ಮಡಿಕೇರಿ, ನ. ೧೬: ಒಡಿಶಾ ರಾಜ್ಯದ ರೂರ್ಕೆಲಾದಲ್ಲಿ ನಡೆದ ಏಕಲವ್ಯ ಮಾದರಿ ವಸತಿ ಶಾಲೆಗಳ ೧೪ ವರ್ಷದೊಳಗಿನ ರಾಷ್ಟಿçÃಯ ಏರ್ ರೈಫಲ್ ೧೦ ಮೀ ಶೂಟಿಂಗ್ ಸ್ಪರ್ಧೆಯಲ್ಲಿ ಪೊನ್ನೀರ ಉದಾಂತ್ ಉತ್ತಯ್ಯ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾನೆ. ಈ ಮೂಲಕ ಈ ಸಾಧನೆ ಮಾಡಿದ ಕೊಡಗಿನ ಪ್ರಥಮ ಬಾಲಕ ಎಂಬ ಇತಿಹಾಸವನ್ನೂ ನಿರ್ಮಿಸಿದ್ದಾನೆ. ನವೆಂಬರ್ ೧೦ ರಿಂದ ೧೫ ರವರೆಗೆ ನಡೆದ ಸ್ಪರ್ಧೆಯಲ್ಲಿ ವಿವಿಧ ರಾಜ್ಯ ಗಳ ೫೦ಕ್ಕೂ ಅಧಿಕ ಸ್ಪರ್ಧಿಗಳು ಭಾಗವಹಿಸಿದ್ದರು. ರಾಜ್ಯಮಟ್ಟದ ಸ್ಪರ್ಧೆ ಯಲ್ಲಿ ಪ್ರಥಮ ಸ್ಥಾನ ಪಡೆದ ಉದಾಂತ್ ಉತ್ತಯ್ಯ ರಾಜ್ಯದ ಏಕೈಕ ಶೂಟಿಂಗ್ ಸ್ಪರ್ಧಿಯಾಗಿ ರಾಷ್ಟçಮಟ್ಟಕ್ಕೆ ಆಯ್ಕೆಯಾಗಿದ್ದ. ಪೊನ್ನೀರ ಉದಾಂತ್ ಉತ್ತಯ್ಯ ೪ಏಳನೇ ಪುಟಕ್ಕೆ ಪೊನ್ನೀರ ಮೋಹನ್-ಪ್ರೇಮಿ ದಂಪತಿಯ ಪುತ್ರನಾಗಿದ್ದು,
ಬಾಳುಗೋಡು ಏಕಲವ್ಯ ವಸತಿ ಶಾಲೆಯಲ್ಲಿ ೮ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾನೆ. ಉದಾಂತ್ ಜೊತೆ ಬಾಳುಗೋಡು ಏಕಲವ್ಯ ಶಾಲೆಯ ದೈಹಿಕ ಶಿಕ್ಷಕ ಗಂಗಾಧರ್ ತೆರಳಿದ್ದರು. ಉದಾಂತ್ ಗೆ ತಂದೆ ಮೋಹನ್ ಅವರೇ ಶೂಟಿಂಗ್ ತರಬೇತಿ ನೀಡಿದ್ದು ಈ ಹಿಂದೆ ಜಿಲ್ಲೆಯ ವಿವಿಧೆಡೆ ನಡೆದ ಶೂಟಿಂಗ್ ಸ್ಪರ್ಧೆಯಲ್ಲೂ ಬಹುಮಾನ ಲಭಿಸಿತ್ತು.