ಮಡಿಕೇರಿ, ನ. ೩೦: ಕರ್ನಾಟಕ ಬುಕ್ ಆಫ್ ರೆಕಾರ್ಡ್ಸ್ನಿಂದ ಕ್ರೀಡಾಪ್ರಾಧಿಕಾರದ ಕೊಡಗಿನ ಮಾಳೆಯಂಡ ಪೂವಯ್ಯ ಸಹೋದರರಾದ ಅರುಣ್ ಮತ್ತು ಅಶೋಕ್. (ಬ್ಯಾಡ್ಮಿಂಟನ್) ,ಬಲ್ಯಂಡ ಮೌರ್ಯ ಗಣಪತಿ (ಶಾಟ್‌ಪುಟ್) ಇವರುಗಳನ್ನು ಕರ್ನಾಟಕ ಕ್ರೀಡಾ ರತ್ನ ಎಂದು ಗೌರವ ನೀಡಿ ಗೌರವಿಸಲಾಯಿತು.
ಬೆಂಗಳೂರಿನ ವೈಟ್‌ಫೀಲ್ಡ್ನಲ್ಲಿರುವ ಒಸ್ಸೊಟ್ಟೊ ರಿಕ್ರಿಯೇಶನ್ ಕ್ಲಬ್‌ನಲ್ಲಿ ನಡೆದ ಸಮಾರಂಭದಲ್ಲಿ ೨೦೨೫ ರ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗಳ ಶುಭ ಸಂದರ್ಭದಲ್ಲಿ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.
ಪೂವಯ್ಯ ಸಹೋದರರನ್ನು ಸುಪ್ರೀಂಕೋರ್ಟ್ ಮಾಜಿ ನ್ಯಾಯಾಧೀಶ ಮತ್ತು ಖ್ಯಾತ ನ್ಯಾಯಶಾಸ್ತçಜ್ಞ ನ್ಯಾಯಮೂರ್ತಿ ಎನ್. ಸಂತೋಷ್ ಹೆಗ್ಡೆ ಸನ್ಮಾನಿಸಿದರು. ಮೌರ್ಯ ಗಣಪತಿ ಅವರನ್ನು ಮಾಜಿ ಕ್ರಿಕೆಟಿಗ ಸೈಯದ್ ಕಿರ್ಮಾನಿ ಸನ್ಮಾನಿಸಿದರು. ಈ ಕಾರ್ಯಕ್ರಮವನ್ನು ಕರ್ನಾಟಕ ಬುಕ್ ಆಫ್ ರೆಕಾರ್ಡ್ಸ್ನ ಮೌಲ್ಯಮಾಪನ ಮಂಡಳಿಯು ಆಯೋಜಿಸಿದೆ.