ಸಿದ್ದಾಪುರ, ನ. ೩೦ : ಹುಲಿ ದಾಳಿ ನಡೆಸಿ ಹಸುವನ್ನು ಕೊಂದು ಹಾಕಿ ಮತ್ತೊಂದು ಹಸುವಿನ ಮೇಲೆ ದಾಳಿ ನಡೆಸಿದ ಘಟನೆ ನಡೆದಿದೆ. ಗಾಯಗೊಂಡ ಹಸು ಚಿಂತಾಜನಕ ಸ್ಥಿತಿಯಲ್ಲಿದೆ. ತಿತಿಮತಿ ವಲಯ ಅರಣ್ಯ ವ್ಯಾಪ್ತಿಯ ಬಾಡಗ ಬಾಣಂಗಾಲ ಗ್ರಾಮದ ಮಠ ಎಂಬಲ್ಲಿ ಈ ಘಟನೆ ನಡೆದಿದೆ. ಮಠ ನಿವಾಸಿ ವಿ.ಸಿ. ಚಂದ್ರ ಎಂಬವರಿಗೆ ಸೇರಿದ À ಗಬ್ಬದ ಹಸುವನ್ನು ಮನೆಯ ಬಳಿ ಗದ್ದೆಯಲ್ಲಿ ಮೇಯಲು ಬಿಟ್ಟಿದ್ದರು. ಈ ಹಸುವಿನ ಮೇಲೆ ಹುಲಿ ದಾಳಿ ನಡೆಸಿ ಕೊಂದು ಹಾಕಿದೆ. ಬಳಿಕ ಅನತಿ ದೂರದ ತನಕ ಹಸುವನ್ನು ಎಳೆದುಕೊಂಡು ಹೋಗಿ ನಂತರ ಹೊಟ್ಟೆಯಿಂದ ಕರುವನ್ನು ಎಳೆದು ಹಾಕಿ ಹಸುವಿನ ಮಾಂಸವನ್ನು ತಿಂದಿದೆ. ಒಂದು ತಿಂಗಳಲ್ಲಿ ಹಸು ಕರು ಹಾಕಲು ಬಾಕಿ ಇತ್ತು. ಅಷ್ಟರಲ್ಲಿ ಹುಲಿ ದಾಳಿಗೆ ಹಸು ಸಾವನ್ನಪ್ಪಿದೆ. ಇದಲ್ಲದೆ ಬಾಡಗ ಬಾಣಂಗಾಲ ಗ್ರಾಮದ ಮಠದ ನಿವಾಸಿ ವಿಜಯ್ ಕುಮಾರ್ ಎಂಬವರಿಗೆ ಸೇರಿದ ಹಸುವನ್ನು ಮೇಯಲು ಬಿಟ್ಟಿದ್ದ ಸಂದರ್ಭ ಹುಲಿ ಅಟ್ಟಾಡಿಸಿಕೊಂಡು ಹೋಗಿ ದಾಳಿ ನಡೆಸಿ ಕುತ್ತಿಗೆ ಭಾಗಕ್ಕೆ ಗಾಯಗೊಳಿಸಿದೆ. ಈ ಹಸು ಜೀವನ್ಮರಣ ಸ್ಥಿತಿಯಲ್ಲಿದ್ದು ಇದಕ್ಕೆ ಪಶು ವೈದ್ಯಾಧಿಕಾರಿ ಸ್ಥಳಕ್ಕೆ ಭೇಟಿ ನೀಡಿ ಚಿಕಿತ್ಸೆಯನ್ನು ನೀಡಿದ್ದಾರೆ. ಮೃತ ಹಸುವಿನ ಮರಣೋತ್ತರ ಪರೀಕ್ಷೆಯನ್ನು ಪಾಲಿಬೆಟ್ಟದ ಪಶು ವೈದ್ಯ ಅಧಿಕಾರಿ ನವೀನ್ ಕುಮಾರ್ ನಡೆಸಿದರು.

ಇತ್ತೀಚಿಗಷ್ಟೇ ಈ ಭಾಗದಲ್ಲಿ ಹುಲಿ ದಾಳಿಯಿಂದ ಹಸುಗಳು ಸಾವನ್ನಪ್ಪಿರುವ ಘಟನೆ ೪ಐದನೇ ಪುಟಕ್ಕೆ