ಚೆಯ್ಯಂಡಾಣೆ, ನ. ೨೬ : ರಸ್ತೆಯಲ್ಲಿದ್ದ ಗುಂಡಿ ತಪ್ಪಿಸಲು ಹೋಗಿ ಚಾಲಕನ ನಿಯಂತ್ರಣ ಕಳೆದುಕೊಂಡ ಕಾರೊಂದು ರಸ್ತೆ ಬದಿಯ ತೋಟದೊಳಕ್ಕೆ ನುಗ್ಗಿದ ಘಟನೆ ನಾಪೋಕ್ಲು ಮಡಿಕೇರಿ ಮುಖ್ಯ ರಸ್ತೆಯ ಕೊಟ್ಟಮುಡಿ ಜಂಕ್ಷನ್ ಬಳಿ ನಡೆದಿದೆ.
ಬೆಟ್ಟಗೇರಿ ಕೊಟ್ಟಮುಡಿ ಮಾರ್ಗವಾಗಿ ಎಮ್ಮೆಮಾಡುವಿಗೆ ತೆರಳುತ್ತಿದ್ದ ಕೇರಳ ನೋಂದಣಿಯ ಮಾರುತಿ ಆಲ್ಟೊ ಕಾರು ಕೊಟ್ಟಮುಡಿ ಜಂಕ್ಷನ್ ಬಳಿ ರಸ್ತೆಯಲ್ಲಿದ್ದ ಗುಂಡಿ ತಪ್ಪಿಸಲು ಹೋಗಿ ಚಾಲಕನ ನಿಯಂತ್ರಣ ಕಳೆದುಕೊಂಡು ರಸ್ತೆ ಬದಿಯ ಜೆವಿ ಎಸ್ಟೇಟ್ ತೋಟದೊಳಗೆ ನುಗ್ಗಿದೆ. ಅಪಘಾತದಿಂದ ಕಾರಿನ ಒಂದು ಬದಿಗೆ ಹಾನಿಯಾಗಿದ್ದು ಕಾರಿನಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ರಸ್ತೆ ಗುಂಡಿಗಳಿAದ ಹಲವು ವಾಹನಗಳು ಅಪಘಾತಕ್ಕೊಳಗಾಗುತ್ತಿದ್ದು, ಕೂಡಲೇ ಸಂಬAಧಪಟ್ಟ ಇಲಾಖೆ ರಸ್ತೆ ದುರಸ್ತಿಪಡಿಸಬೇಕೆಂದು ಸಾರ್ವಜನಿಕರು ಹಾಗೂ ವಾಹನ ಸವಾರರು ಒತ್ತಾಯಿಸಿದ್ದಾರೆ.