ಮಡಿಕೇರಿ, ನ. ೧೭: ತಲಕಾವೇರಿ ಭಾಗಮಂಡಲ ದೇವಾಲಯ ಸಮಿತಿ ವತಿಯಿಂದ ಮಾರ್ಚ್ ತಿಂಗಳಿನಲ್ಲಿ ಕರೆದಿದ್ದ ತಲಕಾವೇರಿಯಲ್ಲಿನ ವಾಹನ ಪಾರ್ಕಿಂಗ್ ಟೆಂಡರ್‌ಗೆ ರಾಜ್ಯ ಉಚ್ಚ ನ್ಯಾಯಾಲಯ ತಡೆಯಾಜ್ಞೆ ನೀಡಿದೆ.

ಕಳೆದ ಹಲವು ವರ್ಷಗಳಿಂದ ವಾಹನ ಪಾರ್ಕಿಂಗ್ ಶುಲ್ಕ ಸಂಗ್ರಹಾತಿಯನ್ನು ಭಾಗಮಂಡಲ ಗ್ರಾಮ ಪಂಚಾಯಿತಿ ವತಿಯಿಂದ ಮಾಡಿಕೊಂಡು ಬರಲಾಗುತಿತ್ತು. ಈ ನಡುವೆ ೨೦೧೭ ರಲ್ಲಿ ದೇವಾಲಯ ಸಮಿತಿಯೆ ಪಾರ್ಕಿಂಗ್ ಶುಲ್ಕ ಸಂಗ್ರಹ ಮಾಡಬೇಕು; ಪಂಚಾಯಿತಿಯಿAದ ಮಾಡುವಂತಿಲ್ಲ ಎಂಬ ವಿವಾದ ಸೃಷ್ಟಿಯಾಗಿತ್ತು. ಈ ವೇಳೆ ಗ್ರಾಮ ಪಂಚಾಯಿತಿಯಿAದಲೇ ಪಾರ್ಕಿಂಗ್ ಶುಲ್ಕ ಸಂಗ್ರಹಾತಿಗೆ ಅವಕಾಶ ನೀಡಬೇಕೆಂದು ಪಂಚಾಯಿತಿ ವತಿಯಿಂದ ನ್ಯಾಯಾಲಯದ ಮೊರೆ ಹೋಗಲಾಗಿತ್ತು. ಈ ಸಂಬAಧ ವಿಚಾರಣೆ ನಡೆಸಿದ ನ್ಯಾಯಾಲಯ ಪಂಚಾಯಿತಿಯಿAದ ಸಲ್ಲಿಸಲಾದ ಅರ್ಜಿಯಲ್ಲಿ ಆಗಿನ ಪಂಚಾಯಿತಿ ಅಧ್ಯಕ್ಷರ ಸಹಿ ಮಾತ್ರ ಇದ್ದು, ಪಿಡಿಒ ಅವರ ಸಹಿ ಇಲ್ಲ ಎಂಬ ಕಾರಣಕ್ಕಾಗಿ ೨೦೨೪ರ ಡಿಸೆಂಬರ್‌ನಲ್ಲಿ ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿತ್ತು. ಇದಾದ ಬಳಿಕ ಪ್ರಸಕ್ತ ಸಾಲಿನ ಮಾರ್ಚ್ ತಿಂಗಳಿನಲ್ಲಿ ಜಿಲ್ಲಾಧಿಕಾರಿಗಳ ಸೂಚನೆಯಂತೆ ತಲಕಾವೇರಿ ಭಾಗಮಂಡಲ ದೇವಾಲಯ ಸಮಿತಿ ವಾಹನ ಪಾರ್ಕಿಂಗ್‌ಗೆ ಟೆಂಡರ್ ಕರೆದಿತ್ತು. ಈ ಹಿನ್ನೆಲೆಯಲ್ಲಿ ಇದರ ವಿರುದ್ಧ ಭಾಗಮಂಡಲ ಪಂಚಾಯಿತಿ ವತಿಯಿಂದ ರಾಜ್ಯ ಉಚ್ಚ ನ್ಯಾಯಾಲಯದ ಮೆಟ್ಟಿಲೇರಲಾಗಿತ್ತು. ವಿಚಾರಣೆ ನಡೆಸಿದ ನ್ಯಾಯಾಲಯ ಇದೀಗ ದೇವಾಲಯ ಸಮಿತಿ ಕರೆದಿದ್ದ ಟೆಂಡರ್‌ಗೆ ತಡೆಯಾಜ್ಞೆ ನೀಡಿದ್ದು,ಈ ವಿವಾದಕ್ಕೆ ಸಂಬAಧಿಸಿದAತೆ ಪರಿಶೀಲನೆಗೆ ಸಮಿತಿಯೊಂದನ್ನು ರಚಿಸುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ನಿರ್ದೇಶನ ನೀಡಿದೆ ಎಂದು ಭಾಗಮಂಡಲ ಗ್ರಾಮ ಪಂಚಾಯ್ತಿ ಅಧ್ಯಕ್ಷ ಕಾಳನ ರವಿ ತಿಳಿಸಿದ್ದಾರೆ.