ಸೋಮವಾರಪೇಟೆ, ಡಿ. ೧೧: ತಾಲೂಕಿನ ಪ್ರಸಿದ್ಧ ಪ್ರವಾಸಿ ತಾಣವಾಗಿರುವ ಮಲ್ಲಳ್ಳಿ ಜಲಪಾತದಲ್ಲಿ ಕೇಬಲ್ ಕಾರ್ ಅಳವಡಿಸುವ ಯೋಜನೆ ಸಂಬAಧ ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ ಅವರು ವಿಧಾನ ಸಭಾ ಅಧಿವೇಶನದಲ್ಲಿ ಸದನದ ಗಮನ ಸೆಳೆದರು.

ಬೆಳಗಾವಿಯ ಸುವರ್ಣ ವಿಧಾನ ಸೌಧದಲ್ಲಿ ನಡೆಯು ತ್ತಿರುವ ಚಳಿಗಾಲದ ಅಧಿವೇಶ ನದಲ್ಲಿ ಸಭಾಧ್ಯಕ್ಷ ಯು.ಟಿ. ಖಾದರ್ ಅವರ ಸಮ್ಮು ಖದಲ್ಲಿ ಯೋಜನೆಯ ಬಗ್ಗೆ ದನಿಯೆತ್ತಿದ ಶಾಸಕರು, ಕಳೆದ ೧೫.೦೬.೨೦೨೪ರಲ್ಲಿ ಪ್ರವಾಸೋದ್ಯಮ ಇಲಾಖೆಯಿಂದ ರಾಜ್ಯದ ವಿವಿಧ ಭಾಗಗಳಲ್ಲಿ ೧೧ ಕೇಬಲ್ ಕಾರ್ ಯೋಜನೆ ಅಳವಡಿಸುವ ಪ್ರಸ್ತಾಪದಲ್ಲಿ ಮಲ್ಲಳ್ಳಿ ಜಲಪಾತಕ್ಕೆ ೧ ಕೇಬಲ್ ಕಾರ್ ಅನುಷ್ಠಾನಕ್ಕೆ ಅನುಮೋದನೆ ನೀಡಲಾಗಿದೆ ಎಂದರು. ಮುಂದುವರೆದು ರೈಟ್ಸ್ ಸಂಸ್ಥೆಯ ಮೂಲಕ ಟೆಕ್ನೋಫಿಸಿ ಬಿಲಿಟಿ ವರದಿ ಸಿದ್ಧವಾಗಿದೆ. ೩ ಟರ್ಮಿನಲ್‌ಗೆ ಯೋಜನೆ ರೂಪಿಸಲಾಗಿದೆ. ಉದ್ದೇಶಿತ ಯೋಜನೆಯು ಅನುಷ್ಠಾನಗೊಳ್ಳುವ ಕುಮಾರಳ್ಳಿ ಗ್ರಾಮದ ಸ.ನಂ. ೧/೯ರ ದಾಖಲೆಗಳಲ್ಲಿ ಪೈಸಾರಿ ಕಾಡು ಎಂದು ನಮೂದಾಗಿದೆ. ಈ ಜಾಗ ಪೈಸಾರಿಗೆ ಬರುತ್ತದೋ ಅಥವಾ ಅರಣ್ಯಕ್ಕೆ ಬರುತ್ತದೋ ಎಂಬ ಬಗ್ಗೆ ಗೊಂದಲವಿದ್ದು, ಅರಣ್ಯ ಸಚಿವರು ಗೊಂದಲ ಬಗೆಹರಿಸಬೇಕು.

ಬದಲಿ ಜಾಗವನ್ನಾದರೂ ನೀಡ ಬೇಕು. ಫಾರೆಸ್ಟ್ ಕನ್ವರ್ಷನ್ ಮೂಲಕವಾದರೂ ಅಧಿಕಾರಿಗಳು ಜಾಗ ಒದಗಿಸಲು ಕ್ರಮ ವಹಿಸಬೇಕು ಎಂದು ಮನವಿ ಮಾಡಿದರು. ಪ್ರವಾಸೋದ್ಯಮ ಇಲಾಖಾ ಸಚಿವರ ೪ಐದನೇ ಪುಟಕ್ಕೆ

(ಮೊದಲ ಪುಟದಿಂದ) ಅನುಪಸ್ಥಿತಿಯಲ್ಲಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಉತ್ತರಿಸಿ, ಯೋಜನೆ ಅನುಷ್ಠಾನಕ್ಕೆ ಸರ್ಕಾರದಿಂದ ಯಾವುದೇ ಸಮಸ್ಯೆಯಿಲ್ಲ. ಬಹುತೇಕ ಅನುಮೋದನೆಗಳು ಲಭಿಸಿವೆ. ಉದ್ದೇಶಿತ ಯೋಜನೆಯ ಅನುಷ್ಠಾನದ ಸ್ಥಳದ ದಾಖಲೆಯಲ್ಲಿ ಪೈಸಾರಿ ಕಾಡು ಎಂದು ನಮೂದಾಗಿದೆ. ಈ ಗೊಂದಲ ಪರಿಹಾರಕ್ಕೆ ಅರಣ್ಯ ಇಲಾಖೆಗೆ ಪ್ರಸ್ತಾವನೆ ಸಲ್ಲಿಕೆಯಾಗಿದೆ. ಅಲ್ಲಿಂದ ನಿರಾಕ್ಷೇಪಣಾ ಪತ್ರ ಬಂದ ನಂತರ ಯೋಜನೆಯ ಅನುಷ್ಠಾನಕ್ಕೆ ಕ್ರಮ ವಹಿಸಲಾಗುವುದು. ಈ ಬಗ್ಗೆ ಅರಣ್ಯ ಸಚಿವರು ಕ್ರಮವಹಿಸಬೇಕೆಂದರು.

ಶಾಸಕ ಮಂತರ್ ಗೌಡ ಮಧ್ಯಪ್ರವೇಶಿಸಿ, ಈ ಯೋಜನೆ ಪ್ರಾರಂಭವಾದರೆ ಆ ಭಾಗದಲ್ಲಿ ಅಭಿವೃದ್ಧಿಗೆ ಹೆಚ್ಚಿನ ಅನುಕೂಲವಾಗುತ್ತದೆ. ಪ್ರವಾಸೋದ್ಯಮ ಇನ್ನಷ್ಟು ಬೆಳವಣಿಗೆಯಾಗುತ್ತದೆ. ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಈ ಬಗ್ಗೆ ಗಮನ ಹರಿಸಿ ದಾಖಲೆ ಸಂಬAಧಿತ ಸಮಸ್ಯೆ ಬಗೆಹರಿಸಲು ಸೂಚನೆ ನೀಡಬೇಕೆಂದು ಅರಣ್ಯ ಇಲಾಖಾ ಸಚಿವ ಈಶ್ವರ ಖಂಡ್ರೆ ಅವರ ಗಮನ ಸೆಳೆದರು.