ಮಡಿಕೇರಿ, ಡಿ. ೧೧ : ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಬಗ್ಗೆ ಅವಹೇಳನಕಾರಿ ಹಾಗೂ ಅವಾಚ್ಯ ಪದಗಳನ್ನು ಬಳಸಿ ವೀಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿರುವ ಯುವಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವದರೊಂದಿಗೆ ಅವರುಗಳನ್ನು ದೇಶದ್ರೋಹದಡಿ ಗಡೀಪಾರು ಮಾಡುವಂತೆ ಒತ್ತಾಯಿಸಿ ಕೊಡಗು ಜಿಲ್ಲಾ ಬಿಜೆಪಿ ವತಿಯಿಂದ ಪ್ರತಿಭಟನೆ ನಡೆಸಲಾಯಿತಲ್ಲದೆ ಸಂಬAಧಿಸಿದ ಅಂಗಡಿ ಮಳಿಗೆಗೆ ಮುತ್ತಿಗೆ ಹಾಕಿ ಆಕ್ರೋಶ ಹೊರಹಾಕಲಾಯಿತು.

ದೇಶದ ಪ್ರಧಾನಿ ಕುರಿತಾಗಿ ಅವಹೇಳನಕಾರಿ ಹಾಗೂ ಅಶ್ಲೀಲ ಪದಗಳಿಂದ ನಿಂದಿಸಿ ವೀಡಿಯೋ ಮಾಡಿ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿ ಡಲಾಗಿದ್ದು, ನಿನ್ನೆಯಿಂದ ಅದು ವೈರಲ್ ಆಗಿತ್ತು. ಈ ಸಂಬAಧ ಪೊಲೀಸರು ಮಡಿಕೇರಿಯ ಫಹದ್, ಬಸಿಲ್, ಸಮೀರ್ ಎಂಬ ಮೂವರನ್ನು ಬಂದಿಸಿದ್ದರು.

ಈ ಪ್ರಕರಣ ವಿರುದ್ಧ ಕೊಡಗು ಜಿಲ್ಲಾ ಬಿಜೆಪಿ ಇಂದು ನಗರದ ಇಂದಿರಾಗಾAಧಿ ವೃತ್ತದಲ್ಲಿ ಪ್ರತಿಭಟನೆ ನಡೆಸಿತು. ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಪಕ್ಷದ ಪ್ರಮುಖರು, ಕಾರ್ಯ ಕರ್ತರು ದೇಶದ ಪ್ರಧಾನಿ ಬಗ್ಗೆ ಜೈಕಾರ ಹಾಕಿದರಲ್ಲದೆ, ಕಾಂಗ್ರೆಸ್ ಸರಕಾರ ಹಾಗೂ ಪ್ರಧಾನಿ ಬಗ್ಗೆ ಅವಹೇಳನಕಾರಿ ಪದಗಳೊಂದಿಗೆ ವೀಡಿಯೋ ಮಾಡಿದ ಆರೋಪಿ ಯುವಕರ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿದರು.ಮೆರವಣಿಗೆ-ಮುತ್ತಿಗೆ : ಕೆಲಕಾಲ ಪ್ರತಿಭಟನೆ ನಡೆಸಿದ ಪ್ರತಿಭಟನಾ ಕಾರರು ನಂತರ ಮೆರವಣಿಗೆ ಮೂಲಕ ಕೆ.ಎಸ್.ಆರ್.ಟಿ.ಸಿ. ಡಿಪೋ ಬಳಿ ಇರುವ ಯುವಕರು ವೀಡೀಯೋ ಮಾಡಿದ ಸ್ಪೆöÊಸಸ್ ಮಳಿಗೆಗೆ ತೆರಳಿ ಮುತ್ತಿಗೆ ಹಾಕಿದರು. ಅಷ್ಟರಲ್ಲಾಗಲೇ ಮಳಿಗೆಯ ಮಾಲೀಕರು ಮಳಿಗೆಗೆ ಬೀಗ ಜಡಿದು ಪರಾರಿಯಾಗಿದ್ದರು.

೪ನಾಲ್ಕನೇ ಪುಟಕ್ಕೆ

ಪ್ರತಿಭಟನಾಕಾರರು

ಮುತ್ತಿಗೆ ಹಾಕುವ ಬಗ್ಗೆ ಮಾಹಿತಿ ಅರಿತ ಪೊಲೀಸರು ಸ್ಥಳದಲ್ಲಿ ಬಿಗಿ ಬಂದೋಬಸ್ತ್ ವ್ಯವಸ್ಥೆ ಮಾಡಿದ್ದರು. ಆ ನಡುವೆಯೂ ಕೆಲವರು ಮಳಿಗೆಯ ಬಾಗಿಲನ್ನು ಒದ್ದರಲ್ಲದೆ, ಮಳಿಗೆಯ ನಾಮಫಲಕಕ್ಕೆ ಕಲ್ಲು ಹೊಡೆದರು. ಮಳಿಗೆಯ ಬೀಗ ತೆರೆದು ಮಳಿಗೆಯೊಳಗಡೆ ಏನಿದೆ ಎಂಬದನ್ನು ತೋರಿಸಬೇಕೆಂದು ಪ್ರತಿಭಟನಾಕಾರರು ಪಟ್ಟು ಹಿಡಿದರು. ಈ ಸಂದರ್ಭ ಕೆಲಕಾಲ ಪ್ರತಿಭಟನಾಕಾರರು ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿಯೊಂದಿಗೆ ಸಂಘರ್ಷವೂ ಏರ್ಪಟ್ಟಿತು. ಪೊಲೀಸರು ಪ್ರತಿಭಟನಾಕಾರರನ್ನು ತಡೆಯುವುದರೊಂದಿಗೆ ಅಂಗಡಿ ಮಳಿಗೆಗೆ ಹಾನಿಯಾಗದಂತೆ ತಡೆದರು.

ಗಡೀಪಾರಿಗೆ ಆಗ್ರಹ

ಈ ಸಂದರ್ಭದಲ್ಲಿ ಮಾತನಾಡಿದ ಕೊಡಗು ಜಿಲ್ಲಾ ಬಿಜೆಪಿ ಅಧ್ಯಕ್ಷ ನಾಪಂಡ ರವಿ ಕಾಳಪ್ಪ; ವಿಶ್ವ ಮೆಚ್ಚಿಕೊಂಡಿರುವ ದೇಶದ ಪ್ರಧಾನಿ ವಿರುದ್ಧ ಈ ರೀತಿಯಾಗಿ ಅತ್ಯಂತ ಕೀಳುಮಟ್ಟದ ಪದಗಳನ್ನು ಬಳಸಿ ವೀಡಿಯೋ ಮಾಡಿರುವ ಯುವಕರ ಉದ್ದೇಶವಾದರೂ ಏನು, ಇದರ ಹಿಂದೆ ಯಾರು ಇದ್ದಾರೆ ಎಂಬದನ್ನು ಕಂಡುಹಿಡಿಯಬೇಕಿದೆ. ಯುವಕರನ್ನು ಪೊಲೀಸರು ಬಂಧಿಸಿರುವ ಬಗ್ಗೆ ಹಮ್ಮೆಯಿದೆ, ಆದರೆ ಅವರುಗಳು ರಾಜಕೀಯ ಪ್ರಭಾವದಿಂದ ಜಾಮೀನಿನ ಮೇಲೆ ಹೊರಬಂದು ಮತ್ತೆ ಅದೇ ಕೆಲಸ ಮಾಡುತ್ತಾರೆ, ಇದರಲ್ಲಿ ದೇಶದ್ರೋಹಿಗಳ ಕೈವಾಡವಿದೆ. ಈ ಬಗ್ಗೆ ಪೊಲೀಸರು ಗಂಭೀರವಾಗಿ ಪರಿಗಣಿಸಬೇಕು. ಅಂಗಡಿ ಮಳಿಗೆಯಲ್ಲಿ ಭಯೋತ್ಪಾದನಾ ಕೃತ್ಯಗಳಿಗೆ ಬೇಕಾಗುವ ಸಾಮಗ್ರಿಗಳಿರಬಹುದು, ಹಾಗಾಗಿ ಪೊಲೀಸರು ಈ ಬಗ್ಗೆ ಸಮಗ್ರ ತನಿಖೆ ನಡೆಸಬೇಕು. ಆರೋಪಿಗಳನ್ನು ದೇಶದ್ರೋಹದಡಿ ಗಡೀಪಾರು ಮಾಡಬೇಕೆಂದು ಆಗ್ರಹಿಸಿದರು.

ಶಾಸಕರು ತನಿಖೆ ಮಾಡಿಸಲಿ

ಮಾಜಿ ಶಾಸಕ ಎಂ.ಪಿ.ಅಪ್ಪಚ್ಚು ರಂಜನ್ ಮಾತನಾಡಿ; ರಾಜ್ಯದಲ್ಲಿ ಕಾಂಗ್ರೆಸ್ ಸರಕಾರದ ಕಾನೂನು ವ್ಯವಸ್ಥೆ ಹದಗೆಟ್ಟಿದೆ. ದೇಶದ್ರೋಹ ಕೆಲಸ ಮಾಡುವವರ ವಿರುದ್ಧ ಯಾವದೇ ಕ್ರಮಗಳಾಗುತ್ತಿಲ್ಲ. ಈ ವೀಡಿಯೋ ಮಾಡಿದವರ ಬಗ್ಗೆ ಶಾಕರುಗಳು ತನಿಖೆ ಮಾಡಿಸಿ ಆವರುಗಳ ಪೂರ್ವಾಪರ ತಿಳಿಯಪಡಿಸಬೇಕಿದೆ ಎಂದು ಆಗ್ರಹಿಸಿದರು. ಯಾರಿಗೂ ಬೇಡವಾದ ಟಿಪ್ಪು ಜಯಂತಿ ಬಗ್ಗೆ ಅಧಿವೇಶನದಲ್ಲಿ ಪ್ರಸ್ತಾಪವಾದರೂ ನಮ್ಮ ಶಾಸಕರುಗಳು ಆ ಬಗ್ಗೆ ಯಾವದೇ ಪ್ರತಿಕ್ರಿಯೆ ನೀಡಿಲ್ಲ, ಶಾಸಕರುಗಳು ಜನರ ಪರವಾಗಿ ಇರಬೇಕಾಗಿದೆ ಎಂದು ಹೇಳಿದರು.

ಮಳಿಗೆ ಮುಚ್ಚಿಸಿ

ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಹೇಶ್ ಜೈನಿ ಮಾತನಾಡಿ; ನಗರದಲ್ಲಿ ಸ್ಪೆöÊಸಸ್ ಮಳಿಗೆ ತೆರೆದು ನಕಲಿ ಉತ್ಪನ್ನಗಳನ್ನು ಮಾರಾಟ ಮಾಡಲಾಗುತ್ತಿದೆ. ಜಿಲ್ಲೆಯಲ್ಲಿ ಬೆಳೆಯಲಾಗದಂತಹ ಸಂಬಾರ ಪದಾರ್ಥಗಳನ್ನು ಹೊರಜಿಲ್ಲೆಯಿಂದ ತಂದು ಪ್ರವಾಸಿಗರಿಗೆ ಮಾರಾಟ ಮಾಡಿ ವಂಚಿಸಲಾಗುತ್ತಿದೆ. ಅಂತಹ ಮಳಿಗೆಗಳಿಗೆ ದಾಳಿ ಮಾಡಿ ಮಳಿಗೆಗಳನ್ನು ಮುಚ್ಚಿಸುವಂತೆ ಪೊಲೀಸರನ್ನು ಆಗ್ರಹಿಸಿದರು. ಅಶ್ಲೀಲ ವೀಡಿಯೋ ಮಾಡಿರುವ ಯುವಕರ ಮೇಲೆ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಪಕ್ಷದ ಪ್ರಮುಖರುಗಳಾದ ತಳೂರು ಕಿಶೋರ್ ಕುಮಾರ್, ಬಿ.ಕೆ. ಅರುಣ್‌ಕುಮಾರ್, ಸುವಿನ್ ಗಣಪತಿ, ಕಿಲನ್ ಗಣಪತಿ, ವಿ.ಕೆ ಲೋಕೇಶ್, ಕನ್ನಂಡ ಸಂಪತ್, ಕೆ.ಎಸ್. ರಮೇಶ್, ಮನು ಮಂಜುನಾಥ್, ಮನು ಮುತ್ತಪ್ಪ, ಪಿ.ಎಂ. ರವಿ, ರವಿ ಬಸಪ್ಪ, ಅರುಣ್ ಶೆಟ್ಟಿ, ಅನಿತಾ ಪೂವಯ್ಯ, ಕನ್ನಿಕೆ, ಸೌಮ್ಯ, ಕೀರ್ತಿ, ವಿಮಲ ರವಿ ಸೇರಿದಂತೆ ಪ್ರಮುಖರು, ಕಾರ್ಯಕರ್ತರು ಪಾಲ್ಗೊಂಡಿದ್ದರು.