ಮಡಿಕೇರಿ, ಡಿ. ೧೨: ಕೊಡಗು ಗೌಡ ಯುವ ವೇದಿಕೆಯ ೨೦೨೫ -೨೬ನೇ ಸಾಲಿನ ವಾರ್ಷಿಕ ಮಹಾ ಸಭೆ ಅಧ್ಯಕ್ಷ ಪಾಣತ್ತಲೆ ಜಗದೀಶ್ ನೇತೃತ್ವದಲ್ಲಿ ಮಡಿಕೇರಿಯ ಗೌಡ ಸಮಾಜದ ಯುವ ವೇದಿಕೆ ಕಚೇರಿಯಲ್ಲಿ ನಡೆಯಿತು.
ಆಡಳಿತ ಮಂಡಳಿ ಸಭೆಯಲ್ಲಿ ಕಳೆದ ಒಂದು ವರ್ಷದಿಂದ ಯುವ ವೇದಿಕೆ ನಡೆಸಿದ ಕಾರ್ಯವೈಖರಿ ಚಟುವಟಿಕೆಗಳು, ವರದಿ ಸೇರಿದಂತೆ ಆದಾಯ ಹಾಗೂ ಖರ್ಚಿನ ವಿವರವನ್ನು ನೀಡಲಾಯಿತು.
ಅಧ್ಯಕ್ಷ ಪಾಣತ್ತಲೆ ಜಗದೀಶ್ ಮಾತನಾಡಿ, ಆಡಳಿತ ಮಂಡಳಿಯ ಅವಧಿಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ, ಕ್ರೀಡೆ ಸೇರಿದಂತೆ ಸಮುದಾಯದ ಅಭಿವೃದ್ಧಿಗೆ ಸಹಕಾರಿಯಾಗುವ ಕಾರ್ಯಕ್ರಮ ನಡೆಸಲಾಯಿತು. ಗೌಡ ಯುವ ವೇದಿಕೆಯ ಬೆಳವಣಿಗೆಗೆ ಎಲ್ಲರ ಸಹಕಾರ ಅಗತ್ಯ. ಎಲ್ಲರೂ ಒಗ್ಗೂಡಿಕೊಂಡು ಯುವ ವೇದಿಕೆಯನ್ನು ಮುನ್ನಡೆಸಬೇಕು ಎಂದರು.
ಕಾರ್ಯದರ್ಶಿ ಪುದಿಯನೆರವನ ರಿಷಿತ್ ಮಾದಯ್ಯ ಮಾತನಾಡಿ, ನಾವುಗಳು ಕೇವಲ ಕ್ರಿಕೆಟ್ ಮಾತ್ರವಲ್ಲ, ಇತರೆ ಆಟೋಟಗಳ ಬಗ್ಗೆ ಕೂಡ ಕಾರ್ಯಕ್ರಮ ಮಾಡುವ ಚಿಂತನೆ ಇದೆ. ಮುಂದಿನ ದಿನಗಳಲ್ಲಿ ಒಲಂಪಿಕ್ ರೀತಿಯ ಕ್ರೀಡಾಕೂಟವನ್ನು ಆಯೋಜನೆ ಮಾಡುವ ಆಲೋಚನೆ ಮಾಡಿ ಅರೆಭಾಷೆ ಸಮುದಾಯದಲ್ಲಿನ ಕ್ರೀಡಾ ಪ್ರತಿಭೆಗಳನ್ನು ಹೊರತರುವ ಕಾರ್ಯಕ್ರಮ ನಡೆಯಲಿದೆ.
ಈ ಕ್ರೀಡಾಕೂಟವನ್ನು ನಗರದಲ್ಲಿ ನಡೆಸಿದರೆ ಮತ್ತೊಂದು ಪಂದ್ಯಾವಳಿಯನ್ನು ಹಳ್ಳಿಯಲ್ಲಿ ನಡೆಸುವ ಆಲೋಚನೆ ಇದ್ದು, ಸಮುದಾಯದ ಎಲ್ಲರೂ ಕೂಡ ಸಹಕಾರ ನೀಡುವಂತೆ ಮನವಿ ಮಾಡಿದರು.
ನೂತನ ಆಡಳಿತ ಮಂಡಳಿ
ಕೊಡಗು ಗೌಡ ಯುವ ವೇದಿಕೆ ನೂತನ ಆಡಳಿತ ಮಂಡಳಿಯ ಚುನಾವಣೆ ಇದೇ ಸಂದರ್ಭ ನಡೆದಿದ್ದು ನೂತನ ಅಧ್ಯಕ್ಷರಾಗಿ ಬಾಳಾಡಿ ಮನೋಜ್ ಕುಮಾರ್ ಆಯ್ಕೆಯಾಗಿದ್ದಾರೆ.೪ನಾಲ್ಕನೇ ಪುಟಕ್ಕೆ
(ಮೊದಲ ಪುಟದಿಂದ) ಪ್ರಧಾನ ಕಾರ್ಯದರ್ಶಿಯಾಗಿ ಪುದಿಯನೆರವನ ರಿಷಿತ್ ಹಾಗೂ ಕಾಂಚನ ಗೌಡ, ಉಪಾಧ್ಯಕ್ಷರಾಗಿ ಎಡಿಕೇರಿ ಪ್ರಸನ್ನ ಹಾಗೂ ಪರಿಚನ ಸತೀಶ್, ಸಹ ಕಾರ್ಯದರ್ಶಿಯಾಗಿ ಕವನ್ ಕೊತ್ತೋಳಿ, ಮೂವನ ಭರತ್ ಹಾಗೂ ಪರಿಚನ ಸೋನಿ, ಕೋಶಾಧಿಕಾರಿಯಾಗಿ ನವೀನ್ ದೇರಳ, ಕ್ರೀಡಾ ಸಮಿತಿಗೆ ಕುಟ್ಟನ ಪ್ರಶಾಂತ್, ಸಾಂಸ್ಕೃತಿಕ ಸಮಿತಿಗೆ ಕುಕ್ಕೆರ ಲಕ್ಷö್ಮಣ್, ಆಹಾರ ಸಮಿತಿಗೆ ಕೊಂಬಾರನ ರಂಜು ಹಾಗೂ ಪೈಕೆರ ಗಗನ್, ವೇದಿಕೆ ಹಾಗೂ ಅಲಂಕಾರ ಸಮಿತಿಗೆ ಕುಂಡ್ಯನ ಚರಣ್, ಪ್ರಚಾರ ಸಮಿತಿಗೆ ಕಟ್ಟೆಮನೆ ರೋಷನ್ ಹಾಗೂ ಲೋಹಿತ್ ಮಾಗುಲುಮನೆ, ವಿನೋದ್ ಮೂಡಗದ್ದೆ ಮತ್ತು ಕಂಬಳ ಹರೀಶ್, ಶಿಸ್ತು ಸಮಿತಿಗೆ ಪೊಕ್ಕಳಂಡ್ರ ಮನೋಜ್ ಹಾಗೂ ಪಟ್ಟಡ ದೀಪಕ್, ಗೌರವ ಸಲಹೆಗಾರರಾಗಿ ಕಟ್ಟೆಮನೆ ಸೋನಾಜಿತ್ ಹಾಗೂ ಕೊಂಬನ ಪ್ರವೀಣ್ ಅವರನ್ನು ಆಯ್ಕೆ ಮಾಡಲಾಯಿತು.
ನಿರ್ದೇಶಕರುಗಳಾಗಿ ಕಟ್ಟೆಮನೆ ರೋಷನ್, ಕೋಚನ ದಿಶಾಂತ್, ಪೂಜಾರಿರ ಸುಮನ್, ಕಲ್ಲುಮುಟ್ಲು ಅನುದೀಪ್ ಸೋಹಾನ್ ಪೊಯ್ಯಕಂಡಿ, ಲೋಹಿತ್ ಜೈನಿರಾ, ಮಿತ್ರ ಪೂಜಾರಿ, ಕೀರ್ತನ್ ಮೂವನ, ಖಾಯಂ ನಿರ್ದೇಶಕರಾಗಿ ಕೋಡಿ ಅಭಿಲಾಷ್ ಅವರನ್ನು ಆಯ್ಕೆ ಮಾಡಲಾಯಿತು. ಗೌರವ ಅಧ್ಯಕ್ಷರುಗಳಾದ ಪೈಕೇರ ಮನೋಹರ್, ಪೊನ್ನಚ್ಚನ ಮಧು ಹಾಗೂ ಸೋನಾಜಿತ್ ನೇತೃತ್ವದಲ್ಲಿ ಚುನಾವಣೆ ನಡೆಸಿ ಆಯ್ಕೆ ಮಾಡಲಾಯಿತು. ಕಳೆದ ಮೂರು ವರ್ಷಗಳಿಂದ ಅಧಿಕಾರದಲ್ಲಿದ್ದ ಪಾಣತ್ತಲೆ ಜಗದೀಶ್ ನೂತನ ಆಡಳಿತ ಮಂಡಳಿಗೆ ಅಧಿಕಾರ ಹಸ್ತಾಂತರಿಸಿದರು.