ಮಡಿಕೇರಿ, ನ. ೧೮:ಕೃಷಿ ವಿಜ್ಞಾನದ ಅತ್ಯುತ್ತಮ ಲೇಖನಕ್ಕಾಗಿ ನೀಡುವ ೨೦೨೪ನೇ ಸಾಲಿನ ಪ್ರೊ. ಬಿ.ವಿ. ವೆಂಕಟರಾವ್ ಪ್ರಶಸ್ತಿ ಜಿಲ್ಲೆಯ ಯಾಲದಾಳು ಕುಮುದಾ ಜಯ ಪ್ರಶಾಂತ್ ಅವರಿಗೆ ದೊರೆತಿದೆ.

ಕುಮುದಾ ಕೃಷಿ ಇಲಾಖೆಯಲ್ಲಿ ಆತ್ಮಯೋಜನೆಯಲ್ಲಿ ಉಪ ಯೋಜನಾ ನಿರ್ದೇಶಕಿಯಾಗಿ ಕಾರ್ಯನಿರ್ವಹಿಸಿದ್ದು, ಪ್ರಸ್ತುತ ಸ್ವಯಂ ಉದ್ಯಮಿಯಾಗಿದ್ದು, ಎ.ಕೆ. ಅಗ್ರಿಸೆಲ್ಯೂಷನ್ ಎಂಬ ಸಂಸ್ಥೆ ಸ್ಥಾಪಿಸಿ ಈ ಮೂಲಕ ಸಾವಯವ ಕೃಷಿಯಲ್ಲಿ ರೈತರನ್ನು ತೊಡಗಿಸುತ್ತಿದ್ದಾರೆ. ಇವರ ೨೦೨೪ನೇ ಸಾಲಿನಲ್ಲಿ ವಿಶ್ವವಿದ್ಯಾನಿಲಯದ ಕೃಷಿ ವಿಜ್ಞಾನ ತ್ರೆöÊಮಾಸಿಕ ಪತ್ರಿಕೆಯಲ್ಲಿ ಪ್ರಕಟವಾಗಿದ್ದ ಸಾವಯವ ಕೃಷಿ ಪ್ರÀಮಾಣೀಕರಣದ ಮಹತ್ವ ರೈತರಿಗೆ ಸರಳ ಮಾರ್ಗದರ್ಶಿ ಎಂಬ ಲೇಖನಕ್ಕೆ ಪ್ರೊ. ಬಿ.ವಿ. ವೆಂಕಟರಾವ್ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ೪ಏಳನೇ ಪುಟಕ್ಕೆ (ಮೊದಲ ಪುಟದಿಂದ) ಇತ್ತೀಚೆಗೆ ಜಿಕೆವಿಕೆ ಕೃಷಿ ವಿಶ್ವವಿದ್ಯಾನಿಲಯದ ಆವರಣದಲ್ಲಿ ನಡೆದ ೨೦೨೫ರ ಕೃಷಿ ಮೇಳದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗಿದೆ. ಪ್ರಸ್ತುತ ಬೆಂಗಳೂರಿನಲ್ಲಿ ಪತಿ ಹಾಗೂ ಪುತ್ರನೊಂದಿಗೆ ವಾಸವಾಗಿರುವ ಕುಮುದಾ ಮಡಿಕೇರಿ ತಾಲೂಕು ಗಾಳಿಬೀಡು ನಿವಾಸಿ ಯಾಲದಾಳು ಜಯಪ್ರಶಾಂತ್ ಅವರ ಪತ್ನಿ.