ಸೋಮವಾರಪೇಟೆ, ನ. ೨೩: ಇಲ್ಲಿನ ಸಾರ್ವಜನಿಕ ಗ್ರಂಥಾಲಯದಲ್ಲಿ ಗ್ರಂಥಾಲಯ ಸಪ್ತಾಹ ನಡೆಯಿತು. ಕಾರ್ಯಕ್ರಮವನ್ನು ನಿವೃತ್ತ ನೌಕರರ ಸಂಘದ ಅಧ್ಯಕ್ಷ ಸಿ.ಕೆ. ಮಲ್ಲಪ್ಪ ಉದ್ಘಾಟಿಸಿ, ಸಾರ್ವಜನಿಕ ಗ್ರಂಥಾಲಯದ ಮಹತ್ವದ ಬಗ್ಗೆ ಮಾಹಿತಿ ನೀಡಿದರು. ಅಗ್ನಿಶಾಮಕ ದಳದ ಅಧಿಕಾರಿ ಈಶ್ವರ್, ಪ್ರಬಾರ ಮುಖ್ಯ ಗ್ರಂಥಾಲಯ ಅಧಿಕಾರಿ ಸುರೇಖಾ, ಗ್ರಂಥಪಾಲಕರಾದ ನೇತ್ರಾವತಿ, ದಿನಪತ್ರಿಕೆ ವಿತರಕ ಜಯಂತ್, ಓದುಗರಾದ ಇಂದ್ರೇಶ್, ನಂದ, ಮನೋಹರ್, ಶಿವಪ್ಪ, ಗ್ರಂಥಾಲಯ ಸಹಾಯಕರಾದ ನಿವ್ಯ ಜಗದೀಶ್ ಭಾಗವಹಿಸಿದ್ದರು. ಕಾಲೇಜು ವಿದ್ಯಾರ್ಥಿಗಳಿಗೆ ಸಮುದಾಯದ ಬೆಳವಣಿಗೆಯಲ್ಲಿ ಸಾರ್ವಜನಿಕ ಗ್ರಂಥಾಲಯಗಳ ಪಾತ್ರ ಎಂಬ ವಿಷಯದ ಬಗ್ಗೆ ಪ್ರಬಂಧ ಸ್ಪರ್ಧೆ ಏರ್ಪಡಿಸಲಾಗಿತ್ತು.