ಇಂದು ವಿಶ್ವ ಏಡ್ಸ್ ದಿನ

ಕಳೆದ ಸುಮಾರು ಐದು ದಶಕಗಳಿಂದ ಇಡೀ ವಿಶ್ವವನ್ನೇ ಬೆಚ್ಚಿಬೀಳಿಸಿ ಹಿಂಡಿ ಹಿಪ್ಪೆಯಾಗಿಸುತ್ತಿರುವ ಏಡ್ಸ್ ಎಂಬ ಮಹಾಮಾರಿಯನ್ನು ತೊಲಗಿಸಲು ವಿಜ್ಞಾನಿಗಳಿಗೆ ಇನ್ನೂ ಸಾಧ್ಯವಾಗಿಲ್ಲ. ಹಲವಾರು ಅಭಿವೃದ್ಧಿಗೊಂಡ ದೇಶಗಳು ತಾಂತ್ರಿಕವಾಗಿ ನಂಬಲೆಣಿಸಲಾಗದಷ್ಟು ವೇಗದಲ್ಲಿ ಹಲವಾರು ವಿಭಾಗಗಳಲ್ಲಿ ಪ್ರಗತಿ ಸಾಧಿಸಿದ್ದರೂ ಈ ಏಡ್ಸ್ ಎನ್ನುವ ವ್ಯಾಧಿಯನ್ನು ಆ ದೇಶಗಳÀ ಪರಿಣತರಿಗೂ ಕಟ್ಟಿಹಾಕಲು ಅಸಾಧ್ಯವೆನ್ನಿಸಿಬಿಟ್ಟಿದೆ. ಒಮ್ಮೆ ದೇಹಕ್ಕೆ ಈ ಏಡ್ಸ್ ಬೇನೆಯು ನುಸುಳಿಬಿಟ್ಟರೆ ಸಾಕು, ಅನಂತರದ ದಿನಗಳಲ್ಲಿ ದೈಹಿಕವಾಗಿಯೂ ಮಾನಸಿಕವಾಗಿಯೂ ಅವನನ್ನು ಬಳಲುವಂತೆ ಮಾಡಿ ಕೊನೆಗೆ ಆತನ ಜೀವವನ್ನು ಆಪೋಶನ ತೆಗೆದುಕೊಂಡು ಬಿಡುತ್ತದೆ. ಆದರೆ, ಏಡ್ಸ್ಗೆ ಚಿಕಿತ್ಸೆ ಇನ್ನೂ ಸಾಧ್ಯವಾಗಿಲ್ಲವಾದರೂ ಆದು ಮನುಷ್ಯನಿಗೆ ತಗಲದಂತೆ ಎಚ್ಚರಿಕೆ ತೆಗೆದುಕೊಳ್ಳುವುದಂತೂ ಸಾಧ್ಯವಾಗುತ್ತದೆ. ಇಂದು, ಡಿಸೆಂಬರ್ ಒಂದರAದು ವಿಶ್ವ ಏಡ್ಸ್ ದಿನವಾಗಿದ್ದು, ಮನುಕುಲವು ಏಡ್ಸ್ ರೋಗವು ತಾಗಿಕೊಳ್ಳದಂತೆ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ವಿಶ್ವದಾದ್ಯಂತ ಜಾಗೃತಿ ಮೂಡಿಸಲಾಗುತ್ತಿದೆ.

ಏಡ್ಸ್ ರೋಗವು ಹೆಚ್.ಐ.ವಿ. ಎನ್ನುವ ವೈರಸ್‌ನಿಂದ ಉಂಟಾಗುವ ರೋಗವಾಗಿದ್ದು, ಇದನ್ನು ಪಶ್ಚಿಮ ಆಫ್ರಿಕಾದಲ್ಲಿ ಇಪ್ಪತ್ತನೆಯ ಶತಮಾನದ ಮಧ್ಯಭಾಗÀದಲ್ಲಿ ಗುರುತಿಸಲಾಯಿತು. ೧೯೬೦ರ ಸಮಯದಲ್ಲಿ ಕಾಂಗೋ ದೇಶದ ಕಿನ್ಯಾಸ ಎಂಬಲ್ಲಿ ಏಡ್ಸ್ನ ಮೊದಲ ಪ್ರಕರಣ ದಾಖಲಾಗಿದ್ದು, ಇದನ್ನು ಲಿಂಫಡಿನೋಪತಿ ರೋಗವೆಂದು ಭಾವಿಸಲಾಗಿತ್ತು. ೧೯೮೨ರಲ್ಲಿ ಇದರ ನಿಜರೂಪವು ಅರಿವಿಗೆ ಬಂದಿದ್ದು ಅನಂತರ ಇದಕ್ಕೆ ಏಡ್ಸ್ ಎಂಬ ಹೆಸರನ್ನು ನೀಡಲಾಯಿತು. ಭಾರತದಲ್ಲಿ ಈ ರೋಗದ ಮೊದಲ ಸೋಂಕನ್ನು ೧೯೮೬ರಲ್ಲಿ ಚೆನ್ನೆöÊನ ಮಹಿಳಾ ಲೈಂಗಿಕ ಕಾರ್ಯಕರ್ತೆಯಲ್ಲಿ ಗುರುತಿಸಲಾಯಿತು. ಮೊದಲಿಗೆ ಆಫ್ರಿಕಾದ ಕೆಲವು ಮಂಗಗಳಲ್ಲಿ ಈ ರೋಗವು ಕಂಡುಬAದರೂ ಆ ಮಂಗಗಳಿAದ ಮನುಜರಿಗೆ ಈ ರೋಗವು ಹೇಗೆ ಹರಡಿತೆಂಬುದು ಇನ್ನೂ ಚಿದಂಬರ ರಹಸ್ಯವಾಗಿಯೇ ಉಳಿದಿದೆ.

ಏಡ್ಸ್ ರೋಗದ ಲಕ್ಷಣಗಳು: ಮನುಷ್ಯರಿಗೆ ಏಡ್ಸ್ ರೋಗ ತಗುಲಿದರೆ ಅದು ಹಲವಾರು ಹಂತಗಳನ್ನು ಪ್ರವೇಶಿಸುತ್ತದೆ. ಮೊದಲ ಹಂತದಲ್ಲಿ ಯಾವುದೇ ಔಷಧಕ್ಕೂ ಬಗ್ಗದ ಜ್ವರ, ಗಂಟಲು ನೋವು, ಆಯಾಸ, ಚರ್ಮದಲ್ಲಿ ತುರಿಕೆ ಹಾಗೂ ಹಲವಾರು ಗ್ರಂಥಿಗಳಲ್ಲಿ ಊತ ಕಾಣಿಸಿಕೊಳ್ಳುವುದು. ಅನಂತರದ ಹಂತಗಳಲ್ಲಿ ನಿರೀಕ್ಷೆಗೂ ಮೀರಿದ ತೂಕದ ನಷ್ಟ, ಗುಣವೇ ಆಗದ ಸೋಂಕುಗಳು, ಅತಿಸಾರ, ಬಾಯಿಯಲ್ಲಿ ಗುಳ್ಳೆಗಳು ಮತ್ತು ನಿಶ್ಶಕ್ತಿ ಹಾಗೂ ದೌರ್ಬಲ್ಯಗಳು ಉಂಟಾಗುವುದು. ಸೋಂಕು ತಗುಲಿದ ಮೊದಲ ತಿಂಗಳಿನಲ್ಲಿ ಜ್ವರ, ಶೀತ, ತಲೆನೋವು, ಸ್ನಾಯುಗಳಲ್ಲಿ ಸೆಳೆತಗಳ ಜೊತೆಯಲ್ಲಿ ರಾತ್ರಿ ಬೆವರುವುದು ಕಾಣಿಸಿಕೊಳ್ಳುತ್ತದೆ. ಅನಂತರ ರೋಗವು ಬಲಗೊಳ್ಳುತ್ತ ಹೋದಂತೆ ತೂಕನಷ್ಟ, ಕೆಮ್ಮು, ಬಾಯಿ ಮತ್ತು ಜನನಾಂಗಗಳಲ್ಲಿ ಬಿಳಿಮಚ್ಚೆ ಅಥವಾ ಹುಣ್ಣುಗಳು, ಮರುಕಳಿಸುವ ಸೋಂಕುಗಳು, ದೇಹದ ರಕ್ಷಣಾ ವ್ಯವಸ್ಥೆಯಲ್ಲಿ ಕುಸಿತ. ಮರೆÀವಿನ ಕಾಯಿಲೆ ಹೀಗೆ ಹಲವಾರು ಸಮಸ್ಯೆಗಳು ಉಂಟಾಗಬಹುದು.

ಏಡ್ಸ್ ತಗಲುವುದಕ್ಕೆ ಕಾರಣಗಳು: ಇದು ಮನುಷ್ಯನಿಗೆ ಅಂಟುವುದಕ್ಕೆ ನಾಲ್ಕು ಪ್ರಮುಖ ಕಾರಣಗಳನ್ನು ಗುರುತಿಸಲಾಗಿದೆ. ಮೊದಲನೆಯದಾಗಿ ಏಡ್ಸ್ ರೋಗವನ್ನು ಹೊಂದಿರುವವರ ಜೊತೆಯಲ್ಲಿ ಲೈಂಗಿಕ ಸಂಪರ್ಕವು ಪ್ರಮುಖ ಕಾರಣವಾಗಿರುತ್ತದೆ. ಎಷ್ಟೇ ಸುರಕ್ಷಾ ವಿಧಾನವನ್ನು ಅನುಸರಿಸಿದರೂ ಏಡ್ಸ್ ಹೊಂದಿದ ವ್ಯಕ್ತಿಗಳೊಂದಿಗೆ ನಡೆಸುವ ಲೈಂಗಿಕ ಕ್ರಿಯೆಯು ಈ ರೋಗವನ್ನು ಹಬ್ಬಿಸಬಹುದು. ಅದರಲ್ಲಿಯೂ ಪಾಶ್ಚಾತ್ಯರು ಬಯಸುವ ಸಲಿಂಗ ಕಾಮವಂತೂ ಏಡ್ಸ್ ಮಾರಿಗೆ ಆಹ್ವಾನವನ್ನು ಇತ್ತಂತೇ ಆಗುವುದು. ಎರಡನೆಯದಾಗಿ ಈ ರೋಗದಿಂದ ಬಳಲುವವರ ರಕ್ತವನ್ನು ತನ್ನ ದೇಹದ ರಕ್ತದ ಕೊರತೆೆಯನ್ನು ತುಂಬಿಸಿಕೊಳ್ಳಲು ಪಡೆದುಕೊಳ್ಳುವ ರೋಗಿಗಳಿಗೂ ಈ ರೋಗ ಹರಡುವುದು. ಮೂರನೆಯ ಕಾರಣವೆಂದರೆ ದೇಹದ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಲು ಹಚ್ಚೆ ಹುಯ್ಯಿಸಿಕೊಳ್ಳಲು ಬಳಸುವ ಸೂಜಿಯಿಂದಲೂ ಈ ಮಾರಕರೋಗ ಹರಡುತ್ತದೆ. ನಾಲ್ಕನೆಯದಾಗಿ ಏಡ್ಸ್ ರೋಗಿಯು ಬಳಸಿದ ಸಿರಂಜ್ ಅಥವಾ ಶೇವಿಂಗ್ ಬ್ಲೇಡನ್ನು ಆರೋಗ್ಯವಂತನು ಬಳಸಿದರೆ ಆ ಮೂಲಕವೂ ಈ ರೋಗ ಹರಡಿಬಿಡುತ್ತದೆ.ಕೊನೆಯದಾಗಿ ಮಾದಕದ್ರವ್ಯಾಸಕ್ತರು ಸಾಮೂಹಿಕವಾಗಿ ನಶೆಯ ವಸ್ತುಗಳನ್ನು ಬಳಸುವುದರಿಂದಲೂ ಈ ರೋಗ ಹರಡಬಹುದು.

ರೋಗ ವ್ಯಾಪಿಸದಂತೆ ಕ್ರಮಗಳು: ಮೊದಲನೆಯದಾಗಿ ಪ್ರತಿಯೊಬ್ಬ ಪ್ರಜೆಗೂ ಏಡ್ಸ್ ರೋಗದ ಹರಡುವಿಕೆಯ ಕಾರಣಗಳ ಬಗ್ಗೆ ತಿಳಿವನ್ನು ನೀಡಬೇಕು. ಪ್ರೌಢಶಾಲೆಯ ಹಂತದಲ್ಲಿಯೇ ವಿದ್ಯಾರ್ಥಿಗಳಿಗೆ ಇದರ ಬಗ್ಗೆ ಶಿಕ್ಷಣ ನೀಡಬೆಕು. ಯಾವುದೇ ವ್ಯಕ್ತಿಯು ವಿವಾಹ ಪೂರ್ವದಲ್ಲಿ ಇತರರೊಂದಿಗೆ ಲೈಂಗಿಕ ಸಂಪರ್ಕ ಮಾಡಲೇಬಾರದು. ಅನಂತರವೂ ಪರರೊಂದಿಗೆ ದೈಹಿಕ ಬಯಕೆಯನ್ನು ತಣಿಸಿಕೊಳ್ಳಲೇಬಾರದು ಎನ್ನುವುದನ್ನು ತಿಳಿಸಿಕೊಡಬೇಕು. ಇದು ತುಸು ಮುಜುಗರ ತರಲು ಕಾರಣವಾದರೂ ಈ ಶಿಕ್ಷಣ ಅನಿವಾರ್ಯ ಆಗಿರುತ್ತದೆ. ಎರಡನೆಯದಾಗಿ ದೇಹಕ್ಕೆ ಹಚ್ಚೆಯನ್ನು ಹಾಕಿಸಿಕೊಳ್ಳುವುದು ತೀರ ಅಪಾಯಕಾರಿಯಾಗಿರುತ್ತದೆ. ವ್ಯಾಧಿಗ್ರಸ್ಥರು ಬಳಸಿದ ಸೂಜಿಯನ್ನೇ ಮತ್ತೆ ಆರೋಗ್ಯವಂತರೂ ಬಳಸಬಹುದಾದ ಸಾಧ್ಯತೆ ಇರುವುದರಿಂದ ಹಚ್ಚೆ ಹಾಕಿಸಿಕೊಳ್ಳುವ ಹುಚ್ಚನ್ನು ಮೊದಲು ನಿಲ್ಲಿಸಬೇಕು. ಮೂರನೆಯದಾಗಿ ಎಲ್ಲ ಚಿಕಿತ್ಸಾಲಯಗಳಲ್ಲಿಯೂ ಇಂಜೆಕ್ಷನ್ ಸೂಜಿಗಳನ್ನು ಮರುಬಳಕೆ ಮಾಡದಂತೆ ಕ್ರಮವನ್ನು ಕೈಗೊಳ್ಳಬೇಕು. ಪ್ರತಿಬಾರಿಯೂ ಸೂಜಿ ಹಾಕುವಾಗ ಹೊಚ್ಚಹೊಸ ಸೂಜಿಯನ್ನೇ ಬಳಸುವಂತೆ ನಿಯಮವನ್ನು ತರಬೇಕು. ಇದು ತುಸು ವೆಚ್ಚದ ವಿಷಯವಾದರೂ ಆರೋಗ್ಯದ ದೃಷ್ಟಿಯಿಂದ ಈ ನಿಯಮವು ಸ್ವಾಗತಾರ್ಹವಾಗಿದೆ. ಅಂತೆಯೇ ಒಬ್ಬರು ಬಳಸಿದ ಶೇವಿಂಗ್ ಬ್ಲೇಡನ್ನಾಗಲೀ, ಮೀಸೆಕತ್ತರಿಯನ್ನಾಗಲೀ ಇತರರು ಬಳಸಬಾರದು. ಒಬ್ಬರು ಸೇದಿದ ಸಿಗರೇಟನ್ನು “ಕೇವಲ ಒಂದು ದಮ್ ಮಾತ್ರ” ಎಂದು ಇತರರು ಸೇದುವುದಂತೂ ಬಹಳ ತಪ್ಪಿನ ವಿಷಯವಾಗುತ್ತದೆ. ವರ್ಷದ ಎಲ್ಲ ದಿವಸಗಳಲ್ಲಿಯೂ ಸಭೆ - ಸಮಾರಂಭಗಳನ್ನು ನಡೆಸಿ, ಪತ್ರಿಕೆ ಮತ್ತು ಇತರ ವಿದ್ಯುನ್ಮಾನ ಮಾಧ್ಯಮಗಳ ಮೂಲಕ ಜನರನ್ನು, ಅದರಲ್ಲಿಯೂ ವಿಶೇಷವಾಗಿ ನವಪೀಳಿಗೆಯನ್ನು ಏಡ್ಸ್ ವಿಷಯದಲ್ಲಿ ಜಾಗೃತರಾಗುವಂತೆ ಮಾಡುವುದು ಕೇವಲ ಸಮಾಜಸೇವಕರ ಕರ್ತವ್ಯವಲ್ಲ, ಸರಕಾರದ್ದೂ ಆಗಿರುತ್ತದೆ. ಏಕೆಂದರೆ ಒಮ್ಮೆ ಈ ವ್ಯಾದಿ ತಗುಲಿದರೆ ಅದಕ್ಕೆ ಮದ್ದೇ ಇಲ್ಲದಿರುವುದರಿಂದ ಅಥವಾ ಆಧುನಿಕ ಚಿಕಿತ್ಸೆಯ ಮೂಲಕ ಬದುಕಿನ ದಿನಗಳನ್ನು ತುಸು ಹೆಚ್ಚುಗೊಳಿಸಬಹುದಷ್ಟೇ ವಿನಹ ಇದನ್ನು ಗುಣಪಡಿಸಲು ಅಸಾಧ್ಯವಾಗಿರುವುದರಿಂದ ಆರೋಗ್ಯವಂತ ಸಮಾಜವನ್ನು ಹಾಳುಗೆಡವದಿರಲು ಜನಜಾಗೃತಿ ಮಾಡಲೇಬೇಕಾಗಿದೆ. ಹಾಗಿದ್ದಾಗ ಮಾತ್ರ ಏಡ್ಸ್ ದಿನಕ್ಕೆ ನಿಜವಾದ ಅರ್ಥ ಬರುತ್ತದೆ.

- ಕಿಗ್ಗಾಲು ಎಸ್. ಗಿರೀಶ್, ಮೂರ್ನಾಡು. ಮೊ. ೯೧೪೧೩ ೯೫೪೨೬.