ಕುಶಾಲನಗರ, ನ. ೨೩: ಕನ್ನಡದ ನೆಲದಲ್ಲಿ ಜೀವಿಸುತ್ತಿರುವ ಎಲ್ಲರೂ ಕನ್ನಡ ಭಾಷೆಯ ಮೇಲೆ ಅಭಿಮಾನ ಹಾಗೂ ಗೌರವ ತೋರುವ ಮೂಲಕ ಭಾಷಾಭಿವೃದ್ಧಿ ಯಲ್ಲಿ ತೊಡಗಿಸಿಕೊಳ್ಳಬೇಕಾಗಿದೆ ಎಂದು ಕೊಡಗು ಛಾಯಾಚಿತ್ರ ಗ್ರಾಹಕರ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾಧ್ಯಕ್ಷ ಆವರ್ತಿ ಆರ್. ಮಹದೇವಪ್ಪ ಹೇಳಿದರು.

ಕೊಡಗು ಜಿಲ್ಲಾ ಛಾಯಾಚಿತ್ರಗ್ರಾಹಕರ ಕ್ಷೇಮಾಭಿವೃದ್ಧಿ ಸಂಘದಿAದ ಕುಶಾಲನಗರದಲ್ಲಿ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕನ್ನಡದ ಮೇಲಿನ ಅಭಿಮಾನ ಹಾಗೂ ಆಚರಣೆಗಳು ಕೇವಲ ನವೆಂಬರ್ ತಿಂಗಳಿಗೆ ಸೀಮಿತವಾಗದೇ ವರ್ಷಪೂರ್ತಿ ವಿವಿಧ ಕನ್ನಡದ ಕಾರ್ಯಕ್ರಮಗಳು ನಡೆಯಬೇಕು.

ಎಲ್ಲರೂ ಕನ್ನಡ ಪುಸ್ತಕಗಳನ್ನು ಕೊಂಡು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದು ಮಹದೇವಪ್ಪ ಹೇಳಿದರು. ಅತಿಥಿಗಳಾಗಿ ಪಾಲ್ಗೊಂಡಿದ್ದ ಉದ್ಯಮಿ ಸುದೀಪ್ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.

ರಾಷ್ಟಿçÃಯ ಹಬ್ಬಗಳ ಸಂದರ್ಭ ಸರಕಾರಿ ರಜೆ ಘೋಷಿಸದೆ ದಿನದ ಮಹತ್ವದ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ಒದಗಿಸುವ ಕಾರ್ಯ ಕಡ್ಡಾಯವಾಗಿ ಆಗಬೇಕಿದೆ ಎಂದರು.

ಕುಶಾಲನಗರ ತಾಲೂಕು ಕಸಾಪ ಅಧ್ಯಕ್ಷ ಕೆ.ಎಸ್. ನಾಗೇಶ್, ಮೈಸೂರು ಪ್ರಾಂತ್ಯ ಮಟ್ಟದ ಛಾಯಾಗ್ರಾಹಕರ ಗೃಹ ನಿರ್ಮಾಣ ಸಂಘದ ಅಧ್ಯಕ್ಷ ಎಂ.ಎಸ್. ರಾಜೇಂದ್ರ ಕುಮಾರ್, ಉಪಾಧ್ಯಕ್ಷ ಎಂ.ಎಸ್. ಶ್ರೀನಿಧಿ, ಉದ್ಯಮಿ ಬಾಲು, ಕಾರ್ಮಿಕ ಇಲಾಖೆ ಅಧಿಕಾರಿ ವಾಣಿ, ಶಿಕ್ಷಕ ಮೂಕಳೇರ ಲಕ್ಷ್ಮಣ ಇದ್ದರು. ಛಾಯಾಗ್ರಾಹಕರ ಸಂಘಗಳ ಪದಾಧಿಕಾರಿಗಳು, ಪ್ರೊಫೆಷನಲ್ ಫೊಟೋಗ್ರಾಫರ್ಸ್ ಅಸೋಸಿಯೇಷನ್ ಪದಾಧಿಕಾರಿಗಳು ಹಾಗೂ ಸದಸ್ಯರು ಇದ್ದರು. ಗಾಯಕ ಕಣಗಾಲು ಧನಪಾಲ್ ಕನ್ನಡ ಗೀತೆಗಳನ್ನು ಹಾಡಿದರು.