ಮಡಿಕೇರಿ, ನ. ೧೮ : ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ವೀರಾಜ ಪೇಟೆ ಘಟಕದ ನೂತನ ಅಧ್ಯಕ್ಷರಾಗಿ ಡಾ. ಮಾತಂಡ ಆರ್. ಅಯ್ಯಪ್ಪ ಅವರು ಆಯ್ಕೆಗೊಂಡಿದ್ದಾರೆ. ಕಾರ್ಯ ದರ್ಶಿ ಹಾಗೂ ಖಜಾಂಚಿಯಾಗಿ ಡಾ. ಕೆಂಬಡತAಡ ಗೌರವ್ ಗಣಪತಿ ಅವರು ನೇಮಕಗೊಂಡಿದ್ದಾರೆ. ಐ.ಎಂ.ಎ. ವೀರಾಜಪೇಟೆಯ ವಾರ್ಷಿಕ ಮಹಾಸಭೆ ಇತ್ತೀಚೆಗೆ ನಡೆದಿದ್ದು ಈ ಸಂದರ್ಭ ಇವರುಗಳು ಅವಿರೋಧವಾಗಿ ಅಧ್ಯಕ್ಷ ಹಾಗೂ ಕಾರ್ಯದರ್ಶಿಯಾಗಿ ಆಯ್ಕೆಗೊಂಡರು.
ಈ ಹಿಂದೆ ಅಧ್ಯಕ್ಷರಾಗಿ ಡಾ. ಫಾತಿಮಾ ಕಾರ್ಯಪ್ಪ ಹಾಗೂ ಕಾರ್ಯದರ್ಶಿಯಾಗಿ ಡಾ. ಸೌಮ್ಯ ಗಣೇಶ್ ನಾಣಯ್ಯ ಅವರು ಕಾರ್ಯನಿರ್ವಹಿಸುತ್ತಿದ್ದರು. ಇದೀಗ ನೂತನ ಪದಾಧಿಕಾರಿಗಳು ನೇಮಕಗೊಂಡಿದ್ದಾರೆ.