಡಿದ್ದು, ಆತನ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.