ನಾಪೋಕ್ಲು, ನ. ೩೦: ಡೆಕ್ಕನ್ ಯೂತ್ ಕ್ಲಬ್ ವತಿಯಿಂದ ಸಾಧಕ ಮಕ್ಕಳ ಪೋಷಕರಿಗೆ ಹಾಗೂ ಸಮಾಜ ಸೇವಕರಿಗೆ ಸನ್ಮಾನ ಕಾರ್ಯಕ್ರಮವನ್ನು ಆಯೋಜಿಸ ಲಾಯಿತು. ಉನ್ನತ ಶ್ರೇಣಿಯಲ್ಲಿ ಅಂಕ ಪಡೆದು ವೈದ್ಯಕೀಯ ಶಿಕ್ಷಣ ವಿದ್ಯಾರ್ಥಿಗಳಾದ ಶಮ ಎಂ.ಎA ಅವರ ಪೋಷಕರಾದ ಡೆಕ್ಕನ್ ಯೂತ್ ಕ್ಲಬ್ ಮಾಜಿ ಅಧ್ಯಕ್ಷ ಎಂ.ಎ. ಮನ್ಸೂರ್ ಆಲಿ, ವಿದ್ಯಾರ್ಥಿನಿ ಹಫೀಯ ಫಾತಿಮಾ ಪೋಷಕರಾದ ಹುಸೇನ್ ಅವರಿಗೆ ಸೇರಿದಂತೆ ವೀರಾಜಪೇಟೆಯ ಸರಕಾರಿ ಆಸ್ಪತ್ರೆಯಲ್ಲಿ ಲ್ಯಾಬ್ ಟೆಕ್ನೀಶಿಯನ್ ಆಗಿ ಕಾರ್ಯನಿರ್ವಹಿಸುತ್ತಿರುವ ಇಲ್ಲಿಯ ಇಂದಿರ ನಗರದ ನಿವಾಸಿ ಪಿ.ಜಿ ಸುಬ್ರಮಣಿ ಅವರ ಸಮಾಜ ಸೇವೆ ಪರಿಗಣಿಸಿ ಅವರನ್ನು ಡೆಕ್ಕನ್ ಯೂತ್ ಕ್ಲಬ್ ಪರವಾಗಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಗಣ್ಯರು ಸನ್ಮಾನಿಸಿ ಗೌರವಿಸಿದರು.

ಡೆಕ್ಕನ್ ಯೂತ್ ಕ್ಲಬ್ ಅಧ್ಯಕ್ಷ ಜೈನುಲ್ ಆಬಿದ್ ಅವರ ಅಧ್ಯಕ್ಷತೆಯಲ್ಲಿ ಇಲ್ಲಿಯ ಕೆಪಿಎಸ್ ಶಾಲಾ ಆಟದ ಮೈದಾನದಲ್ಲಿ ಆಯೋಜಿಸಿದ ಜಿಲ್ಲಾ ಮಟ್ಟದ ವಾಲಿಬಾಲ್ ಪಂದ್ಯಾಟ ಕಾರ್ಯಕ್ರಮದಲ್ಲಿ ಸನ್ಮಾನ ಕಾರ್ಯಕ್ರಮವನ್ನು ಆಯೋಜಿಸಲಾಯಿತು.

ಈ ಸಂದರ್ಭ ಹೊದ್ದೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಹಂಸ ಕೊಟ್ಟಮುಡಿ, ವಿಎಸ್‌ಎಸ್‌ಎನ್ ನಿರ್ದೇಶಕ ಅರೆಯಡ ರತ್ನ ಪೆಮ್ಮಯ್ಯ, ನಾಪೋಕ್ಲು ಪಂಚಾಯಿತಿ ಮಾಜಿ ಅಧ್ಯಕ್ಷ ಹಾಲಿ ಸದಸ್ಯ ಕೆ ಎ ಇಸ್ಮಾಯಿಲ್, ಯುನೆಸ್ ಪಿಎಂ, ರಶೀದ್ ಪಿ ಎಂ, ಅರಫತ್, ಸಿರಾಜುದ್ದೀನ್ ಚೆರಿಯಪರಂಬು, ಆದಿಲ್, ಅಹ್ಮದ್ ಸಿ. ಎಚ್, ಹಾರೀಸ್, ಆಸ್ಕರ್, ಆಸಿಫ್, ರಶೀದ್ ಪಿ.ಎಂ, ಮಹಮ್ಮದ್ ಅಲಿ, ಅಹಮದ್ ಸಿ ಎಚ್, ಉಪಾಧ್ಯಕ್ಷ ಸಂಶು ಕಾರೆಕ್ಕಾಡ್, ಕ್ಲಬ್‌ನ ಪದಾಧಿಕಾರಿಗಳು ಹಾಗೂ ಸದಸ್ಯರು ಪಾಲ್ಗೊಂಡಿದ್ದರು.