ಮಡಿಕೇರಿ, ಡಿ. ೧೧: ರಾಜ್ಯ ಸರಕಾರವು ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘಗಳಿಗೆ ಶೂನ್ಯ ಬಡ್ಡಿದರದಲ್ಲಿನ ಸಾಲ ಸೌಲಭ್ಯಕ್ಕೆ ಸಂಬAಧಿಸಿದAತೆ ನೀಡುವ ಬಡ್ಡಿ ಸಹಾಯಧನ ಇಳಿಕೆ ಮಾಡಿರುವುದರಿಂದ ಸಹಕಾರ ಸಂಘಗಳ ಕಾರ್ಯ ಚಟುವಟಿಕೆಗಳಿಗೆ ಹೊಡೆತ ಬಿದ್ದಂತಾಗಿದೆ. ಈ ಹಿನ್ನೆಲೆಯಲ್ಲಿ ಸಂಘದ ಬೇಡಿಕೆಯಂತೆ ಬಡ್ಡಿ ಸಹಾಯಧನವನ್ನು ಪರಿಷ್ಕರಿಸಿ ಮಂಜೂರು ಮಾಡುವಂತೆ ವಿಧಾನ ಪರಿಷತ್ ಸದಸ್ಯ ಎಂ.ಪಿ. ಸುಜಾ ಕುಶಾಲಪ್ಪ ಆಗ್ರಹಿಸಿದ್ದಾರೆ.
ವಿಧಾನ ಪರಿಷತ್ನ ಕಲಾಪದ ಸಂದರ್ಭ ಶೂನ್ಯ ವೇಳೆಯಲ್ಲಿ ಅವರು ಈ ವಿಷಯವನ್ನು ಪ್ರಸ್ತಾಪಿಸಿದರು. ಈ ಬಗ್ಗೆ ಮುಖ್ಯಮಂತ್ರಿಗಳ ಮೂಲಕ ಉತ್ತರ ಒದಗಿಸಲಾಗುವುದೆಂದು ಸಂಬAಧಿಸಿದ ಸಚಿವರು ಮಾಹಿತಿ ನೀಡಿದರು.
ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿಗೆ ೨೦೨೪-೨೫ಕ್ಕೆ ವಾಸ್ತವಿಕವಾಗಿ ಮತ್ತು ೨೦೨೫-೨೬ನೇ ಸಾಲಿಗೆ ಪ್ರಸ್ತಾವಿಕವಾಗಿ ಶೂನ್ಯ ಬಡ್ಡಿದರದಲ್ಲಿ ರೈತರಿಗೆ ವಿತರಿಸಿದ ಅಲ್ಪಾವದಿ ಬೆಳೆಸಾಲ, ಪಶುಸಂಗೋಪನೆ ಸಾಲ ಮತ್ತು ಮೀನುಗಾರಿಕೆ ಸಾಲಗಳು ಮತ್ತು ಮಧ್ಯಮಾವಧಿ ಸಾಲಕ್ಕೆ ಬಡ್ಡಿ ಸಹಾಯ ಧನದ ದರವನ್ನು ಕಡಿತಗೊಳಿಸಲಾಗಿರುತ್ತದೆ ಮತ್ತು ೨೦೨೫-೨೬ನೇ ಸಾಲಿಗೆ ಪ್ರಸ್ತಾವಿಕವಾಗಿ ಬಡ್ಡಿ ಸಹಾಯ ಧನ ಶೇಕಡ ೨.೦೦ ರಿಂದ ಶೇ ೧.೭೫ಕ್ಕೆ ಇಳಿಕೆ ಮಾಡಿ ನಿಗದಿ ಮಾಡಿರುವುದರಿಂದ ಮತ್ತು ಸಂಘವು ಸ್ವಂತ ಬಂಡವಾಳದಿAದ ನೇರವಾಗಿ ರೈತರಿಗೆ ವಿತರಿಸಿದ ಸಾಲಗಳಿಗೆ ಶೇ.೪.೬೦ಕ್ಕೆ ನಿಗಧಿ ಮಾಡಿರುವುದು ಹಾಗೂ ರೂ.೩ ರಿಂದ ೫ ಲಕ್ಷದವರೆಗೆ ಸಂಘವು ಸ್ವಂತ ಬಂಡವಾಳದಿAದ ನೇರವಾಗಿ ರೈತರಿಗೆ ವಿತರಿಸಿದ ಸಾಲಗಳಿಗೆ ಶೇ.೯.೧೦ ನಿಗದಿ ಮಾಡಿರುತ್ತಾರೆ.
ಮಧ್ಯಮಾವಧಿ ಮತ್ತು ಧೀರ್ಘಾವಧಿಗೆ ಹಂಚಿಕೆ ಮಾಡುವ ಕೃಷಿ ಸಾಲಗಳನ್ನು ಸಂಘವು ತನ್ನ ಸ್ವಂತ ಬಂಡವಾಳದಿAದ ವಿತರಣೆ ಮಾಡಿದಲ್ಲಿ ಈ ಮೊದಲು ಶೇ.೭.೦೨ ರಷ್ಟು ಇದ್ದ ಬಡ್ಡಿದರವನ್ನು ಶೇ.೬.೨೩ಕ್ಕೆ ಇಳಿಕೆ ಮಾಡಲಾಗಿರುತ್ತದೆ. ಮತ್ತು ಡಿ.ಸಿ.ಸಿ ಬ್ಯಾಂಕ್ ಬಂಡವಾಳದಲ್ಲಿ ಸಂಘದ ಮುಖೇನ ಸಾಲ ಹಂಚಿಕೆ ಮಾಡಿದಲ್ಲಿ ಶೇ.೧.೭೫ಕ್ಕೆ ಇಳಿಕೆ ಮಾಡಿರುವುದರಿಂದ ಸಹಕಾರ ಸಂಘಗಳು ಆರ್ಥಿಕ ನಷ್ಟಕ್ಕೆ ಒಳಗಾಗಲಿದ್ದು ಅವುಗಳ ಕಾರ್ಯ ನಿರ್ವಹಣೆಯು ದುಸ್ತರವಾಗುತ್ತದೆ ಎಂದು ಸುಜಾ ಗಮನ ಸೆಳೆದರು. ೪ನಾಲ್ಕನೇ ಪುಟಕ್ಕೆ
(ಮೊದಲ ಪುಟದಿಂದ) ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ಗ್ರಾಮಾಂತರ ಮಟ್ಟದಲ್ಲಿ ರೈತರ ಆರ್ಥಿಕ ಸ್ವಾವಲಂಬನೆಗೆ ಪ್ರಮುಖ ಕೇಂದ್ರವಾಗಿದ್ದು, ಲಾಭಗಳಿಸುವ ಉದ್ದೇಶಕ್ಕೂ ಹೆಚ್ಚಾಗಿ ಸೇವೆಯನ್ನೇ ಗುರಿಯಾಗಿಸಿಕೊಂಡಿರುತ್ತವೆ. ಆದ್ದರಿಂದ ರಾಜ್ಯ ಸರ್ಕಾರವು ನೀಡುವ ಶೂನ್ಯ ಬಡ್ಡಿ ದರದ ಸಾಲಗಳನ್ನು ಮತ್ತು ಮಧ್ಯಮಾವಧಿ-ದೀರ್ಘಾವಧಿಗೆ ಸಾಲ ವಿತರಣೆ ಮಾಡಿ ಪ್ರತಿ ವರ್ಷವು ಶೇ. ೯೯ಕ್ಕೂ ಹೆಚ್ಚು ವಸೂಲಾತಿಯನ್ನು ಮಾಡುತ್ತಾ ಆರ್ಥಿಕ ಶಿಸ್ತನ್ನು ಸಹ ಕಾಪಾಡಿಕೊಂಡು ಸಹಕಾರ ಸಂಘಗಳು ಪಾಲಿಸಿಕೊಂಡು ಬಂದಿರುತ್ತವೆ. ಸರ್ಕಾರವು ನೀಡುವ ಬಡ್ಡಿ ಸಹಾಯಧನವೇ ಸಂಘದ ಆದಾಯದ ಪ್ರಮುಖ ಮೂಲವಾಗಿದ್ದು, ಇದನ್ನು ಇಳಿಕೆ ಮಾಡುವುದರಿಂದ ಸಂಘಗಳು ನಷ್ಟದ ಸುಳಿಗೆ ಸಿಲುಕಿ ಉತ್ತಮ ಸೇವೆ ನೀಡಲು ಸಹ ಕಷ್ಟ ಸಾಧ್ಯವಾಗಲಿದೆ. ಆದ್ದರಿಂದ ಸಂಘದ ಮನವಿಯನ್ನು ಪುರಸ್ಕರಿಸಿ, ಸರ್ಕಾರದಿಂದ ಸಂಘದ ಬೇಡಿಕೆಯಂತೆ ಬಡ್ಡಿ ಸಹಾಯ ಧನವನ್ನು ಪರಿಷ್ಕರಿಸಿ, ಮಂಜೂರು ಮಾಡುವಂತೆ ಅವರು ಒತ್ತಾಯಿಸಿದರು.