ಮಡಿಕೇರಿ, ನ. 20: ಮಡಿಕೇರಿಯ ಕೆನರಾ ಬ್ಯಾಂಕ್ ಪ್ರಾದೇಶಿಕ ಕಚೇರಿಯಲ್ಲಿ ಬ್ಯಾಂಕ್ ಸಂಸ್ಥಾಪಕರಾದ ಅಮ್ಮೆಂಬಳ ಸುಬ್ಬರಾವ್ ಪೈ ಅವರ 173 ನೇ ಜನ್ಮ ದಿನಾಚರಣೆ ಮತ್ತು ಬ್ಯಾಂಕ್ನ ಭವ್ಯ ಪರಂಪರೆಯ 120 ನೇ ವರ್ಷವನ್ನು ಆಚರಿಸಲಾಯಿತು.
ಪ್ರಾದೇಶಿಕ ಕಚೇರಿ ಮತ್ತು ಹತ್ತಿರದ ಶಾಖೆಗಳ ಸುಮಾರು 40 ಸಿಬ್ಬಂದಿ ಬೆಳಿಗ್ಗೆ 7.30 ಕ್ಕೆ ನಡೆದ ವಾಕಥಾನ್ನಲ್ಲಿ ಉತ್ಸಾಹದಿಂದ ಭಾಗವಹಿಸಿದ್ದರು. ಬ್ಯಾಂಕ್ ಸಿಎಸ್ಆರ್ ಉಪಕ್ರಮಗಳ ಭಾಗವಾಗಿ, ಬ್ಯಾಂಕ್ ಕಾರ್ಯನಿರ್ವಾಹಕರು ಹತ್ತಿರದ ಅನಾಥಾಶ್ರಮಕ್ಕೆ ಭೇಟಿ ನೀಡಿ ಮಕ್ಕಳಿಗೆ ಉಡುಗೊರೆ ವಿತರಿಸಿದರು. ಬೆಳಿಗ್ಗೆ 10:30 ಕ್ಕೆ ಪ್ರಾದೇಶಿಕ ಕಚೇರಿಯ ಸಭಾಂಗಣದಲ್ಲಿ ಸಿಬ್ಬಂದಿ ಮತ್ತು ಆಯ್ದ ಹೆಚ್ಎನ್ಐ ಗ್ರಾಹಕರೊಂದಿಗೆ ಸಭೆಯನ್ನು ಆಯೋಜಿಸಲಾಗಿತ್ತು. ಬ್ಯಾಂಕ್ ಸಂಸ್ಥಾಪಕರಿಗೆ ಪುಷ್ಪ ನಮನ ಸಲ್ಲಿಸುವುದರೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು.
ಗ್ರಾಹಕರನ್ನು ಉದ್ದೇಶಿಸಿ ಮಾತನಾಡಿದ ಪ್ರಾದೇಶಿಕ ಮುಖ್ಯಸ್ಥ ವಿ. ರಾಜೇಶ್ ಕುಮಾರ್, ಸಂಸ್ಥಾಪಕರ ಪ್ರವರ್ತಕ ದೃಷ್ಟಿಕೋನವನ್ನು ವಿವರಿಸಿದರು. ವಿಭಾಗೀಯ ವ್ಯವಸ್ಥಾಪಕರಾದ ಕುಮಾರ್ ಬಾಬು ಸಿ.ಟಿ. ಮಾತನಾಡಿ, ಬ್ಯಾಂಕಿನ ಪ್ರಯಾಣ ಮತ್ತು ಬ್ಯಾಂಕ್ ಸಂಸ್ಥಾಪಕರ ಜೀವನದ ಸಂಕ್ಷಿಪ್ತ ಅವಲೋಕನವನ್ನು ಮಂಡಿಸಿದರು. ಗ್ರಾಹಕರು ತಮ್ಮ ಅನುಭವಗಳನ್ನು ಹಂಚಿಕೊಳ್ಳಲು ಅವಕಾಶ ನೀಡುವ ನಿಟ್ಟಿನಲ್ಲಿ ಸಂವಾದಾತ್ಮಕ ಅಧಿವೇಶನವನ್ನು ನಡೆಸಲಾಯಿತು.
ಸಭೆಯ ನಂತರ ಬ್ಯಾಂಕ್ನ ಕಾರ್ಯನಿರ್ವಾಹಕರು ಸಿಎಸ್ಆರ್ ಚಟುವಟಿಕೆಗಳ ಭಾಗವಾಗಿ ಗ್ರಾಮ ಪಂಚಾಯಿತಿ ಮಕ್ಕಂದೂರು, ಸರ್ಕಾರಿ ಮಾದರಿ ಪ್ರೌಢಶಾಲೆ ಮತ್ತು ಸುಂಟಿಕೊಪ್ಪ ಪದವಿ ಪೂರ್ವ ಕಾಲೇಜಿಗೆ ಭೇಟಿ ನೀಡಿದರು. ಮಡಿಕೇರಿಯ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಕಚೇರಿಗೆ ಪ್ರಾಯೋಜಕತ್ವವನ್ನು ಸಹ ವಿಸ್ತರಿಸಲಾಯಿತು. ಹೆಚ್ಚುವರಿಯಾಗಿ, ಸ್ಥಳೀಯ ಮಹಿಳೆಯರನ್ನು ಸಬಲೀಕರಣಗೊಳಿಸಲು ಮತ್ತು ಪೆÇ್ರೀತ್ಸಾಹಿಸಲು ಉದ್ಯಮಶೀಲತೆಯ ಕುರಿತು ಮಹಿಳೆಯರಿಗೆ ತರಬೇತಿ ಏರ್ಪಡಿಸಲಾಯಿತು. ವಿಭಾಗೀಯ ವ್ಯವಸ್ಥಾಪಕರಾದ ಪಾರ್ಥಿಬನ್ ಎಸ್ ಸ್ವಾಗತಿಸಿದರು.