ಹೆಬ್ಬಾಲೆ, ನ. ೨೨ : ಹೆಬ್ಬಾಲೆ ಗ್ರಾಮದಲ್ಲಿ ಗ್ರಾಮ ದೇವತೆ ಶ್ರೀ ಬನಶಂಕರಿ ದೇವಿಯ ವಾರ್ಷಿಕ ಜಾತ್ರೋತ್ಸವದ ಅಂಗವಾಗಿ ಶನಿವಾರ ಏರ್ಪಡಿಸಿದ್ದ ಗ್ರಾಮೀಣ ಜಾನಪದ ಕ್ರೀಡೆಯಾದ ಎತ್ತಿನಗಾಡಿಯ ಚಕ್ರಕಟ್ಟಿ ಓಡಿಸುವ ಸ್ಪರ್ಧೆ ಕ್ರೀಡಾಪ್ರೇಮಿಗಳ ಮನರಂಜಿಸಿತು.
ಸ್ಪರ್ಧೆಯಲ್ಲಿ ಹೆಬ್ಬಾಲೆ ಸುತ್ತಮುತ್ತಲಿನ ಜನರು ಸೇರಿದಂತೆ ಮೈಸೂರು, ಚಿಕ್ಕಮಗಳೂರು, ಮಂಡ್ಯ ಹಾಗೂ ಹಾಸನ ಜಿಲ್ಲೆಗಳ ಗಡಿ ಭಾಗದ ಜನತೆ ಭಾಗವಹಿಸಿದ್ದು ವಿಶೇಷವಾಗಿತ್ತು.
ಗ್ರಾಮದ ಮಾದರಿ ಯುವಕ ಸಂಘದ ಆಶ್ರಯದಲ್ಲಿ ನಡೆದ ಸ್ಪರ್ಧೆಯಲ್ಲಿ ಎತ್ತಿನಗಾಡಿಯ ಚಕ್ರಕಟ್ಟಿ ಓಡಿಸುವ ಸ್ಪರ್ಧೆಗೆ ೧೦೦ ಮೀಟರ್ ದೂರ ನಿಗದಿಪಡಿಸಲಾಗಿತ್ತು.
ಭತ್ತದ ಕೊಯ್ಲು ಆರಂಭಗೊಳ್ಳುತ್ತಿದ್ದAತೆ ಸುಗ್ಗಿಗೆ ಮುನ್ನ ವರ್ಷಕ್ಕೆ ಒಮ್ಮೆ ಬನಶಂಕರಿ ಅಮ್ಮನ ಹಬ್ಬದ ಅಂಗವಾಗಿ ನಡೆಯುವ ಈ ಸ್ಪರ್ಧೆಯಲ್ಲಿ ಭಾಗವಹಿಸುವ ರೈತಾಪಿ ವರ್ಗದವರು ಗಾಡಿ ಓಟಕ್ಕೆ ಎತ್ತುಗಳನ್ನು ತಯಾರು ಮಾಡಿ ಗಾಡಿಗಳನ್ನು ಅಣಿಗೊಳಿಸುವದು ಮೊದಲಿನಿಂದಲೂ ನಡೆದುಕೊಂಡು ಬಂದಿದೆ. ಎತ್ತಿನ ಗಾಡಿ ಸ್ಪರ್ಧೆಯಲ್ಲಿ ಮೊದಲ ೪ ನಾಲ್ಕನೇ ಪುಟಕ್ಕೆ
(ಮೊದಲ ಪುಟದಿಂದ) ಮೂರು ಸ್ಥಾನ ಗಳಿಸಿದ ಎತ್ತಿನ ಗಾಡಿ ಮಾಲೀಕರಿಗೆ ಕ್ರಮವಾಗಿ ೫ ಗ್ರಾಂ ಚಿನ್ನ ಹಾಗೂ ೩ ಗ್ರಾಂ.ಚಿನ್ನ, ತೃತೀಯ ಬಹುಮಾನ ರೂ.೧೦ ಸಾವಿರ ನಗದು ಬಹುಮಾನವನ್ನು ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ವಿತರಿಸಲಾಯಿತು.
ಎತ್ತಿನಗಾಡಿಯ ಚಕ್ರಕಟ್ಟಿ ಓಡಿಸುವ ಸ್ಪರ್ಧೆಯಲ್ಲಿ ೧೫ಕ್ಕೂ ಹೆಚ್ಚಿನ ಎತ್ತಿನ ಗಾಡಿ ಮಾಲೀಕರು ಪಾಲ್ಗೊಂಡಿದ್ದರು.
ಎತ್ತಿನ ಗಾಡಿ ಓಟವನ್ನು ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆಸಲಾಯಿತು.
ರೋಮಾಂಚನಕಾರಿ ಹಾಗೂ ಸಾಹಸಮಯ ಕ್ರೀಡೆಯಾದ ಎತ್ತಿನ ಗಾಡಿ ಸ್ಪರ್ಧೆ ವೀಕ್ಷಿಸಲು ಸಾವಿರಾರು ಸಂಖ್ಯೆಯಲ್ಲಿ ಜನರು ಜಮಾಯಿಸಿದ್ದರು.
ಈ ಎತ್ತಿನ ಗಾಡಿ ಸ್ಪರ್ಧೆಯನ್ನು ಕಳೆದ ೨೬ ವರ್ಷಗಳಿಂದ ಗ್ರಾಮದ ಮಾದರಿ ಯುವಕ ಸಂಘದ ಆಶ್ರಯದಲ್ಲಿ ನಡೆಸಿಕೊಂಡು ಬರುವ ಮೂಲಕ ಗ್ರಾಮೀಣ ಕ್ರೀಡೆಯ ಬೆಳವಣಿಗೆಗೆ ಒತ್ತು ನೀಡಲಾಗುತ್ತಿದೆ.
ಮಧ್ಯಾಹ್ನ ೨ ಗಂಟೆಗೆ ಎತ್ತಿನ ಗಾಡಿ ಸ್ಪರ್ಧೆ ಆರಂಭಗೊAಡ ಸಂದರ್ಭ ಮೈದಾನದ ಇಕ್ಕೆಲಗಳಲ್ಲಿ ನಿಂತಿದ್ದ ಜನರು ಶಿಳ್ಳೆ ಹೊಡೆಯುತ್ತಾ ಎತ್ತುಗಳಿನ್ನು ಹುರಿದುಂಬಿಸುತ್ತಿದ್ದ ದೃಶ್ಯ ಕಂಡುಬAತು.
ಕೆಲವು ಎತ್ತಿನ ಗಾಡಿಗಳು ಂiÀiದ್ವಾತದ್ವಾ ಓಡುತ್ತಾ ಜನರತ್ತ ಧಾವಿಸಿ ಬಂದ ಘಟನೆಯೂ ನಡೆಯಿತ್ತಾದರು ಯಾವುದೇ ಅಪಾಯ ಸಂಭವಿಸಲಿಲ್ಲ.
ದಿನವಿಡೀ ನಡೆದ ಕ್ರೀಡಾಕೂಟದಲ್ಲಿ ಮಕ್ಕಳು ಮಹಿಳೆಯರು ಹಾಗೂ ವೃದ್ಧರು ಸಾಮೂಹಿಕವಾಗಿ ಪಾಲ್ಗೊಂಡಿದ್ದುದು ಕಂಡುಬAದಿತು. ಜಾತ್ರೆಯ ಅಂಗವಾಗಿ ಏರ್ಪಡಿಸಿದ್ದ ಎತ್ತಿನ ಗಾಡಿ ಓಟ ಸ್ಪರ್ಧೆಯನ್ನು ಉದ್ಯಮಿ ಮೋಹನ್ ಲಾಲ್ ಚೌದರಿ ಉದ್ಘಾಟಿಸಿದರು. ಕ್ರೀಡಾಕೂಟದ ತೀರ್ಪುಗಾರರಾಗಿ ದೈಹಿಕ ಶಿಕ್ಷಣ ಶಿಕ್ಷಕರಾದ ಸಂತೋಷ್, ಕರುಂಬಯ್ಯ, ಬೊಜೇಗೌಡ, ಪ್ರವೀಣ್, ಕಾರ್ಯನಿರ್ವಹಿಸಿದರು.
ಈ ಸಂದರ್ಭ ಮಾದರಿ ಯುವಕ ಸಂಘದ ಗೌರವಾಧ್ಯಕ್ಷ ಎಚ್.ಎನ್. ರಾಜಶೇಖರ್, ಅಧ್ಯಕ್ಷ ಎಚ್.ಎಚ್. ಧನಂಜಯ, ಉಪಾಧ್ಯಕ್ಷ ಎಚ್.ಡಿ. ಪುಟ್ಟರಾಜ ಕಾರ್ಯದರ್ಶಿ ತನುಕುಮಾರ್, ಖಜಾಂಜಿ ಎಚ್.ಸಿ. ಸಂತೋಷ್ (ಪುಟ್ಟ), ಪದಾಧಿಕಾರಿಗಳಾದ ಎಚ್.ಎಸ್. ರಘು, ಹೆಚ್.ಜೆ.ರವಿ, ರವೀಂದ್ರ, ಬಾಲಾಜಿ, ಸುದರ್ಶನ್, ಅಭಿಲಾಷ್, ರಘು ಜವರೇಗೌಡ, ಬಿ.ಡಿ. ಗಣೇಶ್, ಸಂಜಯ್, ಗುರುಪ್ರಸಾದ್, ಕಿರಣ್, ಚಂದನ್, ಎಚ್.ಆರ್. ಸಂತೋಷ್, ಸತೀಶ್, ಚರಣ್, ದಿನೇಶ್, ಅಕ್ಷಯಕುಮಾರ್, ಪ್ರವೀಣ್, ಎಚ್.ಆರ್. ರಾಜು, ಕಿರಣ್, ಲೋಕೇಶ್, ಎಸ್. ಬಸವರಾಜು ಸಲಹೆಗಾರರಾದ ಶಿಕ್ಷಕರಾದ ಎಚ್.ಕೆ. ರಾಜಕುಮಾರ್, ಹೆಚ್.ಜೆ .ಕುಮಾರ್, ಎಚ್.ಎನ್.ಮಂಜುನಾಥ್, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ರಘು ಇದ್ದರು.