ಮಡಿಕೇರಿ, ನ. ೨೬: ಶತಮಾನೋತ್ಸವ ಸಂಭ್ರಮದಲ್ಲಿರುವ ಸಮಸ್ತ ಉಲಮಾ ಸಂಘಟನೆಯ ಅಂತರರಾಷ್ಟಿçÃಯ ಮಹಾ ಸಮ್ಮೇಳನದ ಹಿನ್ನೆಲೆ ತಾ. ೨೯ ರಂದು ಮಡಿಕೇರಿಯಲ್ಲಿ ಜಿಲ್ಲಾ ಉಲಮಾ ಒಕ್ಕೂಟದ ವತಿಯಿಂದ ಪ್ರಚಾರ ಸಮ್ಮೇಳನ ಆಯೋಜಿಸಲಾಗಿದೆ ಎಂದು ಸಂಘಟನೆ ಪ್ರಮುಖರು ಮಾಹಿತಿ ನೀಡಿದರು.

ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಂಟಿ ಕಾರ್ಯದರ್ಶಿ ಎಂ.ವೈ ಅಶ್ರಫ್ ಫೈಝಿ, ಸಮಾಜದ ಸರ್ವತೋಮುಖ ಅಭಿವೃದ್ಧಿ ಮತ್ತು ಮುಸ್ಲಿಂ ಸಮುದಾಯದ ಶೈಕ್ಷಣಿಕ ಮತ್ತು ಸಮಾಜಿಕ ಏಳಿಗೆಗಾಗಿ ೧೯೨೬ರಲ್ಲಿ ಉಲಮಾ ಸಂಘಟನೆ ರೂಪುಗೊಂಡಿತು. ೩೫ಕ್ಕೂ ಹೆಚ್ಚು ದೇಶದಲ್ಲಿ ಸಂಘಟನೆ ಕಾರ್ಯಾಚರಿಸುತ್ತಿದೆ. ೧೯೬೦ರಲ್ಲಿ ಕೊಡಗಿನಲ್ಲಿ ಸಂಘಟನೆ ಆರಂಭಗೊAಡಿದೆ. ಹಲವಷ್ಟು ಸಮಾಜಮುಖಿ ಕಾರ್ಯವನ್ನು ನಡೆಸಲಾಗುತ್ತಿದೆ ಎಂದರು.

ಉಲಮಾ ಸಂಘಟನೆಗೆ ೧೦೦ ವರ್ಷ ತುಂಬಿದ ಹಿನ್ನೆಲೆ ಫೆಬ್ರವರಿ ೪ ರಿಂದ ೮ರ ತನಕ ನೂರನೇ ಅಂತರರಾಷ್ಟಿçÃಯ ಮಹಾಸಮ್ಮೇಳನ ಕೇರಳದ ಕಾಸರಗೋಡಿನ ಕುಣಿಯ ಎಂಬಲ್ಲಿ ನಡೆಯಲಿದ್ದು, ಸಮ್ಮೇಳನದ ಪ್ರಚಾರಕ್ಕಾಗಿ ತಾ. ೨೯ ರಂದು ಮಡಿಕೇರಿಯ ಗಾಂಧಿ ಮೈದಾನದಲ್ಲಿ ಮಹಾಸಮ್ಮೇಳವನ್ನು ಆಯೋಜಿಸಲಾಗಿದೆ. ನಗರದ ಗಾಂಧಿ ಮೈದಾನದಲ್ಲಿ ಪಿ.ಬಿ.ಇಸ್ಮಾಯಿಲ್ ಮುಸ್ಲಿಯಾರ್ ಕಲ್ಲುಬಾಣೆ ಅವರ ನೇತೃತ್ವದಲ್ಲಿ ಬೆಳಿಗ್ಗೆ ೯ ಗಂಟೆಗೆ ಧ್ವಜಾರೋಹಣದ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು. ೧೦ ಗಂಟೆಗೆ ಸಮ್ಮೇಳನದ ಅಧ್ಯಯನ ಶಿಬಿರ ನಡೆಯಲಿದ್ದು, ಕಾರ್ಯಕ್ರಮದಲ್ಲಿ ಸುಮಾರು ೧೦ ಸಾವಿರ ಮಂದಿ ಸೇರುವ ನಿರೀಕ್ಷೆ ಇದೆ ಎಂದರು.

ಬೆಳಿಗ್ಗೆ ೯ ಗಂಟೆಯಿAದ ರಾತ್ರಿ ೧೦ ಗಂಟೆ ತನಕ ಕಾರ್ಯಕ್ರಮ ನಡೆಯಲಿದ್ದು, `ಅಧ್ಯಾತ್ಮಿಕತೆ ಅನಿವಾರ್ಯತೆ’ ಎಂಬ ವಿಷಯದ ಕುರಿತು ಸಯ್ಯಿದ್ ಝೈನುಲ್ ಅಬಿದೀನ್ ತಂಙಳ್ ಬೆಳ್ತಂಗಡಿ ವಿಷಯ ಮಂಡಿಸಲಿದ್ದಾರೆ. ಸಂಘಟನೆಯ ಪ್ರಾಮುಖ್ಯತೆ ಕುರಿತು ಇಬ್ರಾಯಿಂ ಫೈಝಿ ಪೇರಾಲ್ ಉಪನ್ಯಾಸ ನೀಡಲಿದ್ದಾರೆ. ಸಂಜೆ ಜಿಲ್ಲಾ ಉಲಮಾ ಒಕ್ಕೂಟದ ಅಧ್ಯಕ್ಷ ಎಂ.ಎA. ಅಬ್ದುಲ್ಲಾ ಫೈಝಿ ಅಧ್ಯಕ್ಷತೆಯಲ್ಲಿ ಸಮಾರೋಪ ಸಮ್ಮೇಳನ ನಡೆಯಲಿದ್ದು, ಸಮಸ್ತ ಕೇಂದ್ರಿಯ ಜಂಇಯ್ಯುತುಲ್ ಉಲಮಾ ಅಧ್ಯಕ್ಷ ಸಯ್ಯಿದುಲ್ ಉಲಮಾ ಸಯ್ಯದ್ ಮುಹಮ್ಮದ್ ಜಿಫ್ರಿ ಮುತ್ತುಕ್ಕೋಯ ತಂಙಳ್ ಉದ್ಘಾಟಿಸಲಿದ್ದಾರೆ. ಕೇಂದ್ರ ಮುಶಾವರ ಸದಸ್ಯ ಅಬ್ದುಲ್ ಖಾದರ್ ಅಲ್ ಖಾಸಿಮಿ ಬಂಬ್ರಾಣ, ಅಬ್ದುಲ್ ಸಲಾಂ ದಾರಿಮಿ ಆಲಂಬಾಡಿ, ಉಸ್ಮಾನುಲ್ ಫೈಝಿ ತೋಡಾರು, ಅಬ್ದುಲ್ ಫೈಝಿ ಅಂಬಲಕ್ಕಡವು, ಸತ್ತಾರ್ ಪಂದಲ್ಲೂರು, ಹೈದರ್ ದಾರಿಮಿ ಕರಾಯ ಮುಖ್ಯ ಭಾಷಣ ಮಾಡಲಿದ್ದಾರೆ. ಸಮಸ್ತ ಜಿಲ್ಲಾ ಕಾರ್ಯದರ್ಶಿ ಉಸ್ಮಾನ್ ಫೈರಿh, ಮಾಜಿ ಶಾಸಕ ಇಬ್ರಾಹಿಂ ಮಾಸ್ಟರ್, ಕೆ.ಎ. ಯಾಕುಬ್ ಬಜೆಗುಂಡಿ, ಬಶೀರ್ ಹಾಜಿ ಸೇರಿದಂತೆ ಧಾರ್ಮಿಕ ಹಾಗೂ ಸಾಮಾಜಿಕ ಕ್ಷೇತ್ರದ ಅನೇಕ ನಾಯಕರು ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.

ಗೋಷ್ಠಿಯಲ್ಲಿ ಜಿಲ್ಲಾ ಉಲಮಾ ಒಕ್ಕೂಟದ ಅಧ್ಯಕ್ಷ ಎಂ.ಎA. ಅಬ್ದುಲ್ಲಾ ಫೈಝಿ, ಪ್ರಧಾನ ಕಾರ್ಯದರ್ಶಿ ಎ.ಸಿ. ಉಸ್ಮಾನ್ ಫೈಝಿ, ಸಂಘಟನಾ ಕಾರ್ಯದರ್ಶಿ, ಜಂಟಿ ಕಾರ್ಯದರ್ಶಿ ಝೈನುದ್ದೀನ್ ಫೈಝಿ, ಸದಸ್ಯ ಪಿ.ಎಂ. ಆರೀಫ್ ಫೈಝಿ ಹಾಜರಿದ್ದರು.