ವೀರಾಜಪೇಟೆ, ನ. ೧೮: ನಗರದಲ್ಲಿ ಗೋಮಾಂಸ ಮಾರಾಟಕ್ಕೆ ಯತ್ನಿಸುತಿದ್ದ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ನಗರದ ಸುಣ್ಣದ ಬೀದಿಯಲ್ಲಿ ಗೋಮಾಂಸ ಮಾರಾಟ ಮಾಡಲು ಯತ್ನಿಸುತ್ತಿದ್ದ ವೇಳೆ ಪೊಲೀಸರಿಗೆ ಮಾಹಿತಿ ದೊರೆತ ಹಿನ್ನೆಲೆ ದಾಳಿ ನಡೆಸಿ ೯೪ ಕೆ.ಜಿ. ಗೋಮಾಂಸ ವಶಕ್ಕೆ ಪಡೆದಿದ್ದಾರೆ.
ವೀರಾಜಪೇಟೆಯ ವಿಜಯ ನಗರದ ನಿವಾಸಿ ಎಂ.ಎA ಮುಸ್ತಾಫ (೪೨) ಎಂ.ಎಸ್. ತನ್ವೀರ್ (೪೧) ಗೋಮಾಂಸ ಮಾರಾಟ ಯತ್ನಿಸಿ ಬಂಧನವಾದ ವ್ಯಕ್ತಿಗಳು. ಗೋಮಾಂಸ ಮಾರಾಟ ಮಾಡುತಿದ್ದ ಈರ್ವರನ್ನು ಬಂದಿಸಿಧ ಪೊಲೀಸರು ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.
ವೀರಾಜಪೇಟೆ ಉಪ ವಿಭಾಗದ ಪ್ರಬಾರ ಉಪ ಅಧಿಕ್ಷಕ ಪಿ. ಚಂದ್ರಶೇಖರ್ ನಿರ್ದೇಶನದ ಮೇರೆಗೆ ವೀರಾಜಪೇಟೆ ವೃತ್ತ ನೀರಿಕ್ಷಕ ಪಿ.ಅನೂಪ್ ಮಾದಪ್ಪ ಮಾರ್ಗದರ್ಶನದಲ್ಲಿ ವೀರಾಜಪೇಟೆ ನಗರ ಠಾಣೆಯ ಪಿ.ಎಸ್.ಐ. ಹೆಚ್.ಎಸ್. ಪ್ರಮೋದ್, ಅಪರಾಧ ವಿಭಾಗದ ಪಿ.ಎಸ್.ಐ. ಟಿ.ಎಂ. ಕಾವೇರಪ್ಪ ಹಾಗೂ ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.ಸೋಮವಾರಪೇಟೆ,ನ.೧೮: ಅಕ್ರಮವಾಗಿ ಗೋವುಗಳನ್ನು ಸಾಗಾಟ ಮಾಡುತ್ತಿರುವ ಬಗ್ಗೆ ಹಿಂದೂ ಜಾಗರಣಾ ವೇದಿಕೆಯ ಕಾರ್ಯಕರ್ತರು ನೀಡಿದ ಖಚಿತ ಮಾಹಿತಿಯನ್ನಾಧರಿಸಿ ಸೋಮವಾರಪೇಟೆ ಪೋಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಎರಡು ಗೋವುಗಳು ಸೇರಿದಂತೆ ವಾಹನ ಸಹಿತ ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ.
ಪಟ್ಟಣದ ಆಲೇಕಟ್ಟೆ ಜಂಕ್ಷನ್ ಬಳಿ ಮಾಂಸಕ್ಕಾಗಿ ಅಕ್ರಮವಾಗಿ ಎರಡು ಗೋವುಗಳನ್ನು ಪಿಕ್ ವಾಹನ (ಏಂ ೧೨ ಅ ೦೨೯೨) ರಲ್ಲಿ ಸಾಗಾಟ ಮಾಡುತ್ತಿದ್ದ ಆರೋಪಿ, ಗರ್ವಾಲೆ ಗ್ರಾಮದ ಬೆಳ್ಳಿಯಪ್ಪ ಎಂಬಾತನನ್ನು ಪೋಲೀಸರು ವಶಕ್ಕೆ ಪಡೆದಿದ್ದಾರೆ. ಬೆಳ್ಳಿಯಪ್ಪನ ವಿರುದ್ದ ಮೊಕದ್ದಮೆ ದಾಖಲಿಸಿಕೊಂಡ ಪೊಲೀಸರು, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ರಕ್ಷಿಸಲ್ಪಟ್ಟ ಗೋವುಗಳನ್ನು ಮೈಸೂರಿನ ಗೋ ಶಾಲೆಗೆ ಸಾಗಿಸಲಾಗಿದೆ.