ಮಡಿಕೇರಿ, ನ. ೧೮: ಭಾರತೀಯ ಪುರಾತತ್ವ ಸರ್ವೇಕ್ಷಣ, ಪುರಾತತ್ವ, ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ವತಿಯಿಂದ ತಾ. ೧೯ ರಿಂದ ೨೫ರ ತನಕ ವಿಶ್ವಪರಂಪರಾ ಸಪ್ತಾಹ ನಗರದ ಕೋಟೆಯಲ್ಲಿ ನಡೆಯಲಿದೆ.
ತಾ. ೧೯ ರಂದು ಮಧ್ಯಾಹ್ನ ೧.೩೦ಕ್ಕೆ ಶಾಶ್ವತ ಛಾಯಾಚಿತ್ರ ಪ್ರದರ್ಶನ ಗ್ಯಾಲರಿ ಸಹಿತ ವ್ಯಾಖ್ಯಾನ ಕೇಂದ್ರ ಹಾಗೂ ಛಾಯಾಚಿತ್ರ ಪ್ರದರ್ಶನವನ್ನು ಸಂಸದ ಯದುವೀರ್ ಒಡೆಯರ್ ನೆರವೇರಿಸಲಿದ್ದಾರೆ. ಅತಿಥಿಗಳಾಗಿ ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ, ಜಿಲ್ಲಾಧಿಕಾರಿ ವೆಂಕಟ್ ರಾಜಾ, ಪದ್ಮಶ್ರೀ ಪುರಸ್ಕೃತೆ ರಾಣಿ ಮಾಚಯ್ಯ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್, ಎಎಸ್‌ಐ ಶಿಲಾಶಾಸನ ಶಾಖೆ ನಿರ್ದೇಶಕ ಡಾ. ಕೆ. ಮುನಿರತ್ನಮ್, ಅಧೀಕ್ಷಕ ಪುರಾತತ್ವಶಾಸ್ತçಜ್ಞ ಡಾ. ಆರ್.ಎನ್. ಕುಮಾರನ್, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಬಸವರಾಜು ಭಾಗವಹಿಸಲಿದ್ದಾರೆ. ಇದೇ ವೇಳೆ ಸ್ಮರಣಿಕೆ ಮಳಿಗೆಗಳು, ಕೊಡಗಿನ ಸಾಂಪ್ರದಾಯಿಕ ನೃತ್ಯ ಪ್ರದರ್ಶನ ಮೂಡಿಬರಲಿದೆ. ತಾ. ೨೦ ರಿಂದ ೨೫ರ ತನಕ ವಿವಿಧ ರೀತಿಯ ಕಾರ್ಯಕ್ರಮಗಳು, ಉಪನ್ಯಾಸಕ, ಚಿತ್ರಕಲಾ ಸ್ಪರ್ಧೆ, ಜಾಗೃತಿ ಕಾರ್ಯಕ್ರಮಗಳು, ಛದ್ಮವೇಷ, ಮಣ್ಣಿನ ಮಾದರಿ ತಯಾರಿಕೆ, ಸಸಿ ನೆಡುವುದು ಹೀಗೆ ಹಲವು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.