ಐಗೂರು, ನ. ೨೬: ಐಗೂರು ಗ್ರಾಮ ಪಂಚಾಯಿತಿಯ ಗ್ರಾಮ ಸಭೆ ಪ್ರಾರಂಭದಲ್ಲೇ ಗಲಾಟೆ ಗದ್ದಲಗಳ ನಡುವೆ ಗೊಂದಲದ ಗೂಡಾಗಿ ಪರಿಣಮಿಸಿ ರದ್ದಾದ ಘಟನೆ ನಡೆಯಿತು.
ಪ್ರಾರ್ಥನೆ, ನಾಡಗೀತೆ ಮುಗಿದ ನಂತರ ನೋಡಲ್ ಅಧಿಕಾರಿ ಪಶು ಸಂಗೋಪನಾ ಇಲಾಖೆಯ ಡಾ.ಅಮರ್, ಗ್ರಾಮ ಪಂಚಾಯಿತಿ ಅಧ್ಯಕ್ಷ ಜಿ.ಕೆ. ವಿನೋದ್ ಮತ್ತು ಪಿಡಿಓ ಪೂರ್ಣಕುಮಾರ್ ಸಭೆ ಪ್ರಾರಂಭಿಸುತ್ತಿದ್ದAತೆ ಗ್ರಾಮಸ್ಥರಾದ ಕೆ.ಪಿ. ದಿನೇಶ್, ಕೆ.ಪಿ. ರಾಯ್, ಆಟ ಕೋಯಾ ಮತ್ತು ಕೆ.ಎಲ್. ಹೊನ್ನಪ್ಪ ಗ್ರಾಮಸಭೆ ನಡೆಸಲು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.
ಸಭೆಯಲ್ಲಿ ಆಶಾ, ಅಂಗನವಾಡಿ ಕಾರ್ಯಕರ್ತೆಯರು, ಗ್ರಾಮ ಪಂಚಾಯಿತಿ ಸಿಬ್ಬಂದಿ, ವಿವಿಧ ಇಲಾಖಾಧಿಕಾರಿಗಳಿದ್ದು, ಬೆರಳೆಣಿಕೆ ಮಂದಿ ಗ್ರಾಮಸ್ಥರು ಮಾತ್ರ ಭಾಗವಹಿಸಿದ್ದಾರೆ. ಹೀಗಿರುವಾಗ ಸಭೆ ನಡೆಸುವ ಔಚಿತ್ಯವೇನು ಎಂದು ಪ್ರಶ್ನಿಸಿದರು. ಅಲ್ಲದೆ ಸುಬ್ರಹ್ಮಣ್ಯ ಷಷ್ಠಿಯಂದೇ ಗ್ರಾಮ ಸಭೆಯನ್ನು ನಡೆಸಲು ವಿರೋಧ ವ್ಯಕ್ತವಾಯಿತು. ಗ್ರಾಮ ಸಭೆ ನಡೆಯುವ ಸಂಬAಧ ಪ್ರಚಾರದ ಕೊರತೆ ಎದ್ದು ಕಾಣುತ್ತಿದ್ದು, ತಾ.೨೫ರಂದು ವಾರ್ಡ್ಸಭೆ, ತಾ.೨೬ ರಂದು ಗ್ರಾಮ ಸಭೆ ಏರ್ಪಡಿಸಲಾಗಿದ್ದು, ಈ ರೀತಿ ಒಟ್ಟೊಟ್ಟಿಗೆ ಸಭೆ ನಡೆಸಿದ ಕಾರಣ ಸಾರ್ವಜನಿಕರು ಸಭೆಗೆ ಬರುತ್ತಿಲ್ಲ ಎಂಬ ಮಾತು ಕೇಳಿಬಂತು. ಪಿಡಿಓ ಪೂರ್ಣಕುಮಾರ್ ಮಾತನಾಡಿ, ನಾವು ಗ್ರಾಮ ವ್ಯಾಪ್ತಿಯಲ್ಲಿ ಗ್ರಾಮ ಸಭೆಯ ಬಗ್ಗೆ ಪ್ರಚಾರ ಮಾಡಿದ್ದು, ಪತ್ರಿಕೆಗಳಲ್ಲೂ ಸುದ್ದಿ ಪ್ರಕಟಗೊಂಡಿದೆ ಎಂದು ಸಭೆಗೆ ತಿಳಿಸಿದರು. ಆದರೂ ಸಭೆ ನಡೆಸದಂತೆ ಗ್ರಾಮಸ್ಥರು ಪಟ್ಟುಹಿಡಿದ ಕಾರಣ ಕೊನೆಗೆ ಸಭೆಯನ್ನು ರದ್ದುಗೊಳಿಸಲಾಯಿತು. ಡಿ.೬ಂದು ಗ್ರಾಮಸಭೆಯನ್ನು ನಡೆಸಲು ತೀರ್ಮಾನಿಸಲಾಯಿತು.