ಶನಿವಾರಸಂತೆ, ನ. 20: ಕೊಡಗು ಜಿಲ್ಲಾ ಪಂಚಾಯಿತಿ, ಸೋಮವಾರಪೇಟೆ ತಾಲೂಕು ಪಂಚಾಯಿತಿ ಹಾಗೂ ನಿಡ್ತ ಗ್ರಾಮ ಪಂಚಾಯಿತಿ ವತಿಯಿಂದ ಪಂಚಾಯಿತಿ ವ್ಯಾಪ್ತಿಯ ಗೋಪಾಲಪುರ ಗ್ರಾಮದಲ್ಲಿ ಪೂರ್ಣಗೊಂಡಿರುವ ಬನಶಂಕರಿ ದೇವಾಲಯದಿಂದ ಬಸವೇಶ್ವರ ದೇವಾಲಯದವರೆಗಿನ ರೂ. 35 ಲಕ್ಷ ವೆಚ್ಚದ ಸಾರ್ವಜನಿಕ ರಸ್ತೆ, ಬಸ್ ನಿಲ್ದಾಣದಲ್ಲಿ ಹೈಮಾಸ್ಟ್ ಲೈಟ್, ಸಿಸಿ ಕ್ಯಾಮರಾ ಹಾಗೂ ಗ್ರಾಮ ಪಂಚಾಯಿತಿ ನೂತನ ಕಟ್ಟಡವನ್ನು ಶಾಸಕ ಡಾ. ಮಂತರ್ ಗೌಡ ಉದ್ಘಾಟಿಸಿದರು.

ನಂತರ ಗ್ರಾಮ ಪಂಚಾಯಿತಿ ನೂತನ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಪಂಚಾಯಿತಿ ಆಡಳಿತ ಮಂಡಳಿ ಜನರ ಕೆಲಸ ಮಾಡಿಕೊಡಲು ಆಸಕ್ತಿ ತೋರಬೇಕು. ಅಧಿಕಾರಿಗಳಾಗಲಿ, ಜನಪ್ರತಿನಿಧಿಗಳಾಗಲಿ ಕಾನೂನಾತ್ಮಕವಾಗಿ ಅಭಿವೃದ್ಧಿ ಕೆಲಸಗಳನ್ನು ಮಾಡಿಕೊಡಬೇಕು ಎಂದರು.

ಗ್ರಾಮ ಪಂಚಾಯಿತಿ ಅಧ್ಯಕ್ಷ ಅಶೋಕ್ ಮಾತನಾಡಿದರು. ಉಪಾಧ್ಯಕ್ಷೆ ಸುಮಿತ್ರಾ ಮಹೇಶ್, ಸದಸ್ಯರು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಎ.ಟಿ. ಮಾನಸಾ, ಮಾಧ್ಯಮ ವಕ್ತಾರ ಸಂದೀಪ್, ತಾಲೂಕು ಗ್ಯಾರಂಟಿ ಯೋಜನೆಗಳ ಅನುμÁ್ಠನ ಸಮಿತಿ ಅಧ್ಯಕ್ಷ ಕಾಂತರಾಜ್, ಶನಿವಾಸಂತೆ ಗ್ರಾಮ ಪಂಚಾಯಿತಿ ಸದಸ್ಯ ಎಸ್.ಸಿ. ಶರತ್ ಶೇಖರ್, ಕೆ.ಡಿ.ಪಿ. ಸದಸ್ಯ ಗಂಗಾಧರ್, ಕಾಂಗ್ರೆಸ್ ವಕ್ತಾರ ಡಿ.ಈ. ಸುರೇಶ್, ಡಿ.ಎಸ್.ಎಸ್. ಮುಖಂಡ ಈರಪ್ಪ, ಬನಶಂಕರಿ ದೇವಾಲಯ ಸಮಿತಿ ಅಧ್ಯಕ್ಷ ಪ್ರಕಾಶ್, ಇತರರು ಹಾಜರಿದ್ದರು. ಪಿಡಿಒ ಮಾನಸಾ ನಿರೂಪಿಸಿದರು. ನಿವೃತ್ತ ಉಪಪ್ರಾಂಶುಪಾಲ ಜಿ.ಬಿ. ನಾಗಪ್ಪ ಸ್ವಾಗತಿಸಿ, ವಂದಿಸಿದರು.