ಶ್ರೀಮAಗಲ, ಡಿ. ೧: ಪೊನ್ನಂಪೇಟೆ ತಾಲೂಕು ಬೆಕ್ಕೆಸೊಡ್ಲೂರು ಗ್ರಾಮದ ಪತ್ತ್ ಕಟ್ಟ್ ನಾಡ್ ಕ್ರೀಡಾಕೂಟ ತಂಡದಿAದ ಬೆಕ್ಕೆಸೊಡ್ಲೂರು ಶಾರದ ಪ್ರೌಢಶಾಲೆಯ ಮೈದಾನದಲ್ಲಿ ಜಿಲ್ಲಾ ಮಟ್ಟದ ಮುಕ್ತ ಪುರುಷರ ವಾಲಿಬಾಲ್ ಪಂದ್ಯಾವಳಿಯನ್ನು ತಾ. ೧೭ ಮತ್ತು ೧೮ರಂದು ಆಯೋಜಿಸಲಾಗಿದೆ ಎಂದು ಕ್ರೀಡಾಕೂಟದ ಸಂಚಾಲಕ ಮಲ್ಲಮಾಡ ಸಂತೋಷ್ ತಿಳಿಸಿದ್ದಾರೆ.

ಈ ಕ್ರೀಡಾಕೂಟದ ಪೂರ್ವಭಾವಿ ಸಭೆ ಬೆಕ್ಕೆಸೊಡ್ಲೂರು ಗ್ರಾಮದ ಮಂದತವ್ವ ಸಭಾಂಗಣದಲ್ಲಿ ನಡೆದು, ಕ್ರೀಡಾ ಕೂಟದ ಬಗ್ಗೆ ಅವರು ಮಾಹಿತಿ ನೀಡಿದರು. ಕ್ರೀಡಾಕೂಟದಲ್ಲಿ ಭಾಗವಹಿಸುವ ತಂಡಗಳಿಗೆ ತಾ. ೧೦ರೊಳಗೆ ನೋಂದಾವಣೆಗೆ ಅವಕಾಶ ಕಲ್ಪಿಸಲಾಗಿದೆ ಮೊದಲು ನೋಂದಾವಣೆ ಮಾಡುವ ೨೪ ತಂಡಗಳಿಗೆ ಮಾತ್ರ ಅವಕಾಶ ನೀಡಲಾಗುತ್ತದೆ. ಪ್ರಥಮ ಬಹುಮಾನ ರೂ. ೪೦ ಸಾವಿರ, ದ್ವಿತೀಯ ಬಹುಮಾನ ರೂ. ೩೦ ಸಾವಿರ, ಮೂರನೇ ಮತ್ತು ನಾಲ್ಕನೇ ಬಹುಮಾನವಾಗಿ ತಲಾ ಹತ್ತು ಸಾವಿರ ಹಾಗೂ ಟ್ರೋಫಿ ನೀಡಲಾಗುತ್ತದೆ ಎಂದರು.

ಕ್ರೀಡಾಕೂಟದ ಅಧ್ಯಕ್ಷ ತಾಣಚ್ಚಿರ ನಿರನ್ ಮಾಚಯ್ಯ ಮಾತನಾಡಿ, ಎರಡು ದಿನಗಳ ಕಾಲ ನಡೆಯುವ ಕ್ರೀಡಾಕೂಟದಲ್ಲಿ ಎಲ್ಲಾ ಜಾತಿ ಜನಾಂಗದ ಧರ್ಮದ ತಂಡಗಳಿಗೆ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ. ಹೆಚ್ಚಿನ ಮಾಹಿತಿಗೆ ೯೭೪೦೦೪೮೬೭೮, ೯೭೪೦೮೮೧೯೧೭ ದೂರವಾಣಿಯನ್ನು ಸಂಪರ್ಕಿಸಬಹುದೆAದರು.

ಈ ಸಂದರ್ಭ ಕ್ರೀಡಾಕೂಟದ ಕಾರ್ಯದರ್ಶಿ ತಾಣಚ್ಚಿರ ನಿಖಿಲ್ ಸೋಮಣ್ಣ, ಖಜಾಂಚಿ ಮಾಚಿಮಾಡ ಸಂಪತ್ ಸೋಮಣ್ಣ ಮತ್ತು ಸದಸ್ಯರುಗಳು ಹಾಜರಿದ್ದರು.