ಪೊನ್ನಂಪೇಟೆ, ಡಿ. ೨: ನೂರಾರು ವರ್ಷಗಳ ಇತಿಹಾಸವಿರುವ ಕೊಡಗಿನ ಇತಿಹಾಸದ ಬಗ್ಗೆ ಬೆಳಕು ಚೆಲ್ಲಿರುವ, ದಿ.ನಡಿಕೇರಿಯಂಡ ಚಿಣ್ಣಪ್ಪನವರು ಬರೆದಿರುವ ಪಟ್ಟೋಲೆ ಪಳಮೆಯಲ್ಲಿ ಉಲ್ಲೇಖವಾಗಿರುವ
ಪೊನ್ನಂಪೇಟೆ ತಾಲೂಕಿನ ತೂಚಮಕೇರಿ, ಚಿಕ್ಕಮುಂಡೂರು, ಮುಗುಟಗೇರಿ ಮತ್ತು ನಡಿಕೇರಿ ಗ್ರಾಮಗಳಿಗೆ ಸಂಬAಧಪಟ್ಟ ಗುದ್ರೋಡೆ ಮಂದ್‌ಗೆ ನಾಲ್ಕು ಗ್ರಾಮಸ್ಥರ ಸಹಕಾರದೊಂದಿಗೆ ಇದೀಗ ಜೀರ್ಣೋದ್ಧಾರ ಕಾರ್ಯ ಕೈಗೊಳ್ಳಲಾಗಿದೆ.
ಈ ಹಿನ್ನೆಲೆಯಲ್ಲಿ ತಾ. ೧ ರಂದು ಸಂಜೆ ೬ ಗಂಟೆಗೆ ವೀರಾಜಪೇಟೆಯ ಜ್ಯೋತಿಷಿ ಹರೀಶ್ ಭಟ್ ಅವರಿಂದ ವಿವಿಧ ಪೂಜಾ ವಿಧಿ ವಿಧಾನಗಳು ಪ್ರಾರಂಭಗೊAಡಿತು. ನಾಲ್ಕು ಗ್ರಾಮಸ್ಥರ ಸಮ್ಮುಖದಲ್ಲಿ ಸುದರ್ಶನ ಹೋಮದಿಂದ ಪ್ರಾರಂಭಗೊAಡ ಪೂಜಾ ಕೈಂಕರ್ಯಗಳು ತಾ. ೨ ರಂದು ನಾಗಪೂಜೆ, ವೃಕ್ಷಾರೋಹಣ, ಆಶ್ಲೇಷಾಬಲಿಯೊಂದಿಗೆ ಮುಕ್ತಾಯಗೊಂಡು, ನಂತರ ತೀರ್ಥ ಪ್ರಸಾದ ಮತ್ತು ಅನ್ನ ಸಂತರ್ಪಣೆ ನಡೆಯಿತು.ತಾ. ೬ ರಂದು ಮಂದ್‌ಗೆ ಅಧಿಕೃತ ಚಾಲನೆ ದೊರೆಯಲಿದೆ.
೧೯೫೫ ರವರೆಗೂ ಇಲ್ಲಿ ಮಂದ್ ಆಚರಣೆ ನಡೆದಿದ್ದು, ಇಲ್ಲಿ ವೀರ ಸೈನಿಕ ಮಹಾವೀರ ಅಚ್ಚುನಾಯಕ ಕೋಲಾಟ ಆಡಿದ್ದರು ಎಂಬ ಇತಿಹಾಸ ಇದೆ. ತದನಂತರ ಕಾರಣಾಂತರಗಳಿAದ ಮಂದ್ ನಮ್ಮೆ ನಿಂತುಹೋಗಿದ್ದು, ಇದೀಗ ಐತಿಹಾಸಿಕ ಗತವೈಭವಕ್ಕೆ ಮರಳಲು ಎಲ್ಲಾ ಸಿದ್ದತೆ ಆಗಿದೆ.
ಈ ಮಂದ್‌ನ ಮುಖ್ಯ ತಕ್ಕಾಮೆಯು ನಡಿಕೇರಿಯ ಕೋಳೆರ ಕುಟುಂಬಕ್ಕೆ ಸೇರಿದ್ದು, ಇವರ ಮುಂದಾಳತ್ವದಲ್ಲಿ ಮಂದ್ ನಡೆಯಲಿದೆ. ತೂಚಮಕೇರಿಯ ತಕ್ಕಾಮೆ ಪೆಮ್ಮಂಡ ಕುಟುಂಬ, ಚಿಕ್ಕಮುಂಡೂರಿನ ತಕ್ಕಾಮೆ ಕಳ್ಳಿಚಂಡ ಕುಟುಂಬಕ್ಕೂ, ಮುಗುಟಗೇರಿಯ ತಕ್ಕಾಮೆ ಮಲಚೀರ ಕುಟುಂಬಕ್ಕೆ ಇದ್ದು, ನಾಲ್ಕು ಗ್ರಾಮದ ತಕ್ಕ ಮುಖ್ಯಸ್ಥರ ಮುಂದಾಳತ್ವದಲ್ಲಿ ಮಂದ್ ನಮ್ಮೆ ನಡೆಯಲಿದೆ.
ನಡಿಕೇರಿ ಗ್ರಾಮದವರಾದ ಕಳ್ಳಿಚಂಡ ನವೀನ್ ಅರಳಿ ಕಟ್ಟೆಯನ್ನು ಕಟ್ಟಿಸಲು ರೂ. ೧,೩೦,೦೦೦ ಮತ್ತು ಪೂಜಾ ಕಾರ್ಯಕ್ಕೆ ಕಾಕೂರು ಗ್ರಾಮದ ಕಿರುಂದAಡ ವಿಠಲ ರೂ. ೫೦,೦೦೦ ಧನ ಸಹಾಯ ಮಾಡಿರುತ್ತಾರೆ. ತಾ. ೬ ರಂದು ಮಂದ್ ನಮ್ಮೆಯು ಅಧಿಕೃತವಾಗಿ ನಡೆಯಲಿದೆ ಎಂದು ಮಂದ್ ಸಮಿತಿಯ ಅಧ್ಯಕ್ಷ ಕೋಳೆರ ನರೇಂದ್ರ ತಿಳಿಸಿದ್ದಾರೆ. ಕಾರ್ಯಕ್ರಮದಲ್ಲಿ ಮಲಚೀರ ಬೋಜಪ್ಪ, ಕಳ್ಳಿಚಂಡ ರಾಬಿನ್, ಕಳ್ಳಿಚಂಡ ರವಿ, ಐನಂಡ ತಮ್ಮಯ್ಯ, ಮುದ್ದಿಯಡ ಜೀವನ್, ಕಳ್ಳಿಚಂಡ ಅಪ್ಪುಣು, ಮುದ್ದಿಯಡ ಶೀಲಾ, ಕಿರುಂದAಡ ಉಮೇಶ್, ಮಾಣಿಪಂಡ ಬಬಿನ್, ಕಳ್ಳಿಚಂಡ ಗೋಕುಲ, ಮುಗುಟಗೇರಿ, ನಡಿಕೇರಿ, ತೂಚಮಕೇರಿ ಮತ್ತು ಚಿಕ್ಕಮುಂಡೂರು ಗ್ರಾಮಸ್ಥರು ಉಪಸ್ಥಿತರಿದ್ದರು.