ಮಡಿಕೇರಿ, ನ. ೧೮: ಮೇಕೇರಿ ಗ್ರಾಮ ವ್ಯಾಪ್ತಿಯ ಖಿಲರ್ ಜುಮಾ ಮಸೀದಿ, ಎಸ್‌ವೈಎಸ್ ಮೇಕೇರಿ ಶಾಖೆ ಮತ್ತು ಜಿಲ್ಲಾ ರಕ್ತನಿಧಿ ಕೇಂದ್ರದ ಸಂಯುಕ್ತ ಆಶ್ರಯದಲ್ಲಿ ರಕ್ತದಾನ ಶಿಬಿರವು ಮುನವ್ವಿರುಲ್ ಇಸ್ಲಾಂ ಮದರಸ ಸಂಭಾಗಣದಲ್ಲಿ ನಡೆಯಿತು.

ಖತೀಬರಾದ ಅಬ್ದುಲ್ ಸಲಾಂ ಹಲ್ರಮಿ ಪ್ರಾರ್ಥಿಸಿ, ನೌಫಲ್ ಹನೀಫಿ ಪಡಿಯಾನಿ ಸ್ವಾಗತಿಸಿದರು. ೫೫ನೇ ಬಾರಿ ರಕ್ತದಾನ ಮಾಡಿದ ಮೇಕೇರಿ ಗ್ರಾಮದ ಮಡಿಕೇರಿ ನಗರ ಠಾಣೆಯ ಸಹಾಯಕ ಉಪ ನಿರೀಕ್ಷಕ ಬಿ.ಎಂ. ರಾಮಪ್ಪ ಅವರನ್ನು ಸನ್ಮಾನಿಸಲಾಯಿತು.

ರಕ್ತದಾನದ ಮಹತ್ವನ್ನು ಕುರಿತು ಜಿಲ್ಲಾ ವೈದ್ಯಾಧಿಕಾರಿ ಡಾ. ಕರುಂಬಯ್ಯ ವಿವರಿಸಿದರು. ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರಾದ ಎಂ.ಯು. ಹನೀಫ್ ಭಾಗವಹಿಸಿದ್ದರು. ಸುಮಾರು ೪೪ ದಾನಿಗಳು ರಕ್ತದಾನ ಮಾಡಿದರು.