*ಗೋಣಿಕೊಪ್ಪ, ಡಿ. ೨ : ಹನುಮ ಮಾಲಧಾರಣೆ, ಆಂಜನೇಯ ಹೋಮ, ಸೇರಿದಂತೆ ಇತರ ಆಧ್ಯಾತ್ಮಿಕ ಕಾರ್ಯಕ್ಕೆ ರಾಮಮಂದಿರದಲ್ಲಿ ಚಾಲನೆ ನೀಡಲಾಯಿತು.
ತಿತಿಮತಿ ಹನುಮೋತ್ಸವ ಸಮಿತಿ, ಶ್ರೀ ರಾಮ ಮಂದಿರ ವತಿಯಿಂದ ಎರಡನೇ ವರ್ಷದ ಹನುಮೋತ್ಸವ ತಿತಿಮತಿ ಗ್ರಾಮದಲ್ಲಿ ೬ ದಿನಗಳು ನಡೆಯುವ ಕಾರ್ಯಕ್ರಮಕ್ಕೆ ಚಾಲನೆ ದೊರೆಯಿತು.
ಅರ್ಚಕರು ಆಂಜನೇಯ ಹೋಮ ನೆರವೇರಿಸಿದರು. ಭಕ್ತಾದಿಗಳಿಗೆ ಹನುಮ ಮಾಲಧಾರಣೆಯನ್ನು ನೆರವೇರಿಸಲಾಯಿತು. ನಂತರ ನೆರೆದ ಭಕ್ತಾದಿಗಳಿಗೆ ಅನ್ನಪ್ರಸಾದ ವಿನಿಯೋಗ ನಡೆಯಿತು.
ತಿತಿಮತಿ ಗ್ರಾಮ ಪಂಚಾಯಿತಿ ಸದಸ್ಯ ಅನುಪ್ ಕುಮಾರ್, ಹನುಮ ಸಮಿತಿ ಅಧ್ಯಕ್ಷ ಚೆಕ್ಕೆರ ಮನು ಕಾವೇರಪ್ಪ, ಸಮಿತಿ ಕಾರ್ಯದರ್ಶಿ ಮನು ನಂಜಪ್ಪ, ಗ್ರಾ.ಪಂ. ಅಧ್ಯಕ್ಷೆ ಪೊನ್ನಿ, ಉಪಾಧ್ಯಕ್ಷೆ ಶ್ಯಾಮಲ, ಹನುಮ ಜಯಂತಿ ಸಮಿತಿ ಸದಸ್ಯರುಗಳಾದ, ಪಿ.ಎನ್ ರವಿ, ಗೋವಿಂದ, ಅರುಣ್ಗೌಡ, ಸತೀಶ್, ಮಂಜು.ಆರ್, ಸುಧಿ, ಮಂಜುಳ, ಅವಿನಾಶ್, ಸಮಿತಿಯ ಸದಸ್ಯರುಗಳು ಇದ್ದರು.