ವೀರಾಜಪೇಟೆ, ನ. ೨೩: ರೋಮನ್ ಕ್ಯಾಥೋಲಿಕ್ ಅಸೋಸಿಯೇಷನ್ ವೀರಾಜಪೇಟೆ ತಾಲೂಕು ಘಟಕ ಹಾಗೂ ಸಂತ ಅನ್ನಮ್ಮ ದೇವಾಲಯದ ಸಹಯೋಗದೊಂದಿಗೆ ಕ್ರಿಸ್ಮಸ್ ಗಾನ ತರಂಗ-೨೦೨೫ ಕ್ರಿಸ್ಮಸ್ ಗಾಯನ ಸ್ಪರ್ಧೆಯನ್ನು ವೀರಾಜಪೇಟೆಯ ಸಂತ ಅನ್ನಮ್ಮ ದೇವಾಲಯದ ಸಭಾಂಗಣದಲ್ಲಿ ಆಯೋಜಿಸಲಾಗಿದೆ ಎಂದು ವೀರಾಜಪೇಟೆ ಹಾಗೂ ಪೊನ್ನಂಪೇಟೆ ತಾಲೂಕು ಘಟಕದ ಅಧ್ಯಕ್ಷ ಆಂಟೋನಿ ರಾಬಿನ್ ಹೇಳಿದರು.
ವೀರಾಜಪೇಟೆಯಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರಾಬಿನ್ ಅವರು, ಡಿ. ೭ ರಂದು ಬೆಳಿಗ್ಗೆ ೧೦ ಗಂಟೆಗೆ ಸ್ಪರ್ಧೆ ಪ್ರಾರಂಭವಾಗಲಿದೆ. ಗಾಯನ ಸ್ಪರ್ಧೆಯಲ್ಲಿ ವಿಜೇತ ತಂಡಕ್ಕೆ ಪ್ರಥಮ ಬಹುಮಾನ ರೂ. ೨೦,೦೦೦ ಹಾಗೂ ಟ್ರೋಫಿ, ದ್ವಿತೀಯ ರೂ. ೧೫,೦೦೦ ಹಾಗೂ ಟ್ರೋಫಿ, ತೃತೀಯ ರೂ. ೧೦,೦೦೦ ಹಾಗೂ ಟ್ರೋಫಿ ನೀಡಲಾಗುತ್ತದೆ. ಚಿತ್ರಕಲಾ ಸ್ಪರ್ಧೆಯಲ್ಲಿ ವಿಜೇತ ತಂಡಕ್ಕೆ ಕ್ರಮವಾಗಿ ರೂ. ೩,೦೦೦, ೨,೦೦೦, ೧,೦೦೦ ಹಾಗೂ ಟ್ರೋಫಿ ನೀಡಲಾಗುತ್ತದೆ. ನೋಂದಾವಣೆಗೆ ಡಿ. ೫ ಕೊನೆಯ ದಿನವಾಗಿದೆ ಎಂದರು.
ಕೊಡಗು ಜಿಲ್ಲಾ ರೋಮನ್ ಕ್ಯಾಥೋಲಿಕ್ ಅಸೋಸಿಯೇಷನ್ ಉಪಾಧ್ಯಕ್ಷ ಜೋಕಿಂ ಮಾತನಾಡಿ, ಒಂದು ಧರ್ಮ ಕೇಂದ್ರದಿAದ ಹಾಗೂ ಒಂದು ವಿದ್ಯಾ ಕೇಂದ್ರದಿAದ ಒಂದು ತಂಡಕ್ಕೆ ಮಾತ್ರ ಅವಕಾಶವಿದೆ. ವಿದ್ಯಾಸಂಸ್ಥೆಗಳಲ್ಲಿ ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶ ನೀಡಲಾಗಿದೆ. ಗಾಯನ ಸ್ಪರ್ಧೆಗಳಲ್ಲಿ ಕನಿಷ್ಟ ೫ ಸದಸ್ಯರು ಗರಿಷ್ಠ ೨೦ ಸದಸ್ಯರು ಇರಬಹುದು. ತಂಡದಲ್ಲಿ ಒಬ್ಬರೇ ವ್ಯವಸ್ಥಾಪಕರು ಇರಬೇಕು. ಒಂದು ಕೀಬೋರ್ಡ್ ಹಾಗೂ ಒಂದು ಗಿಟಾರ್ ವಾದ್ಯಗಳಿಗೆ ಅವಕಾಶವಿದೆ. ಟ್ರಾ÷್ಯಕ್ ಮತ್ತು ಕರೋಕೆ ಬಳಸುವಂತಿಲ್ಲ. ಸ್ಪಧೆüðಯಲ್ಲಿ ಕ್ಯಾಥೋಲಿಕ್ ಕ್ರೆöÊಸ್ತರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ ಎಂದರು.
ಕೊಡಗು ಜಿಲ್ಲಾ ರೋಮನ್ ಕ್ಯಾಥೋಲಿಕ್ ಅಸೋಸಿಯೇಷನ್ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಮರ್ವಿನ್ ಲೋಬೋ ಮಾತನಾಡಿ, ಗಾಯನ ಸ್ಪರ್ಧೆಯಲ್ಲಿ ಹಾಡುಗಳು ಕ್ರಿಸ್ಮಸ್ಗೆ ಸಂಬAಧಿಸಿದ ಕನ್ನಡ ಭಾಷೆಯದ್ದಾಗಿರಬೇಕು. ಸ್ಪರ್ಧೆ ೩೦ ಅಂಕಗಳಿಗೆ ಸೀಮಿತವಾಗಿರುತ್ತದೆ. ಸಾಹಿತ್ಯ ಸಂಗೀತ ಹಾಗೂ ಅಭಿನಯ ಪ್ರದರ್ಶನದ ಆಧಾರದ ಮೇಲೆ ತೀರ್ಪು ನೀಡಲಾಗುವುದು. ಕಾರ್ಯಕ್ರಮ ೭ ರಂದು ಬೆಳಿಗ್ಗೆ ೧೦ ಗಂಟೆಗೆ ಪ್ರಾರಂಭವಾಗಲಿದ್ದು, ಎಲ್ಲಾ ತಂಡವು ೩೦ ನಿಮಿಷಗಳ ಮುಂಚಿತವಾಗಿ ಹಾಜರಿರಬೇಕು ಎಂದರು.
ತಾಲೂಕು ಉಪಾಧ್ಯಕ್ಷ ಅಂಥೋನಿ ಜೋಸೆಫ್ ಮಾತನಾಡಿ, ಪ್ರತಿ ತಂಡಕ್ಕೆ ಸಿದ್ಧತೆ ಒಳಗೊಂಡು ಹಾಡಲು ೧೦ ನಿಮಿಷಗಳ ಅವಕಾಶ ಮಾತ್ರ ಕಲ್ಪಿಸಲಾಗಿದೆ. ಚಿತ್ರಕಲಾ ಸ್ಪರ್ಧೆಗೆ ಯಾವುದೇ ನೋಂದಣಿ ಶುಲ್ಕ ಇರುವುದಿಲ್ಲ. ರೋಮನ್ ಕ್ಯಾಥೋಲಿಕ್ ಮಕ್ಕಳಿಗೆ ಮಾತ್ರ ಅವಕಾಶ. ೬ ವರ್ಷದೊಳಗಿನ ವಿಭಾಗ ಕ್ರಿಸ್ಮಸ್ ಟ್ರೀ, ಕ್ರಿಸ್ಮಸ್ ಸ್ಟಾರ್, ೬-೧೦ ವರ್ಷದವರೆಗಿನ ವಿಭಾಗ ಸಾಂತಾಕ್ಲಾಸ್ ಚಿತ್ರ ವಿಷಯವಾಗಿರುತ್ತದೆ. ಚಿತ್ರಕಲಾ ಸ್ಪರ್ಧೆಗೆ ಡ್ರಾಯಿಂಗ್ ಹಳೆ ಕ್ರೇಯಾನ್ ಮತ್ತು ಪೆನ್ಸಿಲ್ ನೀಡಲಾಗುವುದು ಎಂದರು.
ಕಾರ್ಯದರ್ಶಿ ಸ್ಟಾಲಿನ್ ಮಾತನಾಡಿ, ಸ್ಪರ್ಧಿಗಳು ತಮ್ಮ ಸ್ವಂತ ಧರ್ಮ ಕೇಂದ್ರ ಅಥವಾ ಶಿಕ್ಷಣ ಸಂಸ್ಥೆಗೆ ಮಾತ್ರವೇ ಪಾಲ್ಗೊಳ್ಳಲು ಅರ್ಹರಾಗಿರುತ್ತಾರೆ ಹಾಗೂ ಒಂದಕ್ಕಿAತ ಹೆಚ್ಚು ತಂಡದಲ್ಲಿ ನೋಂದಾಯಿಸಿಕೊಳ್ಳುವುದು ನಿಷೇಧಿಸಲಾಗಿದೆ. ನಿಯಮಗಳನ್ನು ಉಲ್ಲಂಘಿಸಿದರೆ ಅಂತಹ ತಂಡವನ್ನು ಅಮಾನತುಗೊಳಿಸಿ ಸ್ಪರ್ಧೆಯಿಂದ ಹೊರಹಾಕಲಾಗುತ್ತದೆ.
ಹೆಚ್ಚಿನ ವಿವರಗಳಿಗೆ ೯೮೮೦೨೦೨೦೨೫, ೭೬೭೬೮೫೪೬೭೪ ಈ ಸಂಖ್ಯೆಗೆ ಸಂರ್ಪಕಿಸಬಹುದು.