ಮಡಿಕೇರಿ, ನ. ೨೨ : ಬದಲಾದ ಇಂದಿನ ಕಾಲಘಟ್ಟದಲ್ಲಿ ಶಿಕ್ಷಕರು ಅತ್ಯಂತ ಒತ್ತಡದಿಂದ ಕೆಲಸ ಮಾಡುವ ಪರಿಸ್ಥಿತಿ ಬಂದಿದ್ದು, ಮಾನಸಿಕ ಸಮತೋಲನ ಮತ್ತು ಸ್ಥಿರತೆಗೆ ಮಾರ್ಗ ಹುಡುಕಬೇಕಾದ ಅಗತ್ಯವಿದೆ ಎಂದು’ ಶಕ್ತಿ’ ಸಂಪಾದಕ ಜಿ. ಚಿದ್ವಿಲಾಸ್ ಅಭಿಪ್ರಾಯಪಟ್ಟರು.
ಬೆಂಗಳೂರಿನ ಇಂಟರ್ನ್ಯಾಷನಲ್ ಇನ್ಸಿ÷್ಟಟ್ಯೂಟ್ ಆಫ್ ಹೋಟೆಲ್ ಮ್ಯಾನೇಜ್ಮೆಂಟ್ ವತಿಯಿಂದ ೭ನೇ ಹೊಸಕೋಟೆಯ ರೆಸಾರ್ಟ್ ಅಲ್ಲಿ ನಡೆದ ಶಿಕ್ಷಕರ ದಿನಾಚರಣೆ ಸಂದರ್ಭ ಜಿಲ್ಲೆಯಿಂದ ಆಯ್ದ ೧೨ ಪ್ರಾಂಶುಪಾಲರು ಹಾಗೂ ೩೮ ಶಿಕ್ಷಕರನ್ನು ಗೌರವಿಸುವ ಕಾರ್ಯಕ್ರಮದ ಉದ್ಘಾಟನೆಯನ್ನು ಅವರು ನೆರವೇರಿಸಿ ಮಾತನಾಡಿದರು.
ಮಕ್ಕಳ ಶೈಕ್ಷಣಿಕ ಉನ್ನತಿ ಹಾಗೂ ಶಿಸ್ತಿನ ಬದುಕಿಗೆ ಪೂರಕವಾದ ಯಾವುದೇ ಕ್ರಮಗಳನ್ನು ಶಿಕ್ಷಕರು ಕೈಗೊಂಡರೂ ಅದನ್ನು ಪೋಷಕರು ಮತ್ತು ಸಮಾಜ ಇಂದು ಪ್ರಶ್ನಿಸುತ್ತದೆ, ಮತ್ತೊಂದೆಡೆ ಶಾಲಾ ಫಲಿತಾಂಶಕ್ಕಾಗಿ ಆಡಳಿತ ಮಂಡಳಿಗಳು ಕೂಡ ಶಿಕ್ಷಕರ ಮೇಲೆ ಒತ್ತಡ ಹೇರುತ್ತಿವೆ, ಇಂತಹ ಸಂದರ್ಭದಲ್ಲಿ ಅತ್ಯಂತ ಮಾನಸಿಕ ಒತ್ತಡದಲ್ಲಿ ಶಿಕ್ಷಕರು ಕಾರ್ಯನಿರ್ವಹಿಸಬೇಕಾದ ಅನಿವಾರ್ಯತೆ ಇದ್ದು, ಮಾನಸಿಕ ಸ್ಥಿರತೆ ಹಾಗೂ ಸಮತೋಲನ ಕಾಪಾಡಿಕೊಳ್ಳಲು ಶಿಕ್ಷಕರು ಮಾರ್ಗೋಪಾಯ ಕಂಡುಕೊಳ್ಳಬೇಕಿದೆ ಎಂದರು.
ಆಥಿತ್ಯ ಹಾಗೂ ಪ್ರವಾಸೋದ್ಯಮ ಕ್ಷೇತ್ರದಲ್ಲೂ ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಅನ್ನು ಇದೀಗ ಉತ್ತೇಜಿಸಲಾಗುತ್ತಿದ್ದು, ವಿಶ್ವದಾದ್ಯಂತ ಅದರ ಪ್ರವೇಶದಿಂದ ಆಗುತ್ತಿರುವ ಪರಿಣಾಮದ ಬಗ್ಗೆ ಸಂಸ್ಥೆಗಳು ಚಿಂತಿಸಬೇಕು ಎಂದ ಅವರು, ಉದ್ಯೋಗ ಅವಕಾಶವನ್ನು ಕಲ್ಪಿಸುವ ಬದಲು ಉದ್ಯೋಗ ಅವಕಾಶವನ್ನು ಕಿತ್ತುಕೊಳ್ಳುವ ಸನ್ನಿವೇಶ ಇದರಿಂದ ಆಗಬಾರದು ಎಂದು ಆಶಿಸಿದರು.
ಪ್ರವಾಸೋದ್ಯಮ ಕ್ಷೇತ್ರದಲ್ಲಿ ಕೊಡಗಿನಲ್ಲಿ ಕನಿಷ್ಠ ಒಂದು ಲಕ್ಷ ಮಂದಿ ತೊಡಗಿಸಿಕೊಂಡಿದ್ದು, ಶಿಸ್ತು ಮತ್ತು ವೃತ್ತಿಪರ ಸೇವೆ ನೀಡುವ ನಿಟ್ಟಿನಲ್ಲಿ ಅವರುಗಳಿಗೆ ತರಬೇತಿಯ ಅಗತ್ಯವಿರುವುದರಿಂದ ೪ ನಾಲ್ಕನೇ ಪುಟಕ್ಕೆ
(ಮೊದಲ ಪುಟದಿಂದ) ಈ ಕ್ಷೇತ್ರದ ಸಂಸ್ಥೆಗಳು ಕೊಡಗಿನಲ್ಲಿ ತಮ್ಮ ಶಾಖೆಗಳನ್ನು ತೆರೆಯುವಂತೆ ಅವರು ಅಭಿಪ್ರಾಯಪಟ್ಟರು.
ಐ ಐ ಹೆಚ್ ಎಂ ನ ದಕ್ಷಿಣ ಭಾರತದ ಮುಖ್ಯಸ್ಥೆ ಸಂಚಾರಿ ಚೌದರಿ ಅವರು ಮಾತನಾಡಿ, ತಮ್ಮ ಸಂಸ್ಥೆ ವತಿಯಿಂದ ಈ ಬಾರಿ ಕೊಡಗಿನಲ್ಲಿ ಸಾಧನೆಗೈದ ೫೦ ಮಂದಿ ಶಿಕ್ಷಕರನ್ನು ಗೌರವಿಸುತ್ತಿರುವುದು ಅತ್ಯಂತ ಸಂತಸ ತಂದಿದೆ ಎಂದರು. ಆದಿತ್ಯ ಕ್ಷೇತ್ರದಲ್ಲಿ ತಮ್ಮ ಸಂಸ್ಥೆ ಗಣನೀಯ ಸಾಧನೆ ಮಾಡಿದ್ದು ಮುಂದಿನ ದಿನಗಳಲ್ಲಿ ಕೊಡಗಿನಲ್ಲಿ ತಮ್ಮ ಸಂಸ್ಥೆಯ ಶಾಖೆಯನ್ನು ಆರಂಭಿಸಿ ಕೊಡಗಿನ ವಿದ್ಯಾರ್ಥಿಗಳಿಗೆ ಜಿಲ್ಲೆಯಲ್ಲೇ ಉತ್ತಮ ಶಿಕ್ಷಣ ನೀಡುವ ಅಭಿಲಾಷೆ ಇದೆ ಎಂದು ಅವರು ತಿಳಿಸಿದರು.
ಸಂಸ್ಥೆಯ ಸ್ಥಾಪಕ ಡಾ ಸುಭರ್ನೋ ಬೋಸ್ ಅವರು ವೀಡಿಯೋ ಮೂಲಕ ಮಾತನಾಡಿ ಪ್ರವಾಸೋದ್ಯಮ ಕ್ಷೇತ್ರಕ್ಕೆ ಇರುವ ವಿಪುಲ ಅವಕಾಶಗಳ ಬಗ್ಗೆ ವಿವರಿಸಿದರು.
ಅತಿಥಿಯಾಗಿ ಪಾಲ್ಗೊಂಡಿದ್ದ ೭ನೇ ಹೊಸಕೋಟೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಇ.ಬಿ. ಜೋಸೆಫ್ ಅವರು ಮಾತನಾಡಿ ಶಿಕ್ಷಕರ ಸೇವೆಯನ್ನು ಗುರುತಿಸಿ ಗೌರವಿಸುತ್ತಿರುವುದು ಹೆಮ್ಮೆಯ ವಿಷಯ ಎಂದರು.
ಯು ಡಬ್ಲ್ಯೂ ಎಲ್ ಸಂಸ್ಥೆಯ ಕಾರ್ಯಕ್ರಮ ಪ್ರಮುಖರಾದ ಶ್ರೀಮತಿ ಪಾರ್ವತಿ ಸುಬ್ಬಯ್ಯ ಅವರು ಕಾರ್ಯಕ್ರಮ ನಿರೂಪಿಸಿದರು.