*ಗೋಣಿಕೊಪ್ಪ, ಡಿ. ೨ : ನಮಗೂ ಬದುಕುವ ಹಕ್ಕು ನೀಡಿ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ, ಪೊನ್ನಂಪೇಟೆ ತಾಲೂಕು ಘಟಕದ ವತಿಯಿಂದ ಮೆರವಣಿಗೆ ನಡೆಸಿ ನಿರಾಶ್ರಿತರಿಗೆ ನಿವೇಶನಗಳನ್ನು ಒದಗಿಸುವಂತೆ ಹಕ್ಕೋತ್ತಾಯ ಮಂಡಿಸಲಾಯಿತು.
ಪೊನ್ನAಪೇಟೆ ರಾಮಕೃಷ್ಣ ಶಾರದಾಶ್ರಮ ಮುಂಭಾಗದಿAದ ಮಹಿಳಾ ಸಮಾಜದವರೆಗೆ ಮೆರವಣಿಗೆ ನಡೆಸಲಾಯಿತು.
ನೂರಾರು ನಿವೇಶನ ರಹಿತರು ಭಾಗವಹಿಸಿದ್ದರು. ನಂತರ ಮಹಿಳಾ ಸಹಕಾರಿ ಸಮಾಜದ ಸಭಾಂಗಣದಲ್ಲಿ ತಾಲೂಕು ದಲಿತ ಸಂಘರ್ಷ ಸಮಿತಿ ಸಂಚಾಲಕ ಜಗದೀಶ್ ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮ ನಡೆಯಿತು. ದಲಿತ ಮುಖಂಡ ಜಯಪ್ಪ ಹಾನಗಲ್ ಮಾತನಾಡಿ, ಜ್ಞಾನದ ಕೊರತೆಯಿಂದಾಗಿ ನಾವು ಸರಕಾರದ ಸಲತ್ತುಗಳನ್ನು ಪಡೆದು ಸಮಾಜಮುಖಿಯಾಗಿ ಬದುಕಲು ಸಾಧ್ಯವಾಗುತ್ತಿಲ್ಲ.
ಆಮಿಷಗಳಿಗೆ ಬಲಿಯಾಗಿ ನಮ್ಮ ತನವನ್ನು ಕಳೆದುಕೊಳ್ಳುತ್ತಿದ್ದೇವೆ. ಹಕ್ಕಿಗಾಗಿ ಇಂದಿಗೂ ಹೋರಾಟ ನಡೆಸುವ ವ್ಯವಸ್ಥೆಯಲ್ಲಿ ನಾವು ಬಳಲುತ್ತಿದ್ದೇವೆ ಎಂದು ವಿಷಾದಿಸಿದರು.
ಸಂವಿಧಾನದAತೆ ಸಮಾನತೆಯ ಪ್ರಕಾರ ನಾವು ಇಂದು ನಡೆದುಕೊಳ್ಳುತ್ತಿಲ್ಲ. ಮಾನವ ಮೌಲ್ಯಗಳು ಕಳೆದುಕೊಳ್ಳುತ್ತಿದ್ದೇವೆ. ಬದುಕು ನಡೆಸುವವನಿಗೆ ಎರಡು ಎಕರೆ ಜಮೀನು ಇದ್ದರೆ ಸಾಕು. ಆದರೆ, ಈ ಪ್ರದೇಶದಲ್ಲಿ ಸಾಕಷ್ಟು ಬರಡು ಭೂಮಿಗಳು ಪಾಳು ಬಿದ್ದಿವೆ. ಅಂತಹ ಭೂಮಿಯನ್ನು ನಿರಾಶ್ರಿತರಿಗೆ ನೀಡಬೇಕೆಂದು ಆಗ್ರಹಿಸಿದರು.
ಬಸವಣ್ಣ, ಅಂಬೇಡ್ಕರ್, ಬುದ್ಧ ಭಾವಚಿತ್ರಗಳಿಗೆ ಪುಷ್ಪ ನಮನ ಸಲ್ಲಿಸಿ, ಸಭಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಅಧ್ಯಕ್ಷ ಎಂ.ಪಿ ಕೇಶವ ಕಾಮತ್ ಮಾತನಾಡಿ, ಸ್ವಾರ್ಥ ಬದುಕಿನಿಂದ ದೂರ ಉಳಿದು ಎಲ್ಲರೂ ನಮ್ಮವರೇ ಎಂದು ಒಪ್ಪಿಕೊಂಡಾಗ ಈ ಸಮಾಜ ಶಾಂತಿಯುತವಾಗಿರುತ್ತದೆ ಎಂದರು.
ದಲಿತ ಸಂಘರ್ಷ ಸಮಿತಿಗಳು ಒಗ್ಗಟ್ಟಿನ ಮೂಲಕ ತಮ್ಮ ಹಕ್ಕಿಗಾಗಿ ಹೋರಾಟ ನಡೆಸಿದಾಗ ಅಧಿಕಾರಿಗಳು ರಾಜಕಾರಣಿಗಳು ತಮ್ಮಡೆಗೆ ಬಂದು ಸಲ್ಲಬೇಕಾದ ಸೌಕರ್ಯವನ್ನು ಒದಗಿಸಿಕೊಡಲು ಮುಂದಾಗುತ್ತಾರೆ. ಹೀಗಾಗಿ ಪ್ರತಿಯೊಬ್ಬರಲ್ಲಿ ಹೊಂದಾಣಿಕೆ ಬಹು ಮುಖ್ಯ ಎಂದು ಹೇಳಿದರು.
ರಾಜ್ಯ ದಲಿತ ಸಂಘರ್ಷ ಸಮಿತಿ ಸಂಘಟನಾ ಸಂಚಾಲಕ ಟಿ.ಎನ್ ಗೋವಿಂದಪ್ಪ, ಜಿಲ್ಲಾ ಸಂಚಾಲಕ ದಿವಾಕರ್, ವಿಭಾಗೀಯ ಸಂಚಾಲಕ ವೀರಭದ್ರಪ್ಪ, ಮಡಿಕೇರಿ ತಾಲೂಕು ಸಂಚಾಲಕ ದೀಪಕ್ ಪೊನ್ನಪ್ಪ, ಮಡೀಕೇರಿ ನಗರ ಸಂಚಾಲಕ ಸಿದ್ದೇಶ್ವರ, ಪ್ರೇಮ ಕೃಷ್ಣಪ್ಪ ಉಪಸ್ಥಿತರಿದ್ದರು. ಜಿಲ್ಲಾ ದಲಿತ ಸಂಘರ್ಷ ಸಮಿತಿ ಸಂಚಾಲಕ ಗಿರೀಶ್ ಕ್ರಾಂತಿ ಗೀತೆಗಳನ್ನು ಹಾಡಿದರು. ಗೋಣಿಕೊಪ್ಪ ಪೊನ್ನಂಪೇಟೆ ವ್ಯಾಪ್ತಿಯ ಪೌರಕಾರ್ಮಿಕರಿಗೆ ಸನ್ಮಾನಿಸಲಾಯಿತು.