ಸೋಮವಾರಪೇಟೆ, ನ. ೧೬: ಕಳ್ಳತನ ಪ್ರಕರಣ ವೊಂದರಲ್ಲಿ ನ್ಯಾಯಾಂಗ ಬಂಧನಕ್ಕೆ ಒಳಗಾಗಿ ಜಾಮೀನಿನ ಮೇಲೆ ಹೊರಬಂದಿದ್ದ ಆರೋಪಿಯೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಿನ್ನೆ ನಡೆದಿದೆ.
ಇತ್ತೀಚೆಗೆ ಕಾಜೂರಿನಲ್ಲಿ ನಡೆದ ಕರಿಮೆಣಸು ಕಳವು ಪ್ರಕರಣದಲ್ಲಿ ಸಹಚರರೊಂದಿಗೆ ಜೈಲು ಸೇರಿದ್ದ ಕಿಬ್ಬೆಟ್ಟ ಅಯ್ಯಪ್ಪ ಕಾಲೋನಿಯ ಕೀರ್ತಿ (೨೬) ಎಂಬಾತ ಜಾಮೀನಿನ ಮೇಲೆ ಹೊರಬಂದಿದ್ದು, ನಿನ್ನೆ ಮಡಿಕೇರಿ ತಾಲೂಕಿನ ಬೋಯಿಕೇರಿ-ಸಿಂಕೋನದಲ್ಲಿರುವ ದೇವಾಲಯ ಸಮೀಪದ ಕಾಫಿ ತೋಟದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.ಜೈಲಿನಿAದ ಹೊರ ಬಂದ ನಂತರ ಪತ್ನಿಯನ್ನು ತನ್ನ ಮನೆಗೆ ಆಹ್ವಾನಿಸಿದ್ದು, ಇದಕ್ಕೆ ಪತ್ನಿ ಒಪ್ಪದೇ ಇದ್ದುದರಿಂದ ಮಾನಸಿಕವಾಗಿ ನೊಂದಿದ್ದ ಎನ್ನಲಾಗಿದೆ. ಇದರೊಂದಿಗೆ ಸೋಮವಾರಪೇಟೆ ಸೇರಿದಂತೆ ಜಿಲ್ಲೆಯ ವಿವಿಧ ಠಾಣೆಗಳಲ್ಲಿ ಕೀರ್ತಿ ವಿರುದ್ದ ಕಳ್ಳತನ, ದರೋಡೆ ಪ್ರಕರಣಗಳೂ ದಾಖಲಾಗಿದ್ದು, ವಿಚಾರಣೆಯನ್ನು ಎದುರಿಸುತ್ತಿದ್ದ. ನಿನ್ನೆ ೪ಏಳನೇ ಪುಟಕ್ಕೆ ಸೋಮವಾರಪೇಟೆಯಲ್ಲಿದ್ದ ಪತ್ನಿಗೆ ವೀಡಿಯೋ ಕರೆ ಮಾಡಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ಈ ಬಗ್ಗೆ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತದೇಹವನ್ನು ಜಿಲ್ಲಾಸ್ಪತ್ರೆಗೆ ರವಾನಿಸಿ ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬಸ್ಥರಿಗೆ ಒಪ್ಪಿಸಲಾಯಿತು.