ವೀರಾಜಪೇಟೆ, ನ. ೧೮: ಕೊಡವ ಜನಾಂಗ ಚಿಕ್ಕದಾದರೂ ಎಲ್ಲಾ ಕ್ಷೇತ್ರಗಳಲ್ಲಿ ಸಾಧನೆ ಮಾಡಿ ಉನ್ನತ ಸ್ಥಾನವನ್ನು ಅಲಂಕರಿಸುತ್ತಿದ್ದಾರೆ ಎಂದು ಬೆಂಗಳೂರು ಕೊಡವ ಸಮಾಜದ ಅಧ್ಯಕ್ಷ ಚಿರಿಯಪಂಡ ಸುರೇಶ್ ನಂಜಪ್ಪ ಹೇಳಿದರು.

ಕಾಕೋಟುಪರಂಬು ಕೈಲ್ ಮುಹೂರ್ತ ಸಂಘದ ೭೫ ನೇ ವರ್ಷದ ವಜ್ರ ಮಹೋತ್ಸವ ಸಮಾರೋಪ ಸಮಾರಂಭದಲ್ಲಿ ಮಾತನಾಡಿ ಕೃಷಿಯಲ್ಲಿ ಬದುಕು ಕಂಡು ಜೀವನ ಸಾಗಿಸುತ್ತಿದ್ದ ಹಲವರು ಇಂದು ಕಷ್ಟ ಎಂದು ಭಾವಿಸಿ ಕೃಷಿ ಭೂಮಿಯನ್ನು ಮಾರಾಟ ಮಾಡುತ್ತಿರುವುದು ಕಳವಳಕಾರಿ ಸಂಗತಿ. ಸ್ವ ಉದ್ಯೋಗ ರೂಪಿಸಿಕೊಂಡು ಉತ್ತಮ ಸ್ಥಾನಮಾನ ರೂಪಿಸಿಕೊಳ್ಳುವತ್ತ ಜನಾಂಗ ಬಾಂಧವರು ಮುಂದಾಗಬೇಕು ಎಂದು ಕರೆ ನೀಡಿದರು.

ಚೀಫ್ ಎಲೆಕ್ಟ್ರಿಕಲ್ ಇನ್ಸ್ಪೆಕ್ಟರ್ ತೀತಿರ ರೋಶನ್ ಅಪ್ಪಚ್ಚು ಮಾತನಾಡಿ, ತಮ್ಮ ಮಕ್ಕಳು ಇಂಜಿನಿಯರ್, ಡಾಕ್ಟರ್, ಲಾಯರ್ ಆಗಬೇಕು ಎನ್ನುವುದು ಹಲವರ ಕನಸಾಗಿದೆ. ಆದರೆ ಕ್ರೀಡಾಪಟುವಾಗಬೇಕು ಎಂದು ಕನಸು ಕಾಣಬೇಕು .ಕ್ರೀಡಾಕ್ಷೇತ್ರದಲ್ಲಿ ಉತ್ತಮ ಅವಕಾಶವಿದ್ದು ಕ್ರೀಡೆಗೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಪ್ರೋತ್ಸಾಹ ನೀಡುತ್ತದೆ. ಸಾಧನೆಗೆ ಗುರಿ ಮತ್ತು ಅಚಲವಾದ ಛಲ ಮುಖ್ಯ. ಗ್ರಾಮೀಣ ಕಲೆ, ಸಾಹಿತ್ಯ, ಸಂಸ್ಕೃತಿ ಎಂದಿಗೂ ಮಾಸದೇ ಉಳಿವಿಗಾಗಿ ಪ್ರಯತ್ನ ಸಾಗಬೇಕು ಎಂದು ಹೇಳಿದರು.

ನೆಕ್ಟರ್ ಫ್ರೇಶ್ ಮತ್ತು ವೀರವ್ರತಂ ಫೌಂಡೇಶನ್‌ನ ಸಂಸ್ಥಾಪಕರು ಮತ್ತು ವ್ಯವಸ್ಥಾಪಕ ನಿರ್ದೇಶಕ ಕುಪ್ಪಂಡ ಛಾಯಾ ನಂಜಪ್ಪ ರಾಜಪ್ಪ ಮಾತನಾಡಿ. ಗ್ರಾಮಗಳಲ್ಲಿ ಒಗ್ಗಟ್ಟು ನೆಲೆ ನಿಲ್ಲಬೇಕಾದರೆ ರಾಜಕೀಯವನ್ನು ಬದಿಗೊತ್ತಿ ದೇಶದ ಯಾವುದೇ ಭಾಗ ಹಾಗೂ ವಿದೇಶದಲ್ಲಿ ನೆಲೆಕಂಡರೂ ನಾಡಿನ, ಜನಾಂಗದ ಆಚಾರ ವಿಚಾರ ಮತ್ತು ಸಂಸ್ಕೃತಿಯನ್ನು ಮೈಗೂಡಿಸಿಕೊಳ್ಳಬೇಕು. ಧರ್ಮವನ್ನು ನಾವು ಕಾಪಾಡಿದಲ್ಲಿ ಧರ್ಮವು ನಮ್ಮನ್ನು ಕಾಪಾಡುತ್ತದೆ ಎಂದು ಮನಗಾಣಬೇಕು. ಕಾಶ್ಮೀರಿ ಪಂಡಿತರ ಸ್ಥಿತಿಯನ್ನು ಅವಲೋಕಿಸಿದಲ್ಲಿ ತಮ್ಮದೇ ನೆಲದಲ್ಲಿ ಅವರು ಅನ್ಯರಾದರು. ಅವರ ಸ್ಥಿತಿ ನಮಗೆ ಬಾರದಂತೆ ಎಚ್ಚರವಹಿಸುವುದು ಸೂಕ್ತ. ನಾಡು ನುಡಿ ಸಂಸ್ಕೃತಿ ಮರೆತು ಜೀವಿಸಿದ ವ್ಯಕ್ತಿ ಅನ್ಯನಾಗುತ್ತಾನೆ. ಕೊಡಗಿನ ಕೃಷಿಕ ಸಮೂದಾಯ ಕಾಫಿ, ಕರಿಮೆಣಸು, ಭತ್ತ ಬೆಳೆಗಳನ್ನು ನಂಬಿಕೊAಡು ಜೀವನ ಮಾಡದೇ ಪರ್ಯಾಯ ಬೆಳೆಗಳ ಬಗ್ಗೆ ಗಮನಹರಿಸಿದರೆ ಜೀವನ ಮಟ್ಟವನ್ನು ಸುಧಾರಿಸಿಕೊಳ್ಳಬಹುದು ಎಂದು ಹೇಳಿದರು.

ಕೈಲ್ ಮುಹೂರ್ತ ಸಂಘ ಕಾಕೋಟುಪರಂಬು ವಜ್ರ ಮಹೋತ್ಸವ ಸಮಿತಿ ಅಧ್ಯಕ್ಷ ಮಂಡೇಟಿರ ಎಂ. ಸುರೇಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಕೊಡವ ಜನಾಂಗಕ್ಕೆ ಅತಿ ವಿರಳ ಹಬ್ಬಗಳ ಆಚರಣೆಯಾದರೂ ಪೂರ್ವಜರು ಎಲ್ಲಾ ಆಚರಣೆಗೆ ಅರ್ಥ ಕಲ್ಪಿಸಿದ್ದಾರೆ. ಕೈಲ್ ಮುಹೂರ್ತ ಹಬ್ಬದ ಆಚರಣೆ ವಿಶೇಷ ವಾಗಿ ಆಚರಣೆಯಾಗಬೇಕು ಎಂಬ ಪರಿಕಲ್ಪನೆಯೊಂದಿಗೆ ಸಮೂದಾಯ ಆಟೋಟ ಸ್ಪರ್ಧೆ ಆಚರಣೆಗೆ ಅಣಿಯಾದರು. ತರುವಾಯ ಕೈಲ್ ಮುಹೂರ್ತ ಹಬ್ಬ ಅಂಗವಾಗಿ ಆಟೋಟ ಸ್ಪರ್ಧೆಗಳನ್ನು ನಡೆಸಿಕೊಂಡು ಬರಲಾಗುತ್ತಿದೆ. ಸಂಘ ಇಂದು ವಜ್ರ ಮಹೋತ್ಸವ ಆಚರಿಸುತ್ತಿದೆ. ಮೂರು ದಿನಗಳಲ್ಲಿ ಸುತ್ತಮುತ್ತಲಿನ ನಾಲ್ಕೇರಿ, ಕಡಂಗಮರೂರು, ಕುಂಜಿಲಗೇರಿ, ಬೆಳ್ಳುಮಾಡು, ಅರಮೇರಿ, ಮತ್ತು ಮೈತಾಡಿ ಗ್ರಾಮಗಳ ಗ್ರಾಮಸ್ಥರಿಗಾಗಿ ಸಂಘವು ಗ್ರಾಮೀಣ ಕ್ರೀಡಾ ಸ್ಪರ್ಧೆಗಳನ್ನು ಆಯೋಜಿಸಿ ಯಶಸ್ಸು ಕಂಡಿದೆ. ಸುದೀರ್ಘ ಕಾಲದ ಸಂಘ ಸಮಿತಿಯ ಕನಸು ನನಸಾಗಿದೆ. ದಾನಿಗಳು, ಸಮಿತಿ ಸದಸ್ಯರ ಹಾಗೂ ಗ್ರಾಮಸ್ಥರ ಸಹಕಾರಕ್ಕೆ ಸಂಘ ಚಿರಋಣಿಯಾಗಿದೆ ಎಂದು ಹೇಳಿದರು.

ವೇದಿಕೆಯಲ್ಲಿ ಕ್ಯಾಪ್ಟನ್ ಬಿದ್ದಂಡ ನಾಣಿ ದೇವಯ್ಯ, ಕಬ್ಬಚ್ಚೀರ ರಶ್ಮಿ ಕಾರ್ಯಪ್ಪ ಉಪಸ್ಥಿತರಿದ್ದರು. ಸಂಘದಲ್ಲಿ ಸುದೀರ್ಘ ಕಾಲ ಸೇವೆ ಸಲ್ಲಿಸಿದ ಮಹನೀಯರನ್ನು ಗುರುತಿಸಿ ಸನ್ಮಾನಿಸಲಾಯಿತು. ಕಾಕೋಟುಪರಂಬು ಕೈಲ್ ಮುಹೂರ್ತ ಸಂಘದ ವಜ್ರ ಮಹೋತ್ಸವ ಸಮಿತಿ ಕಾರ್ಯದರ್ಶಿ ಅಪ್ಪಚಂಗಡ ಪ್ರಕಾಶ್ ಪೂಣಚ್ಚ ಸ್ವಾಗತಿಸಿ, ಮಾಳೇಟಿರ ಶ್ರೀನಿವಾಸ್ ನಿರೂಪಿಸಿ, ಕಲ್ಪನಾ ವಂದಿಸಿದರು.

ಪುರುಷರ ವಿಭಾಗದ ಹಗ್ಗಜಗ್ಗಾಟದಲ್ಲಿ ಟೀಂ ನಾಲ್ಕೇರಿ ತಂಡವು ಕುಂಜಿಲಗೇರಿ ತಂಡವನ್ನು ಸೋಲಿಸಿತು. ಮಹಿಳೆಯರ ವಿಭಾಗದ ಹಗ್ಗಜಗ್ಗಾಟದಲ್ಲಿ ಮೈತಾಡಿ ತಂಡ ಅರಮೇರಿ ತಂಡವನ್ನು ಪರಾಭಾವಗೊಳಿಸಿತು. ಮಹಿಳೆಯರ ಥ್ರೋಬಾಲ್ ಪಂದ್ಯಾಟದಲ್ಲಿ ಕುಂಜಿಲಗೇರಿ ಎ ತಂಡ ಕುಂಜಿಲಗೇರಿ ಡೈನಮಿಕ್ ತಂಡವನ್ನು ಸೋಲಿಸಿತು. ಸುಮಾರು ೧೦ಕ್ಕೂ ಹೆಚ್ಚು ತಂಡಗಳು ಭಾಗವಹಿಸಿದ್ದವು. ಪುರುಷರ ಸ್ಲೋ ಬೈಕ್ ರೇಸ್‌ನಲ್ಲಿ ಮುಂಡಚಾಡಿರ ಮಂಜು ಪ್ರಥಮ, ಮಂಡೇಪAಡ ಶರತ್ ದ್ವಿತೀಯ, ಮುಂಡಚಾಡಿರ ಭರತ್ ತೃತೀಯ ಸ್ಥಾನ ಪಡೆದುಕೊಂಡರು.

ತೆAಗಿನಕಾಯಿ ಗುಂಡು ಹೊಡೆಯುವ ಸ್ಪರ್ಧೆಯಲ್ಲಿ .೨೨ ರೈಫಲ್ ವಿಭಾಗದಲ್ಲಿ ಹಾಸನದ ಚರಂತ್ ಡಿ ಪ್ರಥಮ, ನಾಪೋಕ್ಲುವಿನ ಕೇಲೇಟಿರ ಪವಿತ್ ಪೂವಯ್ಯ ದ್ವಿತೀಯ, ಮೂರ್ನಾಡುವಿನ ಬಡುವಂಡ ದೇವಯ್ಯ ತೃತೀಯ. ಏರ್ ರೈಫಲ್ ವಿಭಾಗದಲ್ಲಿ ಪುತ್ತರಿರ ನಂಜಪ್ಪ, ಬಡುವಂಡ ಧನು, ಚೆಪ್ಪುಡಿರ ಉತ್ತಯ್ಯ, ೧೨ ಬೋರ್ ವಿಭಾಗದಲ್ಲಿ ಕಲ್ಲೇಂಗಡ ನವೀನ್, ಉಕ್ಕೇರಿಯಂಡ ಸುಧೀರ್, ದೇಯಂಡ ಅಯ್ಯಪ್ಪ ಅವರುಗಳು ಬಹುಮಾನ ಪಡೆದುಕೊಂಡರು.