ಮಡಿಕೇರಿ: ವೀರಾಜಪೇಟೆ ತಾಲೂಕಿನ ಚೆನ್ನಂಗಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಚನ್ನಯ್ಯನಕೋಟೆ ಕ್ಲಸ್ಟರ್ ಮಟ್ಟದ ಪೆÇೀಷಕರು - ಶಿಕ್ಷಕರ ಮಹಾಸಭೆ ಹಾಗೂ ಮಕ್ಕಳ ದಿನಾಚರಣೆ ಕಾರ್ಯಕ್ರಮ ಶಾಲಾ ಸಭಾಂಗಣದಲ್ಲಿ ನಡೆಯಿತು.
ಶಾಲೆಯ ವಿದ್ಯಾರ್ಥಿ ಸಂಜಯ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಂತ್ರಿಮಂಡಳದ ಪ್ರಧಾನಮಂತ್ರಿ ತೇಜ, ಸಾಂಸ್ಕøತಿಕ ಮಂತ್ರಿ ಅರ್ಪಿತ, ಸ್ವಚ್ಛತಾ ಮಂತ್ರಿ ರಾಕೇಶ್, ವಿದ್ಯಾರ್ಥಿ ನಾಯಕ ಆದೀಶ್ ಮಾತನಾಡಿ, ಶಿಕ್ಷಕರುಗಳು ಹೆಚ್ಚಿನ ಸಹಕಾರ ನೀಡುತ್ತಿದ್ದಾರೆ. ನಾವೆಲ್ಲರೂ ಒಗ್ಗಟ್ಟಿನೊಂದಿಗೆ ಶಿಕ್ಷಕರುಗಳ ಮಾರ್ಗದರ್ಶನವನ್ನು ಮೈಗೂಡಿಸಿಕೊಂಡು ಶಾಲೆಗೆ ಕೀರ್ತಿ ತರಬೇಕೆಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಜಯ್, ಶಾಲೆಯ ಶಿಕ್ಷಕರುಗಳು ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕಲಿಸುವ ಮೂಲಕ ಪ್ರತಿಭಾನ್ವಿತರಾಗಿ ಮುಂದೆ ತರಲು ಹಲವಾರು ಕಾರ್ಯಕ್ರಮಗಳನ್ನು ಮಾಡುವುದರ ಮೂಲಕ ವಿದ್ಯಾರ್ಥಿಗಳ ಮುಂದಿನ ಭವಿಷ್ಯಕ್ಕೆ ಪೆÇ್ರೀತ್ಸಾಹ ನೀಡುತ್ತಿದ್ದಾರೆ ಎಂದರು.
ಇದೇ ಸಂದರ್ಭ ವಿದ್ಯಾರ್ಥಿಗಳ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳು ನೆರದಿದ್ದವರ ಗಮನ ಸೆಳೆಯಿತು. ಸಮಾರೋಪ ಸಮಾರಂಭದಲ್ಲಿ ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಕೆ.ಎಲ್. ರುಕ್ಮಿಣಿ ಮಾತನಾಡಿ, ಸ್ವಚ್ಛ ಪರಿಸರದೊಂದಿಗೆ ಹಚ್ಚಸಿರಿನಿಂದ ಕೂಡಿರುವ ಚೆನ್ನಂಗಿ ಸರ್ಕಾರಿ ಶಾಲೆ ಮಾದರಿಯಾಗಿದೆ. ಮಕ್ಕಳಿಗೆ ಶಿಕ್ಷಣದೊಂದಿಗೆ ಆರೋಗ್ಯ, ಕ್ರೀಡೆ, ಪರಿಸರ, ಶುಚಿತ್ವ ಸೇರಿದಂತೆ ವೃತ್ತಿಪರ ಕೌಶಲ್ಯ ತರಬೇತಿಯನ್ನು ನೀಡುವುದರೊಂದಿಗೆ ದಿನಕ್ಕೊಂದು ಕಾರ್ಯಕ್ರಮದೊಂದಿಗೆ ವಿದ್ಯಾರ್ಥಿಗಳ ಶೈಕ್ಷಣಿಕ ಬೆಳವಣಿಗೆಗೆ ಪೂರಕವಾದ ವಾತಾವರಣ ಕಂಡುಬಂದಿದ್ದು, ಶಿಕ್ಷಕರುಗಳ ಪರಿಶ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ಮಕ್ಕಳೇ ಕಾರ್ಯಕ್ರಮವನ್ನು ರೂಪಿಸಿ ಮಾದರಿ ವಿದ್ಯಾರ್ಥಿಗಳಾಗಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ತಾಲೂಕು ಬುಡಕಟ್ಟು ಕೃಷಿಕರ ಸಂಘದ ಅಧ್ಯಕ್ಷ ಸಿದ್ದಪ್ಪ ಮಾತನಾಡಿ, ಕಾಡಂಚಿನ ಗ್ರಾಮೀಣ ಶಾಲೆಯಾದರು ಮಕ್ಕಳ ಶಿಕ್ಷಣಕ್ಕೆ ಶಿಕ್ಷಕರು ಹೆಚ್ಚಿನ ಸಹಕಾರ ನೀಡುತ್ತಿದ್ದಾರೆ.
ಈ ಹಿಂದೆ ಶಾಲೆಗೆ ಗೈರು ಆಗುತ್ತಿದ್ದ ಮಕ್ಕಳು ಇದೀಗ ತಪ್ಪದೇ ಶಾಲೆಗೆ ಬರುತ್ತಿದ್ದಾರೆ. 52 ಆದಿವಾಸಿ ಮಕ್ಕಳು ಶಾಲೆಯಲ್ಲಿ ಕಲಿಯುತ್ತಿದ್ದು, ದಾನಿಗಳು ಹೆಚ್ಚಿನ ಸಹಕಾರ ನೀಡಬೇಕೆಂದರು.
ಶಾಲಾ ಪ್ರಬಾರ ಮುಖ್ಯ ಶಿಕ್ಷಕಿ ಕೆ.ಕೆ. ಸುμÁ ಮಾತನಾಡಿ, ಪೆÇೀಷಕರ ಸಹಕಾರದಿಂದ ವಿದ್ಯಾರ್ಥಿಗಳು ಶಾಲೆಗೆ ತಪ್ಪದೆ ಹಾಜರಾಗುತ್ತಿದ್ದು, ಶಿಕ್ಷಣದೊಂದಿಗೆ ಎಲ್ಲಾ ಚಟುವಟಿಕೆಗಳಲ್ಲೂ ಗುರುತಿಸಿಕೊಳ್ಳುತ್ತಿದ್ದಾರೆ.ಇಲಾಖೆಯ ನಿರ್ದೇಶನದೊಂದಿಗೆ ದಿನಕ್ಕೊಂದು ಕಾರ್ಯಕ್ರಮಗಳನ್ನು ಮಾಡಲಾಗುತ್ತಿದ್ದು, ಮಕ್ಕಳಿಗೆ ಶೈಕ್ಷಣಿಕೆಗೆ ಪೂರಕವಾದ ಕಲಿಕೆಯೊಂದಿಗೆ ವೃತ್ತಿಪರ ಶಿಕ್ಷಣವನ್ನು ನೀಡಲಾಗುತ್ತಿದೆ. ಶಾಲೆಯ ಮತ್ತಷ್ಟು ಅಭಿವೃದ್ಧಿ ಕಾರ್ಯಗಳಿಗೆ ದಾನಿಗಳು ಕೈಜೋಡಿಸಬೇಕೆಂದರು.
ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷೆ ಬೇಬಿ, ಉಪಾಧ್ಯಕ್ಷೆ ಈಶ್ವರಿ, ಶಿಕ್ಷಕರುಗಳಾದ ಮಂಜುಳಾ, ಪ್ರತಿಮಾ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು
ಪೆÇೀಷಕರು, ಮಕ್ಕಳು ವಿವಿಧ ಕ್ರೀಡೆ ಹಾಗೂ ಸಾಂಸ್ಕøತಿಕ ಸ್ಪರ್ಧೆಗಳಲ್ಲಿ ಪಾಲ್ಗೊಂಡು ಸಂಭ್ರಮಿಸಿದರು. ಇದೆ ಸಂದರ್ಭ ಇಬ್ಬರು ಶಿಕ್ಷಕಿಯರಾದ ಮಂಜುಳಾ, ಪ್ರತಿಮಾ ಅವರಿಗೆ ಸನ್ಮಾನ ಮಾಡಲಾಯಿತು
- ಎಸ್.ಎಂ. ಮುಬಾರಕ್.ಮಡಿಕೇರಿ: ಜನತಾ ಕಾಲೋನಿ ಅಂಗನವಾಡಿಯಲ್ಲಿ ಬಾಲ ಮೇಳ ಮತ್ತು ಮಕ್ಕಳ ಸಂತೆ ಕಾರ್ಯಕ್ರಮ ನೆರವೇರಿತು.
ಬಾಲ ಮೇಳ ಕಾರ್ಯಕ್ರಮದಲ್ಲಿ ಮಕ್ಕಳು ಹಲವಾರು ಅಭಿನಯ ಗೀತೆ (ಕನ್ನಡ ಮತ್ತು ಇಂಗ್ಲಿμïನಲ್ಲಿ), ಜಾನಪದ ನೃತ್ಯ, ಮಕ್ಕಳ ಗೀತೆಗಳ ನೃತ್ಯ, ವಾಲಗ ನೃತ್ಯ, ಮಾಡುತ್ತಾ ಪೆÇೀಷಕರ ಗ್ರಾಮಸ್ಥರ ಮನಸೆಳೆದರು.
ವಿವಿಧ ಸಂಸ್ಕøತಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಮಕ್ಕಳಿಗೆ ಮೇಲ್ವಿಚಾರಕರು ಪ್ರಬಾರ ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮೇಪಾಡಂಡ ಸವಿತಾ ಕೀರ್ತನ್ ಬಹುಮಾನವನ್ನು ವಿತರಣೆ ಮಾಡಿದರು.
ಮಕ್ಕಳ ಉತ್ತಮ ಪ್ರದರ್ಶನ ನೀಡಿದ ಮಕ್ಕಳಿಗೆ, ಅದಕ್ಕೆ ಶ್ರಮಿಸಿದ ಅಂಗನವಾಡಿ ಕಾರ್ಯಕರ್ತೆ ರಮ್ಯಾ, ಸಾಜಿದ ಮತ್ತು ಪೆÇೀಷಕರಿಗೆ ಅಭಿನಂದನೆ ಸಲ್ಲಿಸಿದರು. ಅಂಗನವಾಡಿ ಕೇಂದ್ರದ ಮಕ್ಕಳಿಗೆ ಹಾಸಿಗೆಯನ್ನು ಕೊಡುಗೆಯಾಗಿ ನೀಡಿದಂತ ಸಮಾಜ ಸೇವಕರಾದ ಭಾರ್ಗವ್ ಅವರಿಗೆ ಅಭಿನಂದನೆ ಸಲ್ಲಿಸಿದರು.
ಬಹುಮಾನ ವಿತರಣೆಗೆ ಸಹಾಯ ಮಾಡಿದ ಅನಿತಾ ಪ್ರೇಮ್, ಊಟದ ವ್ಯವಸ್ಥೆಗೆ ಸಹಾಯ ಮಾಡಿದ ಶ್ರೀಧರ್, ನಿತಿನ್, ದಿವ್ಯ, ಲಕ್ಷ್ಮಿ, ವೇದಿಕೆ ಅಲಂಕಾರಕ್ಕೆ ಸಹಾಯ ಮಾಡಿದ ಬಬಿತಾ, ಸುನಿತಾ, ಅಮೃತ, ಪೂಜಾ ರವರಿಗೆ ಧನ್ಯವಾದ ಅರ್ಪಿಸಿದರು.
ಮಕ್ಕಳ ಸಂತೆ ಕಾರ್ಯಕ್ರಮ: ಮೇಲ್ವಿಚಾರಕರ ಮಾರ್ಗದರ್ಶನದಂತೆ ಅಂಗನವಾಡಿ ಕೇಂದ್ರದ ಮಕ್ಕಳಿಂದ ವಿನುತನವಾದ ರೀತಿಯಲ್ಲಿ ಅಂಗನವಾಡಿಯಲ್ಲಿ ಮಕ್ಕಳ ಹೆಸರಿನ ತರಕಾರಿ ಪಾಟ್ ಮೂಲಕ ಹಾಗೂ ಕೈತೋಟದ ಮೂಲಕ ಮಕ್ಕಳ ಸಹಕಾರದೊಂದಿಗೆ ಬೆಳೆದಂತಹ ತರಕಾರಿ ಮತ್ತು ಹಣ್ಣುಗಳನ್ನು ಪ್ರದರ್ಶನಕ್ಕೆ ಇಟ್ಟು ಮಕ್ಕಳ ಸಂತೆ ಕಾರ್ಯಕ್ರಮದಲ್ಲಿ ಮಕ್ಕಳಿಂದ ಗ್ರಾಮಸ್ಥರಿಗೆ ರಾಸಾಯನಿಕ ಮುಕ್ತ ಆಹಾರವನ್ನು ಬೆಳೆಸಿ ಬಳಸುವ ಬಗ್ಗೆ ಮಾಹಿತಿಯನ್ನು ಕೊಡಿಸಲಾಯಿತು.
ಕಾರ್ಯಕ್ರಮದಲ್ಲಿ ನಿವೃತ್ತ ಅಂಗನವಾಡಿ ಕಾರ್ಯಕರ್ತೆಯರಾದ ರುಕ್ಮಿಣಿ ಮತ್ತು ಅಮರಾವತಿ, ಆಶಾ ಕಾರ್ಯಕರ್ತೆಯಾದ ಹೇಮಾವತಿ ಹಾಜರಿದ್ದರು.ಮೂರ್ನಾಡು: ಕೊಡಂಬೂರು ಜ್ಞಾನಜ್ಯೋತಿ ವಿದ್ಯಾಸಂಸ್ಥೆಯಲ್ಲಿ ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು.
ಸಂಸ್ಥೆಯ ಅಧ್ಯಕ್ಷ ರವಿ ಚೀಯಣ್ಣ ಧ್ವಜಾರೋಹಣ ನೆರವೇರಿಸಿದರು. ಉಪಾಧ್ಯಕ್ಷ ಬೆಲ್ಲು ಚಿಣ್ಣಪ್ಪ, ಸಹ ಶಿಕ್ಷಕಿ ಯಾಮಿನಿ ಸ್ಮಿತ, ಮುಖ್ಯ ಶಿಕ್ಷಕಿ ಶಿಲ್ಪಾ ಪೊನ್ನಮ್ಮ, ಸ್ಕೌಟ್ಸ್ ಹಿಮಾಲಯನ್ ವುಡ್ ಬ್ಯಾಡ್ಜ್ ಪುರಸ್ಕøತ ಗುಲ್ಶನ್ ಭುವನೇಶ್ವರಿ ದೇವಿಗೆ ಪುಷ್ಪಾರ್ಚನೆ ಸಲ್ಲಿಸಿದರು. ಸಭಾ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಾದ ಸಿ.ಜೆ. ರಜತ ಪ್ರಾರ್ಥಿಸಿದರು. ಬಿ.ಎ. ನಿಶಾ ಸ್ವಾಗತಿಸಿದರು. ಕೆ.ಆರ್. ನಿತಿನ್ ಮತ್ತು ಕೆ.ವಿ. ರಶ್ಮಿ ನಿರೂಪಿಸಿದರು. ಕೆ.ಎಂ. ಸೃಷ್ಟಿ ವಂದಿಸಿದರು.ನಾಪೆÇೀಕ್ಲು: ಇಲ್ಲಿಗೆ ಸಮೀಪದ ಕುಂಜಿಲ ಗ್ರಾಮದ ಆಕ್ಸ್ಫರ್ಡ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕಕ್ಕಬೆ ಕ್ಲಸ್ಟರ್ನ 2025-26ನೇ ಸಾಲಿನ ಪ್ರತಿಭಾ ಕಾರಂಜಿ ಕಲೋತ್ಸವ ಕಾರ್ಯಕ್ರಮ ಜರುಗಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಲಾ ವ್ಯವಸ್ಥಾಪಕ ಶಾಹಿದ್ ಅಲಿ ಮಾತನಾಡಿ, ಪ್ರತಿಭಾ ಕಾರಂಜಿ ಕೇವಲ ಸ್ಪರ್ಧೆಯಲ್ಲ. ಅದು ಮಕ್ಕಳ ಆತ್ಮವಿಶ್ವಾಸವನ್ನು ಹೆಚ್ಚಿಸುವ, ಮಕ್ಕಳಲ್ಲಿ ಅಡಗಿರುವ ಕಲೆಯನ್ನು ಹೊರತರುವ, ಸಾಂಸ್ಕøತಿಕ ಬೇರುಗಳನ್ನು ಗಟ್ಟಿಗೊಳಿಸುವ ಮಹಾಯಜ್ಞ ಎಂದರು.
ಜಿಲ್ಲಾ ಯೋಜನ ಸಮನ್ವಯಾಧಿಕಾರಿ ಸೌಮ್ಯ ಪೆÇನ್ನಪ್ಪ ಮಾತನಾಡಿ, ಮಕ್ಕಳಿಗೆ ಸೋಲು - ಗೆಲುವನ್ನು ಸಮಾನವಾಗಿ ಸ್ವೀಕರಿಸಲು ತಿಳಿಸಿ, ಕಾರ್ಯಕ್ರಮವು ಯಶಸ್ವಿಯಾಗಿ ನಡೆಯಲು ಶುಭ ಹಾರೈಸಿದರು.
ವಿಷಯ ಪರಿವೀಕ್ಷಕರು ಬಿಂದು ಕಾರ್ಯಕ್ರಮದಲ್ಲಿ ಮಾತನಾಡಿ, ಎಲ್ಲರೂ ವೇದಿಕೆಗೆ ಬಂದು ತಮ್ಮ ಪ್ರತಿಭೆಯನ್ನು ಪ್ರದರ್ಶಿಸುವ ಧೈರ್ಯವೇ ದೊಡ್ಡ ಗೆಲುವು ಎಂಬುದನ್ನು ಅರಿತು, ವಿದ್ಯಾರ್ಥಿಗಳು ಕಲೋತ್ಸವದಲ್ಲಿ ಭಾಗವಹಿಸಿ ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಿದ್ದು ಉಳಿದ ವಿದ್ಯಾರ್ಥಿಗಳಿಗೆ ಇದು ಮಾರ್ಗದರ್ಶಕವಾಗಿದೆ ಎಂದರು.
ಉತ್ಸಾಹದಿಂದ ಭಾಗವಹಿಸಿದ ವಿದ್ಯಾರ್ಥಿಗಳು ವಿಶಿಷ್ಟ ಶೈಲಿಯಲ್ಲಿ ತಮ್ಮ ತಮ್ಮ ಪ್ರತಿಭೆಯನ್ನು ಹೊರಹಾಕಿದರು. ಕಾರ್ಯಕ್ರಮದಲ್ಲಿ ಪರಿವೀಕ್ಷಕರೂ, ಸಹ ಸಂಯೋಜಕರು ಆದ ಶರ್ಮಿಳಾ ಎಸ್., ಬಿ.ಆರ್.ಪಿ. ಮಂಜುಳಾ ಚಿತ್ತಾಪುರ, ಕಕ್ಕಬೆ ಕಸ್ಟರ್ ಮಟ್ಟದ ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಯಾದ ಕಲ್ಪನಾ, ಕಕ್ಕಬೆ ಕ್ಲಸ್ಟರ್ನ ಎಲ್ಲಾ ಶಾಲಾ ಶಿಕ್ಷಕರೂ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಶಾಲೆಯ ಮುಖ್ಯೋಪಾಧ್ಯಾಯಿನಿ ಶಬ್ರೀನ್ ಫಾತಿಮಾ ಸ್ವಾಗತಿಸಿ, ಗಗನ್ ನಿರೂಪಿಸಿ, ಶಹೀರ್ ಉಸ್ತಾದ್ ವಂದಿಸಿದರು.ತಟ್ಟೆ ಎಸೆತ ಸ್ಪರ್ಧೆಯಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆ
ಐಗೂರು: ಕೂಡಿಗೆಯ ಕ್ರೀಡಾ ಶಾಲಾ ಮೈದಾನದಲ್ಲಿ ನಡೆದ ಪ್ರೌಢಶಾಲಾ ವಿಭಾಗದ ಜಿಲ್ಲಾಮಟ್ಟದ ತಟ್ಟೆ ಎಸೆತ ಸ್ಪರ್ಧೆಯಲ್ಲಿ ಐಗೂರಿನ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿ ಜೀವನ್ ಪಿ.ಎಸ್. ಜಿಲ್ಲೆಗೆ ದ್ವಿತೀಯ ಸ್ಥಾನ ಗಳಿಸಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾನೆ.ಚೆಯ್ಯಂಡಾಣೆ: ಸಮೀಪದ ಕುಂಜಿಲ ಆಕ್ಸ್ಫರ್ಡ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಜರುಗಿದ ಕಕ್ಕಬೆ ಕ್ಲಸ್ಟರ್ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಭಾಗವಹಿಸಿದ ಕಕ್ಕಬೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ತಾಲೂಕುಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
10 ವೈಯಕ್ತಿಕ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಹಾಗೂ 5 ತೃತೀಯ ಸ್ಥಾನ ಪಡೆದು ಸಾಧನೆ ಮಾಡಿದ್ದಾರೆ ಎಂದು ಮುಖ್ಯ ಶಿಕ್ಷಕಿ ಮಾಲತಿ ಹಾಗೂ ಎಸ್ಡಿಎಂಸಿ ಸದಸ್ಯರು ತಿಳಿಸಿದ್ದಾರೆ.ಕೂಡಿಗೆ: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮದಲಾಪುರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪೆÇೀಷಕರ - ಶಿಕ್ಷಕರ ಮಹಾಸಭೆ ಏರ್ಪಡಿಸಲಾಗಿತ್ತು.
ಸೋಮವಾರಪೇಟೆ ತಾಲೂಕಿನ ಕ್ಷೇತ್ರ ಸಮನ್ವಯ ಅಧಿಕಾರಿ ಮಂಜೇಶ್ ಚಾಲನೆ ನೀಡಿದರು. ನಂತರ ಮಾತನಾಡಿ, ಪೆÇೀಷಕರು ಶಾಲಾ ಅಭಿವೃದ್ಧಿಗೆ ಸಕ್ರಿಯವಾಗಿ ಭಾಗವಹಿಸುವ ಮೂಲಕ ಸಹಕಾರಿಗಳಾಗಬೇಕು. ಮಕ್ಕಳ ವಿದ್ಯಾಭ್ಯಾಸ ಕಡೆಗೆ ಹೆಚ್ಚು ಗಮನ ಹರಿಸಬೇಕು ಎಂದರು. ಸಭೆಯಲ್ಲಿ ಜಿಲ್ಲಾ ದೈಹಿಕ ಪರಿವೀಕ್ಷಕ ಡಾ. ಸದಾಶಿವ ಎಸ್. ಪಲ್ಲೆದ್ ಮಾತನಾಡಿ, ಪ್ರಾಥಮಿಕ ಹಂತದ ವಿದ್ಯಾರ್ಥಿಗಳ ಜ್ಞಾನ ಬೆಳವಣಿಗೆಗೆ ಶಿಕ್ಷಕರ ಜೊತೆಯಲ್ಲಿ ಪೆÇೀಷಕರ ಪಾತ್ರ ಬಹು ಮುಖ್ಯ. ಮೊದಲ ಹಂತದ ಶಿಕ್ಷಣ ಮುಂದಿನ ಹೆಚ್ಚುವರಿ ಶಿಕ್ಷಣಕ್ಕೆ ದಾರಿ ದೀಪವಾಗಲಿದೆ ಎಂದು ವಿವಿಧ ಮಾರ್ಗದರ್ಶನ ನೀಡುವ ಮೂಲಕ ಅಭಿಪ್ರಾಯ ವ್ಯಕ್ತಪಡಿಸಿದರು.
ಶಾಲೆಯಲ್ಲಿ ನೂತನವಾಗಿ ವಿಶೇಷ ಇಂಗ್ಲಿμï ಮಾಧ್ಯಮದ ತರಗತಿಯ ಉದ್ಘಾಟನೆ ನೆರವೇರಿಸಿತು. ಕಾರ್ಯಕ್ರಮದ ಅಂಗವಾಗಿ ವಿವಿಧ ಕ್ರೀಡಾಕೂಟಗಳು ನಡೆದವು. ಈ ಸಂದರ್ಭದಲ್ಲಿ ಶಾಲಾ ಮುಖ್ಯೋಪಾಧ್ಯಾಯಿನಿ ರೇಣುಕಾ, ಸಿ.ಆರ್.ಪಿ. ಶಾಂತಕುಮಾರ್, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಗಣೇಶ್, ಆರಿಫ್, ಗಾಯಿತ್ರಿ, ವೀಣಾ, ಸುಂದರ್, ಮಿಥುನ್ ಸೇರಿದಂತೆ ನೂರಾರು ಪೆÇೀಷಕರು ಭಾಗವಹಿಸಿದ್ದರು.ನಾಪೆÇೀಕ್ಲು: ಚೇರಂಬಾಣೆಯ ಶ್ರೀ ರಾಜರಾಜೇಶ್ವರಿ ಶಾಲೆಯ ವಿದ್ಯಾರ್ಥಿಗಳು ವಿವಿಧ ಸ್ಪರ್ಧೆಯಲ್ಲಿ ಭಾಗವಹಿಸಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಕೂಡಿಗೆ ಕ್ರೀಡಾ ಶಾಲೆಯಲ್ಲಿ ಇತ್ತೀಚಿಗೆ ನಡೆದ ಜಿಲ್ಲಾಮಟ್ಟದ ಪ್ರೌಢಶಾಲಾ ವಿಭಾಗದ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಚೇರಂಬಾಣೆಯ ಶ್ರೀ ರಾಜರಾಜೇಶ್ವರಿ ಶಾಲೆಯ ಹತ್ತನೇ ತರಗತಿ ವಿದ್ಯಾರ್ಥಿಗಳಾದ ಅಶಿಕ್ ಮಂದಣ್ಣ ಕೆ.ಪಿ. ಜಾವೆಲಿನ್ ಎಸೆತದಲ್ಲಿ ಪ್ರಥಮ ಸ್ಥಾನ, ಜೀವ ನಾಣಯ್ಯ 400 ಮೀಟರ್ ಓಟದ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಶರಣ್ ಚಂಗಪ್ಪ ಪಿ.ಸಿ. ತಟ್ಟೆ ಎಸೆತದಲ್ಲಿ ಮೂರನೇ ಸ್ಥಾನ ಪಡೆದುಕೊಂಡಿರುತ್ತಾರೆ. ವಿಜೇತ ವಿದ್ಯಾರ್ಥಿಗಳಿಗೆ ಶಾಲಾ ವ್ಯವಸ್ಥಾಪಕಿ ನಾಟೋಳಂಡ ಸರೋಜಿನಿ, ಶಾಲಾ ಮುಖ್ಯ ಶಿಕ್ಷಕ ಕುದುಪಜೆ ಕವನ್ ಕುಮಾರ್, ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ಸ್ವರೂಪ ಕೆ.ಬಿ., ದೈಹಿಕ ಶಿಕ್ಷಣ ಶಿಕ್ಷಕಿ ಕರವಂಡ ಸೀಮಾ ಗಣಪತಿ ಮಾರ್ಗದರ್ಶನ ನೀಡಿದ್ದರು.ಐಗೂರು: ಕಾಜೂರು ಶಾಲೆಯಲ್ಲಿ ಪೆÇೀಷಕರು ಮತ್ತು ಶಿಕ್ಷಕರ ಸಭೆ ನಡೆಯಿತು. ಸಭೆಯಲ್ಲಿ ಸಿಆರ್ಪಿ ಗಿರೀಶ್ ಮಾತನಾಡಿ, ಸುತ್ತೋಲೆ ಪ್ರಕಾರ ಐದು ದಿನ ಮೊದಲೇ ಪೆÇೀಷಕರಿಗೆ ಸಭೆಗಳ ಬಗ್ಗೆ ಮಾಹಿತಿಗಳನ್ನು ನೀಡುತ್ತಿದ್ದರೂ ಪೆÇೀಷಕರು ಸಭೆಗಳಿಗೆ ಗೈರು ಹಾಜರಾಗುತ್ತಿದ್ದಾರೆ. ಸರಕಾರದಿಂದ ಬರುವ ಸೌಲಭ್ಯಗಳ ಬಗ್ಗೆ, ಮಕ್ಕಳ ಕಲಿಕೆ ಬಗ್ಗೆ ಶಿಕ್ಷಕರಲ್ಲಿ ಪೆÇೀಷಕರು ಚರ್ಚಿಸಬೇಕು.
ಸರ್ಕಾರಿ ಶಾಲೆಗಳಲ್ಲಿ ಉಚಿತ ಶಿಕ್ಷಣ, ಪಠ್ಯಪುಸ್ತಕ, ಉಚಿತ ಆಹಾರ ಸಿಗುತ್ತಿದ್ದರೂ ಖಾಸಗಿ ಶಾಲೆಗಳಿಗೆ ಹೆಚ್ಚಿನ ಹಣ ಕಟ್ಟಿ ಅಲ್ಲಿಯ ಸಭೆಗಳಿಗೆ ಹಾಜರಾಗುವ ಆಸಕ್ತಿ ಸರ್ಕಾರಿ ಶಾಲೆಗಳ ಸಭೆಗಳಲ್ಲಿ ಕಂಡುಬರುತ್ತಿಲ್ಲ. ದಾಖಲೆಗಳನ್ನು ನೀಡಿದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ, ನಾಲ್ಕು ಕಿಲೋಮೀಟರ್ ದೂರದಿಂದ ಬರುವ ವಿದ್ಯಾರ್ಥಿಗಳಿಗೆ ವಾರ್ಷಿಕ ರೂ. 6,000 ಸಾರಿಗೆ ಭತ್ಯೆ ನೀಡುತ್ತಿದ್ದು, ಪೆÇೀಷಕರ ಜವಾಬ್ದಾರಿ ಜೊತೆ ಶಿಕ್ಷಕರ ಜವಾಬ್ದಾರಿಯೂ ಇದ್ದು ಕ್ರಿಯಾಶೀಲ ಎಸ್ಡಿಎಂಸಿ ಸದಸ್ಯರಿದ್ದಾರೆ. ಏಳು ದಿನ ಶಾಲೆಗೆ ಗೈರು ಹಾಜರಾದರೆ ಶಾಲೆ ಬಿಟ್ಟ ಮಗು ಎಂದು ದಾಖಲಾಗುತ್ತದೆ. ಮೇಲಾಧಿಕಾರಿಗಳಿಗೆ ತಿಳಿಸಿ ಶಿಕ್ಷಕರು ಪೆÇೀಷಕರ ಮನೆಗೆ ಭೇಟಿ ನೀಡಬೇಕಾಗುತ್ತದೆ.
ಮಕ್ಕಳ ಆರೋಗ್ಯ ಸಮಸ್ಯೆ ಇದ್ದರೆ ಮಕ್ಕಳ ಸಹಾಯವಾಣಿ 108 ಸಂಖ್ಯೆಗೆ ತಿಳಿಸಿ ಮಕ್ಕಳ ಭವಿಷ್ಯ ಕಾಪಾಡಿಕೊಳ್ಳಿ ಎಂದರು. ಶಿಕ್ಷಕ ಸತೀಶ್ ಮಾತನಾಡಿ, ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯವೆಸಗುವ ಅಪರಾಧಿಗಳಿಗೆ ಏಳು ವರ್ಷ ಜೈಲು ಮತ್ತು ದಂಡ ವಿಧಿಸಲಾಗುತ್ತದೆ ಎಂದರು. ಕಾರ್ಯಕ್ರಮದಲ್ಲಿ ಎಸ್ಡಿಎಂಸಿ ಅಧ್ಯಕ್ಷ ಚಂದ್ರಶೇಖರ್, ಸಿಆರ್ಪಿ ಗಿರೀಶ್, ಹೊನ್ನಪ್ಪ, ಮುಖ್ಯ ಶಿಕ್ಷಕಿ ಸರಳ ಕುಮಾರಿ, ಶಿಕ್ಷಕಿ ಅನಸೂಯ, ಸ್ವರ್ಣ ವಿದ್ಯಾ ಭಾಗವಹಿಸಿದ್ದರು.ವೀರಾಜಪೇಟೆ: ವೀರಾಜಪೇಟೆ ಸಮೀಪದ ಹೊಸಕೋಟೆ ಗ್ರಾಮದಲ್ಲಿ ಕಾವೇರಿ ಸಂಘದ ವತಿಯಿಂದ ಗ್ರಾಮದಲ್ಲಿ ಸ್ವಚ್ಛತಾ ಕಾರ್ಯ ಹಾಗೂ ಮಕ್ಕಳ ದಿನಾಚರಣೆ ಕಾರ್ಯಕ್ರಮ ನಡೆಯಿತು.
ಸಂಘದ ಅಧ್ಯಕ್ಷರು ಹಾಗೂ ಸದಸ್ಯರು ಬೆಳಿಗ್ಗೆ 8 ಗಂಟೆಯಿಂದ ರಸ್ತೆ ಬದಿ ಹಾಗೂ ಅಂಗನವಾಡಿ ಹಾಗೂ ಸರಕಾರಿ ಶಾಲಾ ಆವರಣದಲ್ಲಿ ಸ್ವಚ್ಛತಾ ಕಾರ್ಯ ನಡೆಸಿ ಬಳಿಕ ಶಾಲೆ ಹಾಗೂ ಅಂಗನವಾಡಿಯಲ್ಲಿ ಮಕ್ಕಳಿಗೆ ಕ್ರೀಡಾಕೂಟವನ್ನು ನಡೆಸಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ ಸಿಆರ್ಪಿ ಪ್ರವೀಣ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಸರಕಾರದ ವತಿಯಿಂದ ಈ ವರ್ಷ ಮಕ್ಕಳ ದಿನಾಚರಣೆಯಲ್ಲಿ ಪೆÇೀಷಕರ ಸಭೆ ಕರೆಯಲಾಗಿದ್ದು, ಮಕ್ಕಳ ಶಿಕ್ಷಣದ ಬಗ್ಗೆ ಅರಿವು ಹಾಗೂ ಮಾಹಿತಿ ನೀಡುವ ಕೆಲಸ ಮಾಡಲಾಗುತ್ತದೆ ಎಂದು ತಿಳಿಸಿದರು.
ಕಾವೇರಿ ಸಂಘದ ಅಧ್ಯಕ್ಷ ಎ.ಎ. ಸುಬ್ರಮಣಿ ಮಾತನಾಡಿ, ಈ ವರ್ಷ ಮೊದಲ ಬಾರಿಗೆ ಗ್ರಾಮದಲ್ಲಿ ಸ್ವಚ್ಛತಾ ಕಾರ್ಯ ಹಾಗೂ ಮಕ್ಕಳಿಗೆ ಕ್ರೀಡಾಕೂಟ ಹಾಗೂ ಬಹುಮಾನ ವಿತರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಉತ್ತಮ ಕಾರ್ಯಕ್ರಮವಾಗಿದೆ. ಮಕ್ಕಳ ಸಂತೋಷದಲ್ಲಿ ಒಂದು ದಿನ ಗ್ರಾಮಸ್ಥರು ಭಾಗಿಯಾಗುವ ಅವಕಾಶ ದೊರಕಿದೆ ಎಂದು ತಿಳಿಸಿದರು.
ಈ ಸಂದರ್ಭ ಸಂಘದ ಉಪಾಧ್ಯಕ್ಷ ಪಿ.ಕೆ. ಮನೋಹರ, ಕಾರ್ಯದರ್ಶಿ ಎಂ.ಎಸ್. ಸತೀಶ್, ಖಜಾಂಚಿ ಎ.ವಿ. ನವೀನ, ಸದಸ್ಯರಾದ ಡಿಕ್ಕಿ ಎ.ಎ., ಹೆಚ್.ಬಿ. ತಮ್ಮಯ್ಯ, ದೇವಯ್ಯ ಬಿ.ಕೆ., ಅಶ್ವಿನ್ ಬಿ.ಸಿ. ಶಿಕ್ಷಕಿಯರಾದ ಉಷಾ, ಸುನೀತಾ, ನೇತ್ರಾವತಿ ಹಾಜರಿದ್ದರು.ನಾಪೆÇೀಕ್ಲು: ಇಲ್ಲಿಗೆ ಸಮೀಪದ ಕುಂಜಿಲ ಗ್ರಾಮದ ಆಕ್ಸ್ಫರ್ಡ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕಕ್ಕಬೆ ಕ್ಲಸ್ಟರ್ನ 2025-26ನೇ ಸಾಲಿನ ಪ್ರತಿಭಾ ಕಾರಂಜಿ ಕಲೋತ್ಸವ ಕಾರ್ಯಕ್ರಮ ಜರುಗಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಲಾ ವ್ಯವಸ್ಥಾಪಕ ಶಾಹಿದ್ ಅಲಿ ಮಾತನಾಡಿ, ಪ್ರತಿಭಾ ಕಾರಂಜಿ ಕೇವಲ ಸ್ಪರ್ಧೆಯಲ್ಲ. ಅದು ಮಕ್ಕಳ ಆತ್ಮವಿಶ್ವಾಸವನ್ನು ಹೆಚ್ಚಿಸುವ, ಮಕ್ಕಳಲ್ಲಿ ಅಡಗಿರುವ ಕಲೆಯನ್ನು ಹೊರತರುವ, ಸಾಂಸ್ಕøತಿಕ ಬೇರುಗಳನ್ನು ಗಟ್ಟಿಗೊಳಿಸುವ ಮಹಾಯಜ್ಞ ಎಂದರು.
ಜಿಲ್ಲಾ ಯೋಜನ ಸಮನ್ವಯಾಧಿಕಾರಿ ಸೌಮ್ಯ ಪೆÇನ್ನಪ್ಪ ಮಾತನಾಡಿ, ಮಕ್ಕಳಿಗೆ ಸೋಲು - ಗೆಲುವನ್ನು ಸಮಾನವಾಗಿ ಸ್ವೀಕರಿಸಲು ತಿಳಿಸಿ, ಕಾರ್ಯಕ್ರಮವು ಯಶಸ್ವಿಯಾಗಿ ನಡೆಯಲು ಶುಭ ಹಾರೈಸಿದರು.
ವಿಷಯ ಪರಿವೀಕ್ಷಕರು ಬಿಂದು ಕಾರ್ಯಕ್ರಮದಲ್ಲಿ ಮಾತನಾಡಿ, ಎಲ್ಲರೂ ವೇದಿಕೆಗೆ ಬಂದು ತಮ್ಮ ಪ್ರತಿಭೆಯನ್ನು ಪ್ರದರ್ಶಿಸುವ ಧೈರ್ಯವೇ ದೊಡ್ಡ ಗೆಲುವು ಎಂಬುದನ್ನು ಅರಿತು, ವಿದ್ಯಾರ್ಥಿಗಳು ಕಲೋತ್ಸವದಲ್ಲಿ ಭಾಗವಹಿಸಿ ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಿದ್ದು ಉಳಿದ ವಿದ್ಯಾರ್ಥಿಗಳಿಗೆ ಇದು ಮಾರ್ಗದರ್ಶಕವಾಗಿದೆ ಎಂದರು.
ಉತ್ಸಾಹದಿಂದ ಭಾಗವಹಿಸಿದ ವಿದ್ಯಾರ್ಥಿಗಳು ವಿಶಿಷ್ಟ ಶೈಲಿಯಲ್ಲಿ ತಮ್ಮ ತಮ್ಮ ಪ್ರತಿಭೆಯನ್ನು ಹೊರಹಾಕಿದರು. ಕಾರ್ಯಕ್ರಮದಲ್ಲಿ ಪರಿವೀಕ್ಷಕರೂ, ಸಹ ಸಂಯೋಜಕರು ಆದ ಶರ್ಮಿಳಾ ಎಸ್., ಬಿ.ಆರ್.ಪಿ. ಮಂಜುಳಾ ಚಿತ್ತಾಪುರ, ಕಕ್ಕಬೆ ಕಸ್ಟರ್ ಮಟ್ಟದ ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಯಾದ ಕಲ್ಪನಾ, ಕಕ್ಕಬೆ ಕ್ಲಸ್ಟರ್ನ ಎಲ್ಲಾ ಶಾಲಾ ಶಿಕ್ಷಕರೂ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಶಾಲೆಯ ಮುಖ್ಯೋಪಾಧ್ಯಾಯಿನಿ ಶಬ್ರೀನ್ ಫಾತಿಮಾ ಸ್ವಾಗತಿಸಿ, ಗಗನ್ ನಿರೂಪಿಸಿ, ಶಹೀರ್ ಉಸ್ತಾದ್ ವಂದಿಸಿದರು.