ಹೆಚ್.ಕೆ. ಜಗದೀಶ್
ಗೋಣಿಕೊಪ್ಪಲು, ನ ೩೦: ರಾತ್ರಿಯ ವೇಳೆ ಅಮ್ಮನ ಬಿಸಿ ಅಪ್ಪುಗೆಯಲ್ಲಿ ನಿದ್ರಿಸಬೇಕಾದ ೨ ವರ್ಷದ ಕಂದಮ್ಮ ಇಡೀ ರಾತ್ರಿಯನ್ನು ಚಳಿ, ಗಾಳಿ, ಕಾಡುಪ್ರಾಣಿಗಳ ಭಯದ ನಡುವೆ ಒಬ್ಬಂಟಿಯಾಗಿ ಕಾಫಿ ತೋಟದ ನಡುವೆ ಕಳೆದ ಆತಂಕಕಾರಿ ಘಟನೆ ಬಿ.ಶೆಟ್ಟಿಗೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊಂಗಣ ಗ್ರಾಮದಲ್ಲಿ ನಡೆದಿದೆ.
ಅರಣ್ಯ ಸಿಬ್ಬಂದಿಗಳ, ಗ್ರಾಮಸ್ಥರ ಸತತ ಕಾರ್ಯಾಚರಣೆ ಫಲದಿಂದ ಮುಂಜಾನೆ ೭ ಗಂಟೆಯ ಸುಮಾರಿಗೆ ಕಾಫಿ ತೋಟದಲ್ಲಿ ಮಗು ಸುರಕ್ಷಿತವಾಗಿ ಹೆತ್ತವರ ಮಡಿಲು ಸೇರಿದೆ.
ಏನಿದು ಘಟನೆ?
ಬಿ.ಶೆಟ್ಟಿಗೇರಿ ಗ್ರಾಮದ ಕೊಂಗಣ ಗ್ರಾಮಕ್ಕೆ ಕಳೆದ ೫ ದಿನಗಳ ಹಿಂದೆ ಜೇನು ಕುರುಬರ ಸುನಿಲ್ ಹಾಗೂ ನಾಗಿಣಿ ದಂಪತಿ ತಮ್ಮ ೨ ವರ್ಷದ ಪುತ್ರಿ ಸುನನ್ಯಳೊಂದಿಗೆ ಆಗಮಿಸಿ ಗ್ರಾಮದ ಬೆಳೆಗಾರರಾದ ಕಡೆಮಾಡ ಶರಿ ಗಣಪತಿ ಅವರ ಕಾಫಿ ತೋಟದಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದರು.
ಎAದಿನAತೆ ಕಾಫಿ ತೋಟದ ಕೆಲಸಕ್ಕೆ ತೆರಳಿದ್ದ ದಂಪತಿ ತನ್ನ ಕಂದಮ್ಮನನ್ನು ತೋಟಕ್ಕೆ ಕರೆದೊಯ್ದಿದ್ದರು. ಉಳಿದ ಕಾರ್ಮಿಕರು ಕೂಡ ತಮ್ಮ ಮಕ್ಕಳನ್ನು ತೋಟಕ್ಕೆ ಕರೆದುಕೊಂಡು ತೆರಳಿದ್ದರು. ಮಕ್ಕಳನ್ನು ಒಂದು ಕಡೆಯಲ್ಲಿ ಆಟವಾಡಲು ಬಿಟ್ಟು ಹೆತ್ತವರು ತಮ್ಮ ಕೆಲಸದಲ್ಲಿ ತೊಡಗಿಕೊಂಡಿದ್ದರು.
ಸಂಜೆಯ ವೇಳೆ ಕೆಲಸ ಮುಗಿಸಿದ ದಂಪತಿ ಆಟವಾಡಲು ಬಿಟ್ಟಿದ್ದ ಸ್ಥಳಕ್ಕೆ ತೆರಳಿ ನೋಡಿದಾಗ ಪುತ್ರಿ ಸುನನ್ಯ ಸ್ಥಳದಲ್ಲಿರಲಿಲ್ಲ. ಈ ಬಗ್ಗೆ ಉಳಿದ ಮಕ್ಕಳನ್ನು ವಿಚಾರಿಸಿದರಾದರೂ ಮುಗ್ಧ ಮಕ್ಕಳಿಗೆ ಸುನನ್ಯ ನಾಪತ್ತೆಯಾಗಿರುವುದು ಗಮನಕ್ಕೆ ಬಂದಿರಲಿಲ್ಲ.
ಗಾಬರಿಗೊಂಡ ದಂಪತಿ ಉಳಿದ ಕಾರ್ಮಿಕರ ಸಹಾಯದಿಂದ ಕಾಫಿ ತೋಟದಲ್ಲಿ ತನ್ನ ಕಂದಮ್ಮನಿಗಾಗಿ ಹುಡುಕಾಟ ನಡೆಸಿದರಾದರೂ ಮಗು ಸುಳಿವು ಮಾತ್ರ ಲಭ್ಯವಾಗಲಿಲ್ಲ. ತೋಟದಲ್ಲಿ ಎಷ್ಟೇ ಜೋರಾಗಿ ಕರೆದರೂ ಮಗುವಿನ ಚೀರಾಟವಾಗಲಿ, ಅಳುವಿನ ಶಬ್ದವಾಗಲಿ ಕೇಳಿ ಬಾರಲೇ ಇಲ್ಲ.
ಕಾಫಿ ತೋಟದಲ್ಲಿ ಮಗು ನಾಪತ್ತೆಯಾದ ವಿಷಯವನ್ನು ಕಾರ್ಮಿಕರು ತಮ್ಮ ತೋಟದ ಮಾಲೀಕರಿಗೆ ತಿಳಿಸುತ್ತಿದ್ದಂತೆಯೇ ತೋಟದ ಮಾಲೀಕರು ಬಿ.ಶೆಟ್ಟಿಗೇರಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಕೊಲ್ಲಿರ ಬೋಪಣ್ಣ ಗಮನಕ್ಕೆ ತಂದಿದ್ದಾರೆ. ಬಳಿಕ ಕೊಲ್ಲಿರ ಬೋಪಣ್ಣ ಅರಣ್ಯ ಇಲಾಖೆಯ ಡಿಎಫ್‌ಓ ನೆಹರು, ಎಸಿಎಫ್ ಗೋಪಾಲ್, ಆರ್‌ಎಫ್‌ಓ ಶಂಕರ್ ಅವರಿಗೆ ವಿಷಯ ಮುಟ್ಟಿಸಿದ್ದಾರೆ.
ಕಾಡು ಹಂದಿ ಕಳೇಬರ - ಹುಲಿ ಹೆಜ್ಜೆ ಗುರುತು
ಪೊನ್ನಂಪೇಟೆ ವಲಯ ಅರಣ್ಯ ಅಧಿಕಾರಿ ಶಂಕರ್‌ಗೆ ಮಾಹಿತಿ ಲಭ್ಯವಾಗುತ್ತಿದ್ದಂತೆಯೇ ೩೦ ಕ್ಕೂ ಅಧಿಕ ಸಿಬ್ಬಂದಿಗಳ ತಂಡ ಬಿ.ಶೆಟ್ಟಿಗೇರಿ, ಕೊಂಗಣ ಭಾಗಕ್ಕೆ ತೆರಳಿ ಕಾರ್ಯಾಚರಣೆ ಕೈಗೊಂಡರು.
ಸAಜೆ ೪ ಗಂಟೆಯಿAದ ನಡುರಾತ್ರಿ ಯವರೆಗೂ ಅರಣ್ಯ ಸಿಬ್ಬಂದಿಗಳು ಗ್ರಾಮಸ್ಥರ ಸಹಕಾರದೊಂದಿಗೆ ಇಡೀ ಕಾಫಿ ತೋಟ ಹುಡುಕಾಟ ನಡೆಸಿದರಾದರೂ ಮಗುವಿನ ಸುಳಿವು ಲಭ್ಯವಾಗಲಿಲ್ಲ. ರಾತ್ರಿಯ ವೇಳೆ ಕಾರ್ಯಾಚರಣೆ ಆರಂಭಿಸಿದ್ದ ಅರಣ್ಯ ಸಿಬ್ಬಂದಿಗಳಿಗೆ ಹುಲಿಯೊಂದು ಕಾಡು ಹಂದಿ ಯನ್ನು ಬೇಟೆಯಾಡಿ ಉಳಿದ ಕಳೇಬರವನ್ನು ಅಲ್ಲಿಯೇ ಬಿಟ್ಟು ತೆರಳಿರುವುದು ಗೋಚರಿಸಿದೆ. ಇದು ತಂಡವನ್ನು ವಿಚಲಿತಗೊಳಿಸಿದೆ. ಹುಲಿಯ ಹೆಜ್ಜೆ ಗುರುತುಗಳು ಮತ್ತಷ್ಟು ಗಾಬರಿ ಮೂಡಿಸಿತು. ತಡರಾತ್ರಿಯಾದರೂ ಮಗುವಿನ ಸುಳಿವು ಲಭ್ಯವಾಗದ ಹಿನ್ನೆಲೆಯಲ್ಲಿ ಅರಣ್ಯ ಸಿಬ್ಬಂದಿಗಳು ಮುಂಜಾನೆ ಆರು ಗಂಟೆಗೆ ಕಾರ್ಯಾಚರಣೆ ಮುಂದುವರೆಸಿದರು.
ಕಾಫಿ ತೋಟ, ಹೊಳೆ, ಕೆರೆಯಬದಿಯಲ್ಲಿ ನಾಲ್ಕು ತಂಡಗಳಾಗಿ ಕಾರ್ಯಾಚರಣೆ ಕೈಗೊಂ ಡರು. ಅರಣ್ಯ ಇಲಾಖೆಯೊಂದಿಗೆ ಗ್ರಾಮಸ್ಥರು ಕೂಡ ಕಾರ್ಯಾಚರಣೆಯಲ್ಲಿ ೪ಐದನೇ ಪುಟಕ್ಕೆ (ಮೊದಲ ಪುಟದಿಂದ)
ಕೈ ಜೋಡಿಸಿ ಮುಂಜಾನೆ ವೇಳೆ ಮಗು ಕಾಫಿ ತೋಟದ ಮಧ್ಯೆ ಕಂಡು ಬಂದಿದೆ.
ಈ ವೇಳೆ ಗೋಣಿಕೊಪ್ಪ ಪೊಲೀಸ್ ಠಾಣಾಧಿಕಾರಿ ಪ್ರದೀಪ್ ಕುಮಾರ್ ಕಾರ್ಮಿಕರ ಕುಟುಂಬಕ್ಕೆ ಕೆಲಸ ಮಾಡುವ ಸಂದರ್ಭದಲ್ಲಿ ಮಕ್ಕಳ ಬಗ್ಗೆ ನಿಗಾವಹಿಸುವಂತೆ ಸಲಹೆ ನೀಡಿದರು.
ಕಾರ್ಯಾಚರಣೆಯಲ್ಲಿ ಅರಣ್ಯ ಇಲಾಖೆಯ ಡಿಆರ್‌ಎಫ್‌ಒ ಜೆ.ಕೆ. ಶ್ರೀಧರ್, ನಾಗೇಶ್, ದಿವಾಕರ್, ಮಂಜುನಾಥ್, ಕಿರಣ ಆಚಾರ್ಯ, ಗಸ್ತು ಅರಣ್ಯ ಪಾಲಕರಾದ ಪೊನ್ನಪ್ಪ, ಸೋಮಣ್ಣ ಗೌಡ, ಅಂತೋಣಿ ಪ್ರಕಾಶ್, ಗ್ರಾಮಸ್ಥರಾದ ಕೊಲ್ಲಿರ ಬೋಪಣ್ಣ, ಕಡೆಮಾಡ ಅನಿಲ್ ಕಾಳಪ್ಪ, ಸಂತೋಷ್, ಸುಬ್ರಮಣಿ, ಶರತ್, ಆರ್‌ಆರ್‌ಟಿ ಸಿಬ್ಬಂದಿ ವರ್ಗದವರು ಪಾಲ್ಗೊಂಡಿದ್ದರು.