ಗೋಣಿಕೊಪ್ಪ ವರದಿ, ನ. 20: ಬಾಳೆಲೆ ವ್ಯವಸಾಯೋತ್ಪನ್ನ ಮಾರಾಟ ಮತ್ತು ಪರಿವರ್ತನಾ ಸಹಕಾರ ಸಂಘ ನಿಯಮಿತ ಆಡಳಿತ ಮಂಡಳಿಯ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಿತು.
ಅಧ್ಯಕ್ಷರಾಗಿ ಅರಮಣಮಾಡ ಪಿ. ಗಣಪತಿ (ಸುಗುಣ) ಪುನರಾಯ್ಕೆಯಾದರು. ಉಪಾಧ್ಯಕ್ಷರಾಗಿ ಮುಕ್ಕಾಟಿರ ಜಾನಕಿ ಕಾವೇರಪ್ಪ ಅವಿರೋಧವಾಗಿ ಆಯ್ಕೆಯಾದರು.
ಆಡಳಿತ ಮಂಡಳಿ ನಿರ್ದೇಶಕರಾದ ಅಳಮೇಂಗಡ ಸುಬ್ಬಯ್ಯ, ಮಾಪಂಗಡ ಜಿ. ಅಯ್ಯಪ್ಪ, ಕಾಯಮಾಡ ರಾಜ, ಬಾಚಮಾಡ ವಿಶು, ಮಂದೇಮಾಡ ಯು. ಗಣಪತಿ, ಅಡ್ಡೇಂಗಡ ಕೆ. ಕಾವೇರಮ್ಮ, ಕಾಡ್ಯಮಾಡ ಆರ್. ಸುಬ್ಬಯ್ಯ, ಹೆಚ್.ಜಿ. ವಿಜಯ, ಎ.ಕೆ. ದೇವರಾಜು, ಕೆ.ಡಿ.ಸಿ.ಸಿ. ಬ್ಯಾಂಕ್ ನಾಮನಿರ್ದೇಶಕ ಗುಮ್ಮಟೀರ ಕಿಲನ್ ಗಣಪತಿ, ಪ್ರಮುಖರಾದ ಪೆÇೀಡಮಾಡ ಸುಕೇಶ್ ಭೀಮಯ್ಯ, ಮುಕ್ಕಾಟಿರ ವಾಸು ಕಾವೇರಪ್ಪ, ಅಡ್ಡೇಂಗಡ ಅಜಯ್ ಕುಶಾಲಪ್ಪ, ಕೊಕ್ಕಲೆಮಾಡ ನಾಣಯ್ಯ ಉಪಸ್ಥಿತರಿದ್ದರು.