ಕೂಡಿಗೆ, ನ. ೧೭: ಕೂಡಿಗೆಯ ಪವಿತ್ರ ಕಾವೇರಿ- ಹಾರಂಗಿ ನದಿ ಸಂಗಮ ಕ್ಷೇತ್ರವಾದ ಕೂಡಿಗೆಯ ಟಾಟಾ ಕಾಫಿ ನಿಯಮಿತ ಕುಶಾಲನಗರ ಕಾಫಿ ಸಂಸ್ಕರಣಾ ಕೇಂದ್ರದ ವ್ಯಾಪ್ತಿಯಲ್ಲಿರುವ ಶ್ರೀ ಉದ್ಭವ ಸುಬ್ರಹ್ಮಣ್ಯ ಸ್ವಾಮಿಯ ೫೭ನೇ ವಾರ್ಷಿಕ ಮಹಾ ರಥೋತ್ಸವವು ತಾ.೨೬ ರಂದು ನಡೆಯಲಿದೆ.

ರಥೋತ್ಸವದ ಅಂಗವಾಗಿ ತಾ.೨೫ ರಂದು ಬೆಳಿಗ್ಗೆ ಪುಣ್ಯಾಹ ಪಂಚಗ್ರವಶುಧ್ಧಿ ಅಂಕುರಾರ್ಪಣ, ಧ್ವಜಾರೋಹಣ, ಗಣಹೋಮ,ಹಾಗೂ ಸುಬ್ರಹ್ಮಣ್ಯ ಹೋಮ ನಡೆದು ಪೂರ್ಣಾಹುತಿ, ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ ನಡೆಯಲಿದೆ.

ರಾತ್ರಿ ೭ ಗಂಟೆಗೆ ಮಹಾಪೂಜೆ, ಅಷ್ಠಾವಧಾನ ಸೇವೆ, ಮಹಾಮಂಗಳಾರತಿ ರಾಜ ಬೀದಿಯಲ್ಲಿ ಪಲ್ಲಕ್ಕಿ ಉತ್ಸವ ನಡೆಯಲಿದೆ .

ತಾ.೨೬ ರಂದು ಚಂಪಾ ಷಷ್ಠಿ ಅಂಗವಾಗಿ ಶ್ರೀ ಉದ್ಭವ ಸುಬ್ರಹ್ಮಣ್ಯ ಸ್ವಾಮಿ ಸನ್ನಿಧಿಯಲ್ಲಿ ಬೆಳಿಗ್ಗೆ ೭ ಗಂಟೆಗೆ ಅಭಿಷೇಕ ಮಹಾಪೂಜೆ, ಮಹಾಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ ನಡೆದು ಮಧ್ಯಾಹ್ನ ೧೧-೩೦. ಕ್ಕೆ ಶ್ರೀ ಸ್ವಾಮಿ ಸನ್ನಿಧಿಯಲ್ಲಿ ಧಿಗ್ಬಲಿ, ರಥ ಬಲಿ, ರಥ ಪೂಜೆ, ೧೨. ಗಂಟೆಗೆ ಮಹಾ ರಥೋತ್ಸವ ನಡೆಯಲಿದೆ. ನಂತರ ರಥೋತ್ಸವಕ್ಕೆ ಆಗಮಿಸಿದ. ಸಾವಿರಾರು ಭಕ್ತರಿಗೆ ಅನ್ನಸಂತರ್ಪಣೆಯ ಕಾರ್ಯ ಜರುಗಲಿದೆ ಎಂದು ದೇವಾಲಯ ಸಮಿತಿ ಪ್ರಕಟಣೆ ತಿಳಿಸಿದೆ.