ಕುಶಾಲನಗರ, ಡಿ. ೩: ಹನುಮ ಜಯಂತಿ ದಶಮಂಟಪ ಸಮಿತಿ ಆಶ್ರಯದಲ್ಲಿ ನಡೆದ ಶೋಭಾಯಾತ್ರೆಯಲ್ಲಿ ಪಾಲ್ಗೊಂಡ ಮಂಟಪಗಳ ಪೈಕಿ ಗುಡ್ಡೆಹೊಸೂರು ವೀರಾಂಜನೇಯ ಸೇವಾ ಸಮಿತಿ ಪ್ರಥಮ ಬಹುಮಾನ ಪಡೆದಿದೆ.
ದ್ವಿತೀಯ ಬಹುಮಾನವನ್ನು ಹಾರಂಗಿಯ ವೀರ ಹನುಮ ಸೇವಾ ಸಮಿತಿ ಮಂಟಪ ಪಡೆಯಿತು. ಕುಶಾಲನಗರ ಎಚ್.ಆರ್.ಪಿ ಕಾಲೋನಿಯ ಅಂಜನಿಪುತ್ರ ಜಯಂತೋತ್ಸವ ಆಚರಣಾ ಟ್ರಸ್ಟ್ ತೃತೀಯ ಬಹುಮಾನವನ್ನು ಪಡೆದಿದೆ.
ಬಹುಮಾನ ವಿತ ರಣಾ ಕಾರ್ಯಕ್ರಮದಲ್ಲಿ ಪ್ರಥಮ ಬಹುಮಾನವಾಗಿ ರೂ ೫೦,೦೦೦ ನಗದು ಮತ್ತು ಟ್ರೋಫಿ, ದ್ವಿತೀಯ ಬಹುಮಾನವಾಗಿ ರೂ ೪೦,೦೦೦ ಮತ್ತು ಟ್ರೋಫಿ ಹಾಗೂ ತೃತೀಯ ಬಹುಮಾನ ವಿಜೇತರಿಗೆ ರೂ ೩೦,೦೦೦ ಮತ್ತು ಟ್ರೋಫಿ ವಿತರಿಸಲಾಯಿತು.
ಉಳಿದಂತೆ ಪಾಲ್ಗೊಂಡ ಮಂಟಪಗಳಿಗೆ ತಲಾ ೧೦,೦೦೦ ರೂ ನಗದು ಮತ್ತು ಟ್ರೋಫಿ ನೀಡಲಾಯಿತು.
ಮಂಟಪಕ್ಕೆ ಆಕಸ್ಮಿಕ ಬೆಂಕಿ
ಸಂಜೆ ಆರಂಭಗೊAಡ ಶೋಭಾಯಾತ್ರೆ ಮುಂಜಾನೆ ೪ರ ತನಕ ನಡೆಯಿತು. ಸುಮಾರು ನಾಲ್ಕು ಗಂಟೆಗೆ ಕೂಡಿಗೆ ಕೂಡು ಮಂಗಳೂರು ಭಾಗದಿಂದ ಬಂದು ಪ್ರದರ್ಶನ ನೀಡಿದ ಹನುಮಸೇನಾ ಸಮಿತಿಯ ಮಂಟಪ ಪಟ್ಟಣದ ರಥ ಬೀದಿ ಬಳಿ ಬೆಂಕಿಗೆ ಆಹುತಿ ಆದ ಘಟನೆ ನಡೆಯಿತು.
ಪ್ರದರ್ಶನ ನೀಡಿ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಮಂಟಪದಲ್ಲಿ ಏಕಾಏಕಿ ಬೆಂಕಿ ಕಂಡುಬAದು ಬಹುತೇಕ ಕಲಾಕೃತಿಗೆ ಬೆಂಕಿಗೆ ಆಹುತಿಯಾಗಿವೆ. ರಕ್ಷಣಾ ಸ್ಥಳದಲ್ಲಿದ್ದ ಅಗ್ನಿಶಾಮಕ ದಳದ ಸಿಬ್ಬಂದಿಗಳು ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅದೃಷ್ಟವಶಾತ್ ಯಾವುದೇ ರೀತಿಯ ಹೆಚ್ಚಿನ ಅನಾಹುತ ಸಂಭವಿಸಿಲ್ಲ. ಬೆಂಕಿ ಅವಘಡಕ್ಕೆ ಕಾರಣ ತಿಳಿದು ಬಂದಿಲ್ಲ. ಕಟ್ಟಡದಿಂದ ಬಿದ್ದ ವ್ಯಕ್ತಿ
ಹನುಮಾನ್ ಜಯಂತಿ ಅಂಗವಾಗಿ ರಾತ್ರಿ ವೇಳೆ ನಡೆದ ಮಂಟಪಗಳ ಶೋಭಾ ಯಾತ್ರೆ ಸಂದರ್ಭ ವ್ಯಕ್ತಿಯೋರ್ವ ಕಟ್ಟಡದಿಂದ ಆಯತಪ್ಪಿ ಬಿದ್ದು ತೀವ್ರ ಗಾಯಗೊಂಡು ಆಸ್ಪತ್ರೆ ಸೇರಿದ ಘಟನೆ ನಡೆದಿದೆ. ಕುಶಾಲನಗರ ಗೌಡ ಸಮಾಜ ಬಳಿಯ ನಿವಾಸಿ ಪುನೀತ್ (೩೦) ಎಂಬಾತ ಮಂಟಪಗಳನ್ನು ವೀಕ್ಷಣೆ ಮಾಡಲು ಗಣಪತಿ ದೇವಾಲಯ ಬಳಿ ಕಟ್ಟಡವೊಂದರಿAದ ಸಮೀಪದ ಕಟ್ಟಡಕ್ಕೆ ದಾಟಲು ಯತ್ನಿಸಿದ ಸಂದರ್ಭ ಆಯತಪ್ಪಿ ಬಿದ್ದು ತೀವ್ರ ಗಾಯ ಉಂಟಾಗಿದೆ. ಕೂಡಲೇ ಸ್ಥಳದಲ್ಲಿದ್ದ ಪೊಲೀಸರು ಆತನನ್ನು ಆ್ಯಂಬುಲೆನ್ಸ್ ವಾಹನದಲ್ಲಿ ಮಡಿಕೇರಿಯ ಸರಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲು ಮಾಡಿದ್ದಾರೆ. ಇದೀಗ ಚೇತರಿಸಿಕೊಳ್ಳುತ್ತಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.